Category: ಜಿಲ್ಲಾ‌ಸುದ್ದಿ

  • ಹೆತ್ತ ತಾಯಿ ಸತ್ತರೂ ಅಂತ್ಯಕ್ರಿಯೆಗೆ ಬರದ ಮಕ್ಕಳು… ಇದು ಕೇವಲ ಒಂದು ಸುದ್ದಿ ಅಲ್ಲ ನಮ್ಮ ಸಮಾಜದ ಹೃದಯವನ್ನೇ ಕದಿಯುವ ನಿಜವಾದ ಕಹಿ ಘಟನೆ

    ಹೆತ್ತ ತಾಯಿ ಸತ್ತರೂ ಅಂತ್ಯಕ್ರಿಯೆಗೆ ಬರದ ಮಕ್ಕಳು… ಇದು ಕೇವಲ ಒಂದು ಸುದ್ದಿ ಅಲ್ಲ ನಮ್ಮ ಸಮಾಜದ ಹೃದಯವನ್ನೇ ಕದಿಯುವ ನಿಜವಾದ ಕಹಿ ಘಟನೆ

    ಬೆಳಗಾವಿ: ಜಿಲ್ಲೆಯ ಶಾಹೂನಗರದಲ್ಲಿ ನಡೆದ ಈ ಅಮಾನವೀಯ ಘಟನೆ ಮಾನವೀಯತೆಯೇ ಸತ್ತುಹೋಗಿತೇ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ ಒಂಬತ್ತು ತಿಂಗಳು ಹೊತ್ತು ಜೀವನವನ್ನೇ ಅರ್ಪಿಸಿ ಬೆಳೆಸಿದ ತಾಯಿಯ ಅಂತಿಮ ಕ್ಷಣದಲ್ಲೂ ಜೊತೆಗಿರಲಿಲ್ಲ ಅಂದರೆ ಅದು ಕೇವಲ ನಿರ್ಲಕ್ಷ್ಯವಲ್ಲ ಮನುಷ್ಯತ್ವದ ಸೋಲು.

    ತಾಯಿ ಮೃತಪಟ್ಟ ಸುದ್ದಿ ತಿಳಿಸಿದರೂ “ನೀವೇ ಸುಡಿ” ಎಂದು ಹೇಳಿ ದೂರವಿರುವ ಮಕ್ಕಳು… ಈ ಮಾತುಗಳು ಕೇವಲ ಕಿವಿಗೆ ಬೀಳುವುದಿಲ್ಲ, ಮನಸ್ಸನ್ನೇ ಚೂರುಚೂರು ಮಾಡುತ್ತವೆ. ಹಣ ಸ್ವಾರ್ಥ ಬದುಕಿನ ಓಟ ಇವುಗಳ ಮಧ್ಯೆ ನಾವು ನಮ್ಮ ಬೇರುಗಳನ್ನು ಮರೆಯುತ್ತಿದ್ದೇವೆ ಅನ್ನೋದಕ್ಕೆ ಇದು ನಿಜವಾದ ಉದಾಹರಣೆ

    ಅದೇ ಸಮಯದಲ್ಲಿ ಸಮಾಜದಲ್ಲೀಗೂ ಮಾನವೀಯತೆ ಜೀವಂತವಾಗಿದೆ ಅನ್ನೋದಕ್ಕೆ ಸಾಕ್ಷಿ ಕೆಲವರು ಸಮಾಜಸೇವಕರು ಮುಂದಾಗಿ ಶಂಕರ್ ಪಾಟೀಲ್ ಅವರ ನೇತೃತ್ವದಲ್ಲಿ ಆ ತಾಯಿಗೆ ಗೌರವಯುತ ಅಂತ್ಯಕ್ರಿಯೆ ನೆರವೇರಿಸಿದರು. ಸಂಬಂಧವಿಲ್ಲದವರು ಕರ್ತವ್ಯ ನಿರ್ವಹಿಸಿದರೆ ಸಂಬಂಧ ಇದ್ದವರು ದೂರ ನಿಂತದ್ದು ಎಷ್ಟು ವ್ಯಥೆಯ ವಿಚಾರ.

    ತಾಯಿ ದೇವರು ಅಂತ ಹೇಳುವ ನಾವು, ಆ ದೇವರನ್ನು ಬದುಕಿರುವಾಗಲೇ ಮರೆತುಬಿಟ್ಟರೆ… ಸಮಾಜ ಯಾವ ದಿಕ್ಕಿಗೆ ಹೋಗುತ್ತಿದೆ ಅನ್ನೋದನ್ನು ಯೋಚಿಸುವ ಸಮಯ ಬಂದಿದೆ.

  • KSRTC ಬಸ್ ಪಲ್ಟಿ!  ಕೂದಲೆಳೆಯ ಅಂತರದಲ್ಲಿ ಪಾರಾದ 40 ಪ್ರಯಾಣಿಕರು…!

    KSRTC ಬಸ್ ಪಲ್ಟಿ! ಕೂದಲೆಳೆಯ ಅಂತರದಲ್ಲಿ ಪಾರಾದ 40 ಪ್ರಯಾಣಿಕರು…!

    ತುಮಕೂರು: ಗುಬ್ಬಿ ತಾಲೂಕಿನ ಕಳ್ಳಿಪಾಳ್ಯದ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಭಾರೀ ದುರಂತ ತಪ್ಪಿದೆ. ಬಸ್‌ನಲ್ಲಿ ಭರ್ತಿಯಾಗಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

    ತಿಪಟೂರು ಡಿಪೋಗೆ ಸೇರಿದ ಈ ಬಸ್ ಹೊಸದುರ್ಗದಿಂದ ಬೆಂಗಳೂರಿನ ಕಡೆಗೆ ತೆರಳುತ್ತಿತ್ತು. ಗುಬ್ಬಿ ಸಮೀಪದ ಕಳ್ಳಿಪಾಳ್ಯದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

    ಐದಾರು ಪ್ರಯಾಣಿಕರಿಗೆ ಗಂಭೀರ ಗಾಯ ಅಪಘಾತದಲ್ಲಿ ಐದಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 40ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಯಾಣಿಕರ ಪ್ರಕಾರ, ಬಸ್ ಅತಿ ವೇಗವಾಗಿ ಹೋಗುತ್ತಿದ್ದು, ಚಾಲಕನು ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಅಪಘಾತದ ಕಾರಣ ತನಿಖೆ ನಡೆಯುತ್ತಿದೆ. ಪೊಲೀಸರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಅಪಘಾತದಿಂದ ರಸ್ತೆ ಸಂಚಾರಕ್ಕೆ ಸ್ವಲ್ಪ ಸಮಯ ಅಡಚಣೆಯಾಗಿದ್ದು, ಪೊಲೀಸ್ ಮತ್ತು ರಸ್ತೆ ಸಾರಿಗೆ ಅಧಿಕಾರಿಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನವನ್ನ ವಾರಸುದಾರರಿಗೆ ಹಸ್ತಾಂತರ

    ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನವನ್ನ ವಾರಸುದಾರರಿಗೆ ಹಸ್ತಾಂತರ

    ಶಿರಸಿ: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಎನ್ನುವುದು ಅಪರೂಪವಾಗುತ್ತಿರುವಾಗ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ಸಿಬ್ಬಂದಿಗಳು ತಮಗೆ ಸಿಕ್ಕ ಬೆಲೆಬಾಳುವ ಚಿನ್ನವನ್ನು ವಾರಸುದಾರರಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಅಕ್ಷಯ ತೃತೀಯದ ಪ್ರಯುಕ್ತ ನಾಗವೇಣಿ ಗೌಡ ಅವರು ಶಿರಸಿಯ ಕಾಮಧೇನು ಜ್ಯುವೆಲರ್ಸ್‌ನಲ್ಲಿ 82,000 ರೂ. ಬೆಲೆಬಾಳುವ 5 ಗ್ರಾಂ ಚಿನ್ನದ ಗಟ್ಟಿಯನ್ನು ಖರೀದಿಸಿದ್ದರು. ಬಳಿಕ ಶಿರಸಿ ಕೆಎಚ್‌ಬಿ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅವರು, ಬಸ್ಸಿನಿಂದ ಇಳಿಯುವಾಗ ಆಕಸ್ಮಿಕವಾಗಿ ಚಿನ್ನವಿದ್ದ ಬ್ಯಾಗನ್ನು ಸೀಟಿನ ಮೇಲೆಯೇ ಮರೆತು ಹೋಗಿದ್ದರು.

    ಬಸ್ಸು ಸಂಚರಿಸುತ್ತಿದ್ದಾಗ ಬ್ಯಾಗ್ ಇರುವುದನ್ನು ಗಮನಿಸಿದ ನಿರ್ವಾಹಕರಾದ ರಮೇಶ್ ನಾಯ್ಕ್ ಹಾಗೂ ಚಾಲಕರಾದ ವೆಂಕಟರಮಣ ನಾಯ್ಕ್ ಮತ್ತು ಅವರು ತಕ್ಷಣ ಅದನ್ನು ಪರಿಶೀಲಿಸಿದ್ದಾರೆ. ಬ್ಯಾಗ್‌ನಲ್ಲಿ ಬೆಲೆಬಾಳುವ ಚಿನ್ನದ ಗಟ್ಟಿ ಇರುವುದನ್ನು ಕಂಡ ಸಿಬ್ಬಂದಿಗಳು, ಅದನ್ನು ಅತ್ಯಂತ ಜವಾಬ್ದಾರಿಯಿಂದ ಕಾಪಾಡಿ ಡಿಪೋಗೆ ತಂದಿದ್ದಾರೆ.

    ಶಿರಸಿ ಬಸ್ ಡಿಪೋದ ಟ್ರಾಫಿಕ್ ಸೂಪರ್ಡೆಂಟ್ ಮಹೇಶ್ ಜೋಗಳೇಕರ್ ಹಾಗೂ ನಿರೀಕ್ಷಕರಾದ ರಘುಪತಿ ನಾಯ್ಕ್ ಅವರ ಸಮಕ್ಷಮದಲ್ಲಿ, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಚಿನ್ನದ ಬ್ಯಾಗನ್ನು ವಾರಸುದಾರರಾದ ಶಿಕ್ಷಕಿ ನಾಗವೇಣಿ ಗೌಡ ಅವರಿಗೆ ಹಸ್ತಾಂತರಿಸಲಾಯಿತು.

    ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಪ್ರಾಮಾಣಿಕತೆಯಿಂದಾಗಿ ನನ್ನ ವಸ್ತು ಸುರಕ್ಷಿತವಾಗಿ ಮರಳಿ ಸಿಕ್ಕಿದೆ. ಇಂತಹ ಪ್ರಾಮಾಣಿಕ ಕೆಲಸ ನಿಜಕ್ಕೂ ಶ್ಲಾಘನೀಯ, ಎಂದು ಶಿಕ್ಷಕಿ ನಾಗವೇಣಿ ಗೌಡ ಅವರು ತಮ್ಮ ಕೃತಜ್ಞತೆ ಸಲ್ಲಿಸಿದರು.

    ಸಾರ್ವಜನಿಕರು ಸಾರಿಗೆ ಸಿಬ್ಬಂದಿಗಳ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮೇಲಿನ ನಂಬಿಕೆ ಈ ಘಟನೆಯಿಂದ ಮತ್ತಷ್ಟು ಹೆಚ್ಚಾದಂತಾಗಿದೆ

  • ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ ವಿಮಾನ : ಪ್ರಣಾಪಾಯದಿಂದ ಪಾರಾದ 40 ಪ್ರಯಾಣಿಕರು

    ಲ್ಯಾಂಡಿಂಗ್ ವೇಳೆ ತಪ್ಪಿದ ಭಾರೀ ದುರಂತ : 4 ಗಂಟೆ ಕಾಲ ಆಗಸದಲ್ಲೇ ಹಾರಾಡಿದ ವಿಮಾನ : ಪ್ರಣಾಪಾಯದಿಂದ ಪಾರಾದ 40 ಪ್ರಯಾಣಿಕರು

    ಹುಬ್ಬಳ್ಳಿ: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿದ ಘಟನೆ ನಡೆದಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡದೊಂದು ವಿಮಾನ ದುರಂತ ತಪ್ಪಿದೆ. ಹವಾಮಾನ ವೈಪರೀತ್ಯ ಹಾಗೂ ತಾಂತ್ರಿಕ ದೋಷದಿಂದಾಗಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ನಾಲ್ಕು ಗಂಟೆಗಳ ಕಾಲ ಸಾವಿನ ದವಡೆಯಲ್ಲಿ ಸಿಲುಕಿ, ಅಕ್ಷರಶಃ ನರಕ ದರ್ಶನ ಮಾಡಿದ್ದಾರೆ.

    ಘಟನೆಯ ವಿವರ:

    ಹೈದರಾಬಾದ್‌ನಿಂದ ಹೊರಟಿದ್ದ ಫ್ಲೈ 91 (Fly 91) ಏರ್‌ಲೈನ್ಸ್ ವಿಮಾನವು ಸಂಜೆ 4:30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಏಕಾಏಕಿ ಪೈಲಟ್ ನಿಯಂತ್ರಣ ತಪ್ಪಿದೆ. ಈ ವೇಳೆ ವಿಮಾನದೊಳಗೆ ಪ್ರಯಾಣಿಕರು ಜೀವ ಭಯದಿಂದ ಕೂಗಾಟ, ಚೀರಾಟ ನಡೆಸಿದ್ದಾರೆ.

    “ನಾವು ಬದುಕುತ್ತೇವೆಯೋ ಇಲ್ಲವೋ ಎಂಬ ಆತಂಕ ಎದುರಾಗಿತ್ತು. ವಿಮಾನ ಕಂಟ್ರೋಲ್ ತಪ್ಪಿದಾಗ ಎಲ್ಲರೂ ಕಣ್ಣೀರು ಹಾಕುತ್ತಾ ದೇವರನ್ನು ಪ್ರಾರ್ಥಿಸುತ್ತಿದ್ದರು,” ಎಂದು ಪ್ರಯಾಣಿಕರು ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

    4 ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಟ:

    ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಮಾನವು ಸತತ ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಹಾರಾಟ ನಡೆಸಿದೆ. ಈ ಅವಧಿಯಲ್ಲಿ ವಿಮಾನವು ಈ ಕೆಳಗಿನ ಜಿಲ್ಲೆಗಳ ಮೇಲೆ ಸುತ್ತು ಹೊಡೆದಿದೆ:

    ಕೊನೆಗೂ ಹುಬ್ಬಳ್ಳಿಯಲ್ಲಿ ಹವಾಮಾನ ಸಹಕರಿಸದ ಕಾರಣ ಮತ್ತು ತಾಂತ್ರಿಕ ದೋಷದ ಭೀತಿಯಿಂದಾಗಿ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಅದೃಷ್ಟವಶಾತ್ ರಾತ್ರಿ ವೇಳೆ ಬೆಂಗಳೂರಿನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಪೋಕ್ಸೋ ಕೇಸ್ ಬೆನ್ನಲ್ಲೇ ಯುವಕನ ದುರಂತ ಅಂತ್ಯ! ಪ್ರೀತಿ, ಸಾವು ಮತ್ತು ಅನುಮಾನದ ಸುತ್ತ ಒಂದು ವರದಿ!

    ಪೋಕ್ಸೋ ಕೇಸ್ ಬೆನ್ನಲ್ಲೇ ಯುವಕನ ದುರಂತ ಅಂತ್ಯ! ಪ್ರೀತಿ, ಸಾವು ಮತ್ತು ಅನುಮಾನದ ಸುತ್ತ ಒಂದು ವರದಿ!

    1. ಕಲಬುರಗಿ: ಪ್ರೀತಿ ಎಂಬ ಎರಡಕ್ಷರದ ಮೋಹಕ್ಕೆ ಬಿದ್ದು ಅಪ್ರಾಪ್ತೆಯನ್ನು ವಿವಾಹವಾಗಿದ್ದ ಯುವಕನೊಬ್ಬ, ಈಗ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪೋಕ್ಸೋ ಪ್ರಕರಣದ ಸುಳಿಯಲ್ಲಿ ಸಿಲುಕಿ ಜೈಲು ವಾಸ ಅನುಭವಿಸಿ ಹೊರಬಂದಿದ್ದ 26 ವರ್ಷದ ರೇವಣಸಿದ್ದಪ್ಪ ಎಂಬಾತನೇ ಈಗ ಜೀವಾಂತ್ಯ ಕಂಡುಕೊಂಡ ದುರ್ದೈವಿ.

      ಘಟನೆಯ ಹಿನ್ನೆಲೆ ಏನು?

      ಮೃತ ರೇವಣಸಿದ್ದಪ್ಪ ಕಳೆದ ಕೆಲವು ಸಮಯದ ಹಿಂದೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ವಿಷಯ ತಿಳಿದ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪರಿಣಾಮವಾಗಿ, ರೇವಣಸಿದ್ದಪ್ಪನ ಮೇಲೆ ಪೋಕ್ಸೋ (POCSO) ಕಾಯಿದೆಯಡಿ ಕೇಸ್ ದಾಖಲಾಗಿ ಜೈಲು ಸೇರಿದ್ದ. ಕಳೆದ ಎರಡು ವಾರಗಳ ಹಿಂದೆಯಷ್ಟೇ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಬಂದಿದ್ದ.

      ನೋವು ತಂದ ‘ತಾಳಿ’ಯ ಅವಮಾನ!

      ಜೈಲಿನಿಂದ ಹೊರಬಂದ ರೇವಣಸಿದ್ದಪ್ಪನಿಗೆ ಕಾದಿದ್ದು ಮಾತ್ರ ಕಹಿ ಘಟನೆಗಳು. ವರದಿಯ ಪ್ರಕಾರ, ಬಾಲಕಿಯ ಪೋಷಕರು ಆಕೆಯನ್ನು ಕರೆದುಕೊಂಡು ಬಂದು ರೇವಣಸಿದ್ದಪ್ಪ ಕಟ್ಟಿದ್ದ ತಾಳಿಯನ್ನು ಕಿತ್ತು ಆತನ ಮುಖದ ಮೇಲೆಯೇ ಎಸೆದಿದ್ದರಂತೆ. ಈ ಅವಮಾನ ಮತ್ತು ಜನರ ಟೀಕೆಗಳಿಂದ ನೊಂದಿದ್ದ ಈತ, ಇನ್ಸ್ಟಾಗ್ರಾಂನಲ್ಲಿ ತನ್ನದೇ ಫೋಟೋಗೆ “RIP” ಎಂದು ಬರೆದು ಪೋಸ್ಟ್ ಹಾಕುವ ಮೂಲಕ ತನ್ನ ಮಾನಸಿಕ ಸ್ಥಿತಿಯನ್ನು ಹೊರಹಾಕಿದ್ದ.

      ಅಂತಿಮ ಕ್ಷಣಗಳಲ್ಲಿ ಏನಾಯ್ತು?

      ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಪೋಷಕರು ಆತನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಆದರೂ ಗ್ರಾಮಕ್ಕೆ ಬಂದು ಹೋಗುತ್ತಿದ್ದ ಈತನ ಬಗ್ಗೆ ಊರಿನ ಜನ ಪೋಕ್ಸೋ ಕೇಸ್ ವಿಚಾರವಾಗಿ ಆಡಿಕೊಳ್ಳುತ್ತಿದ್ದ ಮಾತುಗಳು ಆತನನ್ನು ಮತ್ತಷ್ಟು ಕುಗ್ಗಿಸಿರಬಹುದು ಎಂದು ಶಂಕಿಸಲಾಗಿದೆ. ಶೌಚಕ್ಕೆಂದು ಹೋದವನು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

      ಕೊಲೆಯೋ? ಆತ್ಮಹತ್ಯೆಯೋ?

      ಸದ್ಯಕ್ಕೆ ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, “ಯಾರಾದರೂ ಕೊಲೆ ಮಾಡಿ ಮರಕ್ಕೆ ನೇಣು ಹಾಕಿದ್ದಾರಾ?” ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

      ಗಮನಿಸಿ: ಜೀವನದ ಯಾವುದೇ ಸಮಸ್ಯೆಗಳಿಗೆ ಸಾವು ಪರಿಹಾರವಲ್ಲ. ಮಾನಸಿಕ ಒತ್ತಡವಿದ್ದರೆ ಸಹಾಯವಾಣಿಯನ್ನು ಸಂಪರ್ಕಿಸಿ.

  • ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು, ಪ್ರಿಯಕರನ ಜೊತೆ ಸೇರಿ ಪತಿಯ ಕೊಂದ ಪತ್ನಿ!

    ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು, ಪ್ರಿಯಕರನ ಜೊತೆ ಸೇರಿ ಪತಿಯ ಕೊಂದ ಪತ್ನಿ!

    ಮೈಸೂರು: ಪರ ಪುರುಷನ ಸಹವಾಸ ಮಾಡಿದ ಪತ್ನಿ ತನ್ನ ಪತಿಯನ್ನೇ ಹತ್ಯೆ ಮಾಡಿರುವ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ.

    ಮೈಸೂರಿನ ಮಾವಿನಹಳ್ಳಿ ಗ್ರಾಮದ ಕುರ್ಣೇಗಾಲ ಹಳ್ಳಿಯ ಜವರಪ್ಪ ಮೃತ ದುರ್ದೈವಿ. ಈತನನ್ನು ಹತ್ಯೆಗೈದ ಆರೋಪದ ಮೇಲೆ ಸಿದ್ದೇಶ್ (32) ಹಾಗೂ ಅಮೃತಾ(26) ಎಂಬುವವರನ್ನು ಬಂಧಿಸಲಾಗಿದೆ.

    ದಂಪತಿಗಳ ನಡುವೆ ಆರಂಭದಲ್ಲಿ ಎಲ್ಲವೂ ಸುಗಮವಾಗಿಯೇ ಇತ್ತು. ಆದರೆ ಕಾಲಕ್ರಮೇಣ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಈ ವಿಷಯ ಪತಿಗೆ ತಿಳಿಯುತ್ತಿದ್ದಂತೆಯೇ ಮನೆಯಲ್ಲಿ ಅಶಾಂತಿ ಶುರುವಾಗಿತ್ತು. ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿರುವ ಪತಿಯನ್ನೇ ಮುಗಿಸಲು ಆಕೆ ನಿರ್ಧರಿಸಿದ್ದಳು.
    ತನ್ನ ಪ್ರಿಯಕರನ ಜೊತೆಗೂಡಿ ಪತಿ ನಿದ್ದೆಯಲ್ಲಿದ್ದಾಗ ಅಥವಾ ಆತನಿಗೆ ತಿಳಿಯದಂತೆ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಕೃತ್ಯ ಎಸಗಿದ ನಂತರ ಪೊಲೀಸರಿಗೆ ಹಾಗೂ ಮನೆಯವರಿಗೆ ಯಾವುದೇ ಅನುಮಾನ ಬರದಂತೆ ನಟಿಸಿದ್ದಳು. ಪತಿಯ ಸಾವನ್ನು ಸಹಜ ಸಾವು ಅಥವಾ ಅಪಘಾತ ಎಂದು ಬಿಂಬಿಸಲು ಆಕೆ ಸಕಲ ಪ್ರಯತ್ನ ಮಾಡಿದ್ದಳು. ಆದರೆ ಪತಿಯ ಅಂತ್ಯಕ್ರಿಯೆಯ ಸಿದ್ಧತೆ ನಡೆಸುವ ವೇಳೆ ಆಕೆಯ ನಡವಳಿಕೆಯಲ್ಲಿ ಕಂಡುಬಂದ ವ್ಯತ್ಯಾಸ ಮತ್ತು ಮೃತದೇಹದ ಮೇಲಿದ್ದ ಅನುಮಾನಾಸ್ಪದ ಗುರುತುಗಳು ಪೊಲೀಸರ ಗಮನ ಸೆಳದಿದ್ದವು.

    ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಮಹಿಳೆ ತತ್ತರಿಸಿದ್ದಾಳೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ತನ್ನ ಅಕ್ರಮ ಸಂಬಂಧವನ್ನು ಮುಚ್ಚಿಡಲು ಮತ್ತು ಪ್ರಿಯಕರನ ಜೊತೆ ಸುಖವಾಗಿರಲು ಈ ಕೃತ್ಯ ಎಸಗಿರುವುದಾಗಿ ಆಕೆ ತಪ್ರೊಪ್ಪಿಕೊಂಡಿದ್ದಾಳೆ. ಪ್ರಸ್ತುತ ಪತ್ನಿ ಮತ್ತು ಆಕೆಗೆ ಸಹಕರಿಸಿದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.

  • ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ.?

    ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ.?

    ದಾವಣಗೆರೆ: ಮಹಿಳೆಯೊಬ್ಬಳು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯ ರೇಲ್ವೆ ಕ್ವಾಟರ್ಸ್‌ನಲ್ಲಿ ನಡೆದಿದೆ.

    ಸಂಶಯಾಸ್ಪದವಾಗಿ ಸಾವನ್ನಪ್ಪಿದ ಮಹಿಳೆಯನ್ನು ಕಾವ್ಯಾ (26) ಎಂದು ಗುರುತಿಸಲಾಗಿದೆ. ಪತಿ ಮನು ವಿರುದ್ಧ ಪರಸ್ತ್ರೀ ಸಹವಾಸ ಹಾಗೂ ವರದಕ್ಷಿಣೆ ಕಿರುಕುಳ (Dowry Harassment) ನೀಡಿ ಚಿತ್ರಹಿಂಸೆ ನೀಡಿ ಕೊಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದ ಕಾವ್ಯಾ ಹಾಗೂ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನುಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಮನು ಅಂಚೆ ಇಲಾಖೆಯಲ್ಲಿ ನೌಕರನಾಗಿದ್ದ ಎಂಬ ಕಾರಣಕ್ಕೆ, ಕಾವ್ಯಾ ಪೋಷಕರು ಸಾಲಸೋಲ ಮಾಡಿ 2.50 ಲಕ್ಷ ರೂ. ನಗದು ಮತ್ತು 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿದ್ದರು.

    ಶನಿವಾರ (ಏ.18) ಕಾವ್ಯಾ ತನ್ನ ತಾಯಿಯೊಂದಿಗೆ ಮಂತ್ರಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದಳು. ಮನೆಯ ಮುಂದೆ ವಾಹನ ನಿಂತು ಎಲ್ಲರೂ ಕಾಯುತ್ತಿದ್ದರು. ಮಧ್ಯಾಹ್ನದಿಂದ ಕಾವ್ಯಾಳ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ವೇಳೆ ಮನು ತನ್ನ ಅತ್ತೆಗೆ ಫೋನ್ ಮಾಡಿ ಕಾವ್ಯಾ ಮಾತನಾಡುತ್ತಿಲ್ಲ ಎಂದು ತಿಳಿಸಿದ್ದ. ಇದರಿಂದ ಗಾಬರಿಗೊಂಡ ಸಂಬಂಧಿಕರು ಬಂದು ನೋಡಿದಾಗ ಕಾವ್ಯಾ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿದ್ದಳು. ಇದಾದ ಬಳಿಕ ಪತಿ ಮನು ಅಲ್ಲಿಂದ ಪರಾರಿಯಾಗಿದ್ದ.

    ಅಸ್ವಸ್ಥಗೊಂಡ ಕಾವ್ಯಾಳನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಕೊನೆಯುಸಿರೆಳೆದಿದ್ದಳು. ಇದರಿಂದ ಕಾವ್ಯಾಳ ಕುಟುಂಬಸ್ಥರು ಮನು ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಕಾವ್ಯಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

    ಮನುಗೆ ಮತ್ತೊಬ್ಬ ಮಹಿಳೆಯ ಜೊತೆಗೆ ಅನೈತಿಕ ಸಂಬಂಧವಿತ್ತು ಮತ್ತು ಆತ ಮಾದಕ ವ್ಯಸನಿಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಕಾವ್ಯಾ ತನ್ನ ಪೋಷಕರಿಗೆ ತಿಳಿಸಿ ಅಳಲು ತೋಡಿಕೊಂಡಿದ್ದಳು. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಆತನ ಅನೈತಿಕ ಸಂಬಂಧದ ಸಾಕ್ಷ್ಯಗಳನ್ನು ಕಾವ್ಯಾ ಒಂದು ಪೆನ್ ಡ್ರೈವ್ ನಲ್ಲಿ ಸಂಗ್ರಹಿಸಿಟ್ಟಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೆನ್ ಡ್ರೈವ್ ಈಗ ಈ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ.

    ನ್ಯಾಯಕ್ಕಾಗಿ ಆಗ್ರಹಿಸಿ ಕಾವ್ಯಾಳ ಸಂಬಂಧಿಕರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಮಗಳ ಸಾವಿನಿಂದ ತಾಯಿ ಶಶಿಕಲಾ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮನುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ :”ಅಡುಗೆ ಮಾಡುವುದು ಕಲಿ” ಎಂದಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ :”ಅಡುಗೆ ಮಾಡುವುದು ಕಲಿ” ಎಂದಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಯುವಜನತೆ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಮತ್ತು ಮನಕಲಕುವ ವಿಷಯ. ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರದಲ್ಲಿ ನಡೆದ ಈ ಘಟನೆ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.

    ಪೆರೇಸಂದ್ರ ಗ್ರಾಮದ ನಿವಾಸಿ ಶ್ರುತಿ (18) ಆತ್ಮಹತ್ಯೆಗೆ ಶರಣಾದ ಯುವತಿ.

    ಯುವತಿಯ ಅತ್ತೆಯವರು “ಮನೆಯಲ್ಲಿ ಸುಮ್ಮನೆ ಇರುವ ಬದಲು ಅಡುಗೆ ಮಾಡುವುದನ್ನು ಕಲಿ ಅಮ್ಮ, ನನಗೂ ಕೆಲಸದಲ್ಲಿ ಸ್ವಲ್ಪ ಸಹಾಯವಾಗುತ್ತದೆ” ಎಂದು ಹಿತವಚನ ಹೇಳಿದ್ದರು.

    ಅತ್ತೆಯ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡ ಶ್ರುತಿ, ತೀವ್ರವಾಗಿ ಮನನೊಂದು ಮನೆಯಲ್ಲಿದ್ದ ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

    ಈ ಘಟನೆಗೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂಸಾರದ ಸಣ್ಣಪುಟ್ಟ ವೈಮನಸ್ಸಿಗೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

    ನಮ್ಮದೊಂದು ಮನವಿ:
    ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಅಡೆತಡೆಗಳು ಅಥವಾ ಹಿರಿಯರ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸೋಣ. ಕ್ಷಣಿಕ ಕೋಪ ಅಥವಾ ಬೇಸರಕ್ಕೆ ಅಮೂಲ್ಯವಾದ ಪ್ರಾಣವನ್ನು ಬಲಿ ಕೊಡಬೇಡಿ. ನಿಮ್ಮ ಪ್ರಾಣ ನಿಮ್ಮ ಕುಟುಂಬಕ್ಕೆ ಬಹಳ ಮುಖ್ಯ.

  • ಚಿಕ್ಕಮ್ಮನ ಕೊ*ಲೆ ಮಾಡಿ ಕಾಡಿನ ಮಧ್ಯೆ ಶ*ವ ಸುಟ್ಟಿದ್ದ ಲೇಡಿ.!

    ಚಿಕ್ಕಮ್ಮನ ಕೊ*ಲೆ ಮಾಡಿ ಕಾಡಿನ ಮಧ್ಯೆ ಶ*ವ ಸುಟ್ಟಿದ್ದ ಲೇಡಿ.!

    ಚಿಕ್ಕಬಳ್ಳಾಪುರ: ಒಂದು ವರ್ಷದ ಹಿಂದೆ ನಡೆದ ಭೀಕರ ಕೊ*ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳೆಯ ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಗುರುತು ಸಿಗದಂತೆ ಮಾಡಲಾಗಿತ್ತು.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 2025 ಅಕ್ಟೋಬರ್ 19 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಬಳಿ ಕಾಡಿನ ಮಧ್ಯೆ ನುಣಕಮ್ಮ ಎಂಬ ಮಹಿಳೆಯ ಶ*ವ ಸುಟ್ಟ ಸ್ಥಿತಿಯಲ್ಲಿ ಪತ್ತೆ ಆಗಿತ್ತು.

    ಇದೀಗ ತನಿಖೆಯಲ್ಲಿ ಅಣ್ಣನೇ ಮಗಳೇ ಕೊ*ಲೆಗಾತಿ ಅನ್ನೋದು ತನಿಖೆಯಲ್ಲಿ ಬಯಲಾಗಿದೆ. ನುಣಕಮ್ಮಗೆ ಗಂಡ ಮಕ್ಕಳು ಇರಲಿಲ್ಲ. ಅಣ್ಣನ ಮನೆಯಲ್ಲಿ ಇದ್ದರು. ನುಣಕಮ್ಮಳಿಗೆ ಮಗಳು ಆಗಬೇಕಿದ್ದ 32 ವರ್ಷದ ನಾಗಲಕ್ಷ್ಮಿ ಹಾಗೂ ಆಕೆಯ ಪ್ರೀಯಕರ ಆಂಧ್ರದ ಮಡಕಶಿರಾ ನಿವಾಸಿ ಅಶೋಕ್ ಕುಮಾರ್ ಜೊತೆ ಸೇರಿ ಕೊ*ಲೆ ಮಾಡಿದ್ದು ಬಯಲಾಗಿದೆ.

    ಪಿಡ್ಸ್ ಬರುತ್ತಿದೆ ಎಂದು ನುಣಕಮ್ಮಳನ್ನ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ, ಬೈಕ್ನಲ್ಲಿ ಕರೆದುಕೊಂಡು ಸೆಪ್ಟೆಂಬರ್ 20 ರಂದು ಚಿಕ್ಕಬಳ್ಳಾಪುರದ ಅರಣ್ಯದಲ್ಲಿ ಕೊಂ*ದು ಶವ ಬಿಸಾಡಿ ಹೋಗಿದ್ದರು. ಚಿನ್ನಾಭರಣ ಹಾಗೂ ಚೀಟಿ ಹಣಕ್ಕೆ ಪ್ರಿಯಕರನ ಜೊತೆ ಸೇರಿ ಸ್ವಂತ ಚಿಕ್ಕಮ್ಮಳನ್ನು ನಾಗಲಕ್ಷ್ಮೀ ಕೊ*ಲೆ ಮಾಡಿದ್ದಾಳೆ.

  • ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

    ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

    ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊ*ಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

    ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಗಾಗಲೇ ವಿನಯ್ ಕುಲಕರ್ಣಿ ಸೇರಿದಂತೆ ಆರೋಪಿಗಳನ್ನು ದೋಷಿಯೆಂದು ಘೋಷಿಸಿದ್ದು, ಇಂದು ಬೆಳಗ್ಗೆ ಸುಮಾರು 11:30ರ ವೇಳೆಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದೆ.

    ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆ ಘೋಷಿಸಲಿದ್ದಾರೆ.

    ದೋಷಿಗಳೆಂದು ತೀರ್ಪು ಹೊರಬಂದ ತಕ್ಷಣ, ಪ್ರಕರಣದ ತನಿಖೆ ನಡೆಸಿದ ಕೇಂದ್ರ ತನಿಖಾ ದಳ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಶಾಸಕ ವಿನಯ್ ಕುಲಕರ್ಣಿ ಸೇರಿ 17 ಮಂದಿಯನ್ನು ಪರಪ್ಪನ ಅಗ್ರಹಾರ ಜೈಲುಗೆ ಸ್ಥಳಾಂತರಿಸಲಾಗಿದೆ.

    2016ರ ಜೂನ್ 16ರಂದು ನಡೆದಿದ್ದ ಈ ಹ*ತ್ಯೆಯಲ್ಲಿ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡರನ್ನು ಕೊ*ಲೆ ಮಾಡಲಾಗಿತ್ತು. ಪ್ರಕರಣವು 2019ರಲ್ಲಿ ಸಿಬಿಐಗೆ ವರ್ಗಾಯಿಸಲ್ಪಟ್ಟಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(ಬಿ) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿ ಆರೋಪ ಪಟ್ಟಿ ಸಲ್ಲಿಸಿತ್ತು. ವಿನಯ್‌ ಕುಲಕರ್ಣಿ, ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಆ ಪೈಕಿ 17 ಮಂದಿ ಮೇಲೆ ಅಪರಾಧ ಸಾಭೀತಾಗಿದೆ. 2016ರ ಜೂನ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದ್ದು 10 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದೆ

    2016 ಜೂನ್ 15 ರಂದು ಧಾರವಾಡದ ಸಪ್ತಾಪುರದಲ್ಲಿರುವ ಯೋಗೇಶ್ ಗೌಡ ಅವರದ್ದೇ ಒಡೆತನದ ಉದಯ್ ಜಿಮ್‌ನಲ್ಲಿ ಬೆಳಗಿನ ಜಾವ ಅವರು ದಿನಪತ್ರಿಕೆ ಓದುತ್ತಿದ್ದಾಗ, ಅಲ್ಲಿಗೆ ಬಂದ ದುಷ್ಕರ್ಮಿಗಳ ಗುಂಪೊಂದು ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು.

    ಪ್ರಮುಖ ಆರೋಪಿಗಳು: ಸಂತೋಷ್, ಅಶ್ವತ್ಥ, ಸುನೀಲ್ ನಜ್ಮೀರ್ ಅಹ್ಮದ್, ಹರ್ಷಿತ್, ವಿನಯ್ ಕುಲಕರ್ಣಿ , ಶಿವಾನಂದ್, ಚನ್ನಕೇಶವ, ಬಸವರಾಜ್ ಮುತ್ತಗಿ , ಕೀರ್ತಿ ಕುಮಾರ್, ವಿನಾಯಕ್, ದಿನೇಶ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ ಇಂಡಿ, ಶಿವಾನಂದ್, ವಿಕಾಸ್, ವಾಸುದೇವ, ವಿಕ್ರಂ