Blog

  • ಸಂಗೀತ- ಸಂವಾದದ ಗಮ್ಮತ್ತು : ಜಯನಗರದಲ್ಲಿ ಭಕ್ತಿ, ಭಾವದ ‘ರಸಂ’ ರಸದೌತಣ!

    ಸಂಗೀತ- ಸಂವಾದದ ಗಮ್ಮತ್ತು : ಜಯನಗರದಲ್ಲಿ ಭಕ್ತಿ, ಭಾವದ ‘ರಸಂ’ ರಸದೌತಣ!

    •    ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ನೇತೃತ್ವದಲ್ಲಿ ಹರಿದ ಸಂಗೀತ ಸುಧೆ
    •    ಪರಮ್‌ ಫೌಂಡೇಶನ್‌, ಯುವಪಥ ಮತ್ತು ವಿಪಿ ಕಲ್ಚರ್ ಕ್ಲಬ್ ಸಹಯೋಗ
    •    ಭಾವಗೀತೆ, ಚಿತ್ರಗೀತೆಗಳ ವಿಶಿಷ್ಟ ವಿಶ್ಲೇಷಣೆ ಹಾಗೂ ರಸಮಯ ಸಂವಾದ
    •    ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಅವರ ಆಕರ್ಷಕ ಕಥಾನಕ, ಒಳನೋಟ
    •    ಶ್ರೀನಿವಾಸ್ ಆಚಾರ್, ಪ್ರವೀಣ್ ಡಿ. ರಾವ್ ಸೇರಿದಂತೆ ಖ್ಯಾತ ವಾದ್ಯವೃಂದದ ಜುಗಲ್‌ಬಂದಿ

    ಬೆಂಗಳೂರು : ರಾಜಧಾನಿಯ ಸಾಂಸ್ಕೃತಿಕ ವಲಯದಲ್ಲಿ  ‘ರಸಂʼ(RaSam)* ಎಂಬ ವಿಶಿಷ್ಟ ಸಂಗೀತ ಮತ್ತು ಸಂವಾದದ ಕಾರ್ಯಕ್ರಮವು ಜಯನಗರದ ಯುವಪಥ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಭಾರತೀಯ ಸಂಗೀತದ ವಿವಿಧ ಆಯಾಮ ಹಾಗೂ ರುಚಿಗಳನ್ನು ಪ್ರೇಕ್ಷಕರಿಗೆ ಉಣಬಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಂಗೀತ ಸಂಜೆಯಲ್ಲಿ ಸೇರಿದ್ದ ನೂರಾರು ರಸಿಕರ ಮನಗೆದ್ದಿತು.

    ಪರಮ್‌ ಫೌಂಡೇಶನ್‌, ಯುವಪಥ ಮತ್ತು ವಿಪಿ ಕಲ್ಚರ್ ಕ್ಲಬ್ ಸಹಯೋಗದಲ್ಲಿ ನಡೆದ ಈ ಅಪರೂಪದ ಗಾನ ವೈಭವವು ನಗರದ ಸಂಗೀತಪ್ರೇಮಿಗಳಿಗೆ ಒಂದು ಮರೆಯಲಾಗದ ಸಾಂಸ್ಕೃತಿಕ ರಸದೌತಣ ನೀಡಿತು.

    ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ವಿದ್ವಾಂಸ ಜಗದೀಶ್ ಶರ್ಮಾ ಸಂಪಾ ಅವರ ಜಂಟಿ ಪ್ರಸ್ತುತಿಯಲ್ಲಿ ಮೂಡಿಬಂದ ಈ ಕಾರ್ಯಕ್ರಮವು, ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದಿಂದ ಹಿಡಿದು ಸುಗಮ ಸಂಗೀತ ಹಾಗೂ ಜನಪ್ರಿಯ ಚಲನಚಿತ್ರ ಗೀತೆಗಳವರೆಗಿನ ಸುದೀರ್ಘ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಅನಾವರಣಗೊಳಿಸಿತು. ಹಾಡುಗಳ ಹಿಂದಿನ ಭಾವನೆಗಳು, ಪರಂಪರೆ ಮತ್ತು ತಾಂತ್ರಿಕ ಆಯಾಮಗಳ ಬಗ್ಗೆ ಕಲಾವಿದರು ನಡೆಸಿದ ರಸಮಯ ಸಂವಾದ ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾಯಿತು.

    ಕಾರ್ಯಕ್ರಮಕ್ಕೆ ಗಿಟಾರ್‌ನಲ್ಲಿ ಶ್ರೀನಿವಾಸ್ ಆಚಾರ್, ಕೀಬೋರ್ಡ್‌ನಲ್ಲಿ ಉಮೇಶ್ ವಿ, ತಬಲಾದಲ್ಲಿ ಬಿ.ಎಸ್. ವೇಣುಗೋಪಾಲ ರಾಜು, ಡ್ರಮ್ಸ್‌ನಲ್ಲಿ ಪ್ರವೀಣ್ ಎಸ್, ವಯಲಿನ್‌ನಲ್ಲಿ ರಂಜನ್ ಕುಮಾರ್ ಬೆಯುರಾ ಹಾಗೂ ಹಾರ್ಮೋನಿಯಂನಲ್ಲಿ ಪ್ರವೀಣ್ ಡಿ. ರಾವ್ ಅದ್ಭುತ ಹಿನ್ನೆಲೆ ಸಂಗೀತ ಒದಗಿಸಿದರು. “ಬಾನಿಗೊಂದು ಎಲ್ಲೆ ಎಲ್ಲಿದೆ..”, “ಮಗಳು ಜಾನಕಿ..” ಟೈಟಲ್ ಸಾಂಗ್ , “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು..” ಸೇರಿದಂತೆ ಹಲವಾರು ಜನಪ್ರಿಯ ಚಲನಚಿತ್ರ ಗೀತೆ, ಸುಗಮ ಸಂಗೀತದ ಹಾಡುಗಳು ಕೇಳುಗರನ್ನು ಮಂತ್ರಮುಗ್ದಗೊಳಿಸಿತು.

  • ದೊಡ್ಡಬಳ್ಳಾಪುರ; ನಗರದ ಸುತ್ತಲಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆ ವ್ಯತ್ಯಯ

    ದೊಡ್ಡಬಳ್ಳಾಪುರ; ನಗರದ ಸುತ್ತಲಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆ ವ್ಯತ್ಯಯ

    ದೊಡ್ಡಬಳ್ಳಾಪುರ ನಗರದಲ್ಲಿ ಜುಲೈ 7ರಂದು ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F15-Tropical Flavours ಮತ್ತು 220/66/11 ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ KF17-Jakkasandra, ಫೀಡರ್‌ಗಳಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ ಈ ಫೀಡರ್‌ಗಳ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ಕುರುಬರಹಳ್ಳಿ, ರಾಜೀವ್‌ಗಾಂಧಿ ಬಡಾವಣೆ, ಮಾದಗೊಂಡನಹಳ್ಳಿ, ಕೋಳೂರು, ಹಸನ್‌ಘಟ್ಟ, ತಳಗವಾರ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹಮಾಮ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  • ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

    ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

    • ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ
    * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ
    * ‘ಟ್ರಾಫಿಕ್ ಡಿಸೈನ್ ಚಾಲೆಂಜ್’ನ ಸಬ್ಮಿಷನ್ ಮುಕ್ತಾಯ
    * ಮುಂದಿನ 2 ವಾರಗಳಲ್ಲಿ ಫೈನಲಿಸ್ಟ್‌ಗಳಿಂದ ವರ್ಕಿಂಗ್ ಮಾಡೆಲ್ ಸಿದ್ಧ ಪ್ರಕ್ರಿಯೆ

    ಬೆಂಗಳೂರು: ನಮ್ಮ ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಐಟಿ ಹಬ್ ವೈಟ್‌ಫೀಲ್ಡ್‌ನಲ್ಲಿ ಒಂದು ಅಪೂರ್ವ ಪ್ರಯೋಗ ಯಶಸ್ವಿಯಾಗಿದೆ. ವೈಟ್‌ಫೀಲ್ಡ್‌ನ ಪಾರ್ಸೆಕ್‌ (ParSEC) ಕೇಂದ್ರದಲ್ಲಿ ‘ಟ್ರಾಫಿಕ್ ಸೇಫ್ಟಿ ಎಕ್ಸ್‌ಪೀರಿಯನ್ಸ್ ಗ್ಯಾಲರಿ’ (ಸಂಚಾರ ಸುರಕ್ಷತಾ ಅನುಭವ ಗ್ಯಾಲರಿ) ಆರಂಭಗೊಂಡಿದ್ದು, “ಸಂಚಾರಿ ನಿಯಮ”ದ ಪೂರ್ಣಪಾಠ ಇಲ್ಲಿ ಸಿಗಲಿದೆ.
    ವೋಲ್ವೋ ಗ್ರೂಪ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕಮಲ್ ಬಾಲಿ ಅವರು ಈ ವಿನೂತನ ಗ್ಯಾಲರಿಯನ್ನು ಈಚೆಗೆ ಲೋಕಾರ್ಪಣೆ ಮಾಡಿದ್ದಾರೆ. ಈ ಗ್ಯಾಲರಿಯ ಉದ್ಘಾಟನೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಈಗ ಅತ್ಯಂತ ಕುತೂಹಲಕಾರಿ ಹಂತವನ್ನು ತಲುಪಿದೆ.
    ಟ್ರಾಫಿಕ್ ನಿರ್ಧಾರಗಳ ಲೈವ್ ಅನುಭವ:
    ಇದೊಂದು ಸಂಪೂರ್ಣ ಪ್ರಾಯೋಗಿಕ ಗ್ಯಾಲರಿ ಆಗಿದ್ದು, ಇಲ್ಲಿಗೆ ಭೇಟಿ ನೀಡುವ ನಾಗರಿಕರಿಗೆ ರಸ್ತೆಯ ಮೇಲಿನ ನೈಜ ಟ್ರಾಫಿಕ್ ಪರಿಸ್ಥಿತಿಗಳನ್ನು ಕಣ್ಣಮುಂದೆ ತಂದು ನಿಲ್ಲಿಸಲಾಗುತ್ತದೆ. ದಿನನಿತ್ಯದ ಸಂಚಾರದಲ್ಲಿ ನಾವು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳು ಎಂತಹ ಅಪಾಯವನ್ನು ತಂದೊಡ್ಡಬಹುದು ಎಂಬುದನ್ನು ಸುರಕ್ಷಿತ ವಾತಾವರಣದಲ್ಲೇ ಪ್ರಾಯೋಗಿಕವಾಗಿ ಅನುಭವಿಸಿ ತಿಳಿಯಬಹುದು. ಪ್ರತಿಯೊಬ್ಬ ವಾಹನ ಸವಾರನೂ ಜವಾಬ್ದಾರಿಯುತವಾಗಿ ನಡೆದುಕೊಂಡು ‘ಸುರಕ್ಷಿತ ಸಂಚಾರ’ಕ್ಕೆ ಕೈಜೋಡಿಸುವಂತೆ ಮಾಡುವುದು ಈ ಗ್ಯಾಲರಿಯ ಮೂಲ ಉದ್ದೇಶವಾಗಿದೆ.

    ಮುಕ್ತಾಯಗೊಂಡ ಸಬ್ಮಿಷನ್; ಅಂತಿಮ ಹಂತದಲ್ಲಿ ಐಡಿಯಾಗಳು:

    ನಗರದ ಸಂಚಾರದ ಸಮಸ್ಯೆಗಳಿಗೆ ಸಾರ್ವಜನಿಕರಿಂದ ಪ್ರಾಯೋಗಿಕ ಪರಿಹಾರಗಳನ್ನು ಆಹ್ವಾನಿಸಿದ್ದ ‘ಟ್ರಾಫಿಕ್ ಡಿಸೈನ್ ಚಾಲೆಂಜ್’ಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು, ಈಗಾಗಲೇ ಸಬ್ಮಿಷನ್‌ಗಳ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಬಂದಿರುವ ನೂರಾರು ಐಡಿಯಾಗಳಲ್ಲಿ ಅತ್ಯುತ್ತಮವಾದ ಆಲೋಚನೆಗಳನ್ನು ಶಾರ್ಟ್‌ ಲಿಸ್ಟ್ ಮಾಡಿ, ಫೈನಲಿಸ್ಟ್‌ಗಳನ್ನು ಆಯ್ಕೆ ಮಾಡಲಾಗಿದೆ.

    ಕಲ್ಪನೆಗೆ ಸಿಗಲಿದೆ ಜೀವಂತ ರೂಪ:
    ಪ್ರಸ್ತುತ ಆಯ್ಕೆಯಾಗಿರುವ ಫೈನಲಿಸ್ಟ್‌ಗಳು ತಾವಿತ್ತ ಐಡಿಯಾಗಳಿಗೆ ಜೀವಂತ ರೂಪ ನೀಡಲು ಮುಂದಾಗಿದ್ದಾರೆ. ಹೊಸ ಆಲೋಚನೆಗಳಿಗೆ ಪ್ರಾಯೋಗಿಕ ರೂಪ ಕೊಡುವ ಪಾರ್ಸೆಕ್‌ ಕೇಂದ್ರದ ‘ಪಾರ್ಸೆಕ್‌ ಮೇಕರ್ಸ್‌ಅಡ್ಡಾ’ (ParSEC MakersAdda) ಮೂಲಕ ಇವರು ತಮ್ಮ ಆಲೋಚನೆಗಳ ‘ವರ್ಕಿಂಗ್ ಪ್ರೊಟೊಟೈಪ್’ (ಕಾರ್ಯನಿರ್ವಹಿಸುವ ಮಾದರಿ)ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಈ ಫೈನಲಿಸ್ಟ್‌ಗಳಿಂದ ಈಗಾಗಲೇ ನೈಜ ಮಾದರಿಗಳನ್ನು (Submissions) ಸ್ವೀಕರಿಸಲಾಗಿದ್ದು, ಶೀಘ್ರದಲ್ಲೇ ಇವುಗಳ ಫಲಿತಾಂಶವನ್ನು ಪ್ರಕಟಿಸಲಾಗುವುದು.

    ಪರಮ್‌ ಲಿವಿಂಗ್‌ ಲ್ಯಾಬ್‌ನ ಪರಿಕಲ್ಪನೆ:
    ಇದರ ಕಲ್ಪನೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ‘ಪರಮ್ ಲಿವಿಂಗ್ ಲ್ಯಾಬ್’ ಮಾಡಿದ್ದರೆ, ಇಡೀ ಯೋಜನೆಗೆ ಆರ್ಥಿಕ ಪ್ರಾಯೋಜಕತ್ವವನ್ನು ‘ವೋಲ್ವೋ ಗ್ರೂಪ್ ಟ್ರಸ್ಟ್’ ನೀಡಿದೆ. ಇನ್ನು ತಾಂತ್ರಿಕ ಸಲಹೆಗಾರರಾಗಿ ‘ಬೆಂಗಳೂರು ಟ್ರಾಫಿಕ್ ಪೊಲೀಸ್’ ಇಲಾಖೆಯು ಕೈಜೋಡಿಸಿದೆ.

  • ದೊಡ್ಡಬಳ್ಳಾಪುರ ನಗರದ ಈ ವಾರ್ಡ್ ಗಳಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರ ನಗರದ ಈ ವಾರ್ಡ್ ಗಳಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರ ನಗರದ ಈ ಕೆಳಕಂಡ ವಾರ್ಡ್ ಗಳಲ್ಲಿ ಜುಲೈ.6ರಂದು ಇಂದು ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ Telephone Exchange, DF7-Local-1 ಕಾಮಗಾರಿಗಳು ನಡೆಯುವುದರಿಂದ ಸದರಿ, ಫೀಡರ್‌ಗಳ ಈ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 02:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ಸೋಮೇಶ್ವರ ಬಡಾವಣೆ, ರೋಜಿಪುರ, ವಿನಾಯಕನಗರ, ಗಂಗಾಧರಪುರ, ಬಸವೇಶ್ವರನಗರ, ದೊಡ್ಡಮ್ಮ ದೇವಸ್ಥಾನ, ಶಾಂತಿನಗರ, ಇಸ್ಲಾಂಪುರ, ತ್ಯಾಗರಾಜನಗರ, ಕಲ್ಲುಪೇಟೆ, ಕರೇನಹಳ್ಳಿ, ದೇವರಾಜನಗರ, ಕೊಂಗಾಡಿಯಪ್ಪ ಮೈನ್‌ರೋಡ್, ದೇವರಾಜನಗರ, ಕನಕದಾಸರಸ್ತೆ, ಬಸವಣ್ಣ ದೇವಸ್ಥಾನದ ರಸ್ತೆ, ವೀರಾಪುರ, ಖಾಸ್‌ಬಾಗ್, ರಂಗಪ್ಪ ಸರ್ಕಲ್, ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  • ಹೊರಮಾವು ಅಗರದಲ್ಲಿ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಅನಾವರಣ.

    ಹೊರಮಾವು ಅಗರದಲ್ಲಿ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಅನಾವರಣ.

    ಕೆ.ಆರ್ ಪುರ : ಕ್ಷೇತ್ರದ ಹೊರಮಾವು ಅಗರ ಜೈ ಭೀಮ್ ಸರ್ಕಲ್ ನಲ್ಲಿ ನೂತನ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಬೆಂಗಳೂರು ಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ಬಾಬು ಅವರು ಅನಾವರಣಗೊಳಿಸಿದರು.

    ಈ ವೇಳೆ ಮಾತನಾಡಿದ ಅವರು, ಹೊರಮಾವು ಅಗರದಲ್ಲಿ ನಾಲ್ಕು ವರ್ಷದ ಹಿಂದೆ ಅಂಬೇಡ್ಕರ್ ಪ್ರತಿಮೆ ನಿರ್ಮಾಣವಾಗಿದ್ದು, ಆದರೆ ಕಾರಣಾಂತರಗಳಿಂದ ಉದ್ಘಾಟನೆಗೆ ಕಾಲ ಕೂಡಿ ಬಂದಿರಲಿಲ್ಲ, ಇಂದು ನನಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆ ಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದರು.

    ಪುತ್ಥಳಿ ಅನಾವರಣ ಮಾಡಿದರೆ ಮಾತ್ರ ಸಾಲದು. ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಉನ್ನತ ಹುದ್ದೆಗೇರಬೇಕು.ಶಿಕ್ಷಣದ ಮಹತ್ವ ಅರಿತಿದ್ದ ಅಂಬೇಡ್ಕರ್ ಅವರು ಹೆಚ್ಚು ಅಧ್ಯಯನ ಮಾಡುವ ಮೂಲಕ ಅಪಾರ ಜ್ಞಾನ ಸಂಪಾದಿಸಿದ್ದರು. ಆ ಮೂಲಕ ಜನರ ಹಕ್ಕಿಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.

    ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರನ್ನು ನಾವು ಅರ್ಥ ಮಾಡಿಕೊಳ್ಳದೆ ಇರುವುದರಿಂದ ಸಮಾಜದಲ್ಲಿ ಇಂದಿಗೂ ಜಾತೀಯತೆ ಜೀವಂತವಾಗಿದೆ ಎಂದರು.

    ಅಂಬೇಡ್ಕರ್ ಅವರನ್ನ ಆರಾಧನೆ ಮಾಡುವುದು ಕೇವಲ ದಲಿತ ವರ್ಗಕ್ಕೆ ಮಾತ್ರ ಸೀಮಿತಗೊಳಿಸದೆ ಸಮಾಜದ ಎಲ್ಲ ವರ್ಗದ ಜನರೂ ಮಾಡುವಂತಾಗಬೇಕು ಎಂದರು.

    ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿಗಳಾಗಬೇಕು ಎಂದರು.

    ಕೆಲವು ಸಂವಿಧಾನ ವಿರೋಧಿಗಳು ಸಂವಿಧಾನವನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ, ಅಂಬೇಡ್ಕರ್ ಅನುಯಾಯಿಗಳು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಅಂತಹ ದುಷ್ಟ ಶಕ್ತಿಗಳನ್ನು ಮೂಲೆಗುಂಪು ಮಾಡಬೇಕು ಎಂದರು.

    ಡಾ. ಅಂಬೇಡ್ಕರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕಿದೆ ಎಂದರು.

    ಇದೇ ವೇಳೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕಂಬಳಿಗಳನ್ನು ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಎಸ್.ಸಿ ಬ್ಲಾಕ್ ಅಧ್ಯಕ್ಷ ಸಿ.ವೆಂಕಟೇಶ್, ಆಯೋಜಕರಾದ ಕೇಶವ, ಶಿವ, ಮುಖಂಡರಾದ ಅಗರ ಪ್ರಕಾಶ್, ಸುರೇಶ್ ಮುನಿಕೃಷ್ಣ, ವೆಂಕಟೇಶ್, ಪ್ರಸನ್ನ, ರಾಮಾಂಜಿ, ಭರತ್, ಧನುಷ್, ನಾಗೇಶ್, ವಿನಯ್, ಸುಪ್ರೀತ್, ವಿಜಯ್, ಯಶ್ವಂತ್, ಸಂತೋಷ್, ನರಸಿಂಹಯ್ಯ, ಶ್ರೀಕಾಂತ್, ರವಿ, ಕಿರಣ್, ವಿನೋದ್, ಸುಮನ್, ನವೀನ್, ಮುನಿರಾಜು, ಕುಮಾರ್, ಅಪ್ಪು, ದರ್ಶನ್ , ಅಭಿ, ವಿಶ್ವನಾಥ್ ಸೇರಿದಂತೆ ಹೊರಮಾವು ಅಗರ ಗ್ರಾಮಸ್ಥರು ಇದ್ದರು.

  • ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ “ವಿಬಿ-ಜಿ ರಾಮ್ ಜಿ” ಯೋಜನೆಗೆ ಚಾಲನೆ

    ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ “ವಿಬಿ-ಜಿ ರಾಮ್ ಜಿ” ಯೋಜನೆಗೆ ಚಾಲನೆ

    ಚಿಕ್ಕನಾಯಕನಹಳ್ಳಿ: “ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ, 2025” ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಮಹತ್ವಾಕಾಂಕ್ಷಿ ಯೋಜನೆವಾಗಿದೆ. VBG RAM G ಯೋಜನೆಯ ಮೂಲಕ ಗುಣಮಟ್ಟದ ಹಾಗೂ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದ್ದು, ಕೂಲಿಕಾರರ ಕೂಲಿ ಮೊತ್ತವನ್ನು 370 ರಿಂದ 382 ಹೆಚ್ಚಿಸಲಾಗಿದೆ. ಅರ್ಹರು ಸದುಪಯೋಗ ಪಡಿದುಕೊಳ್ಳಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವರಾಜಯ್ಯ ರವರು ಕರೆ ನೀಡಿದರು.

    ತಾಲ್ಲೂಕಿನ ತೀರ್ಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ “ಮಾರಮ್ಮನ ಗುಡಿ ಕಟ್ಟೆ ಸಮಗ್ರ ಅಭಿವೃದ್ಧಿ” ಕಾಮಗಾರಿಯನ್ನು ಆರಂಭಿಸುವ ಮೂಲಕ ಅದೇ ಸ್ಥಳದಲ್ಲಿ ತಾಲ್ಲೂಕಿನ ಅಧಿಕಾರಿ ವೃಂದದವರು ಹಾಗೂ ವಿಬಿ-ಜಿ ರಾಮ್ ಜಿ ನೌಕರರು ಕೂಲಿಕಾರರೊಂದಿಗೆ ಶ್ರಮದಾನ ಮಾಡುವ ಮೂಲಕ ಯೋಜನೆಗೆ ಅದ್ಬುತ ಚಾಲನೆ ನೀಡಲಾಗಿದೆ.
    ನಂತರ ಸಹಾಯಕ ನಿರ್ದೇಶಕರು (ಗ್ರಾ,ಉ) ಇಂದ್ರೇಶ್ ರವರು ಮಾತನಾಡುತ್ತಾ, ಸಾರ್ವಜನಿಕರಿಗೆ ಇನ್ನಷ್ಟು ಬಲ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ವಿಬಿ-ಜಿ ರಾಮ್ ಜಿ ಯೋಜನೆ ಜುಲೈ 01 ರಿಂದ ಇಡೀ ದೇಶದಾದ್ಯಂತ ಚಾಲನೆ ನೀಡಲಾಗಿದೆ. ನಾವು ನಮ್ಮ ಕೂಲಿಕಾರರೊಂದಿಗೆ ಶ್ರಮದಾನ ಮಾಡುವ ಮೂಲಕ ಒಂದು ಉತ್ತಮ ಘಳಿಗೆ ಸೃಷ್ಟಿಸಿದ್ದೇವೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
    ತಾಲ್ಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಕೂಲಿಕಾರರೊಂದಿಗೆ ಯೋಜನೆಯನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಗಿದೆ. ತಾಲ್ಲೂಕು ಪಂಚಾಯತ್ ಅಧಿಕಾರಿ ವರ್ಗದವರು ಹಾಗೂ ವಿಬಿ-ಜಿ ರಾಮ್ ಜಿ ಯೋಜನೆಯ ಸಿಬ್ಬಂದಿಗಳು ಕೂಲಿಕಾರಯೊಂದಿಗೆ ಶ್ರಮದಾನ ಮಾಡುವ ಮೂಲಕ ಒಂದು ಅರ್ಥಪೂರ್ಣ ಚಾಲನೆ ನೀಡಲಾಗಿದೆ ಎಂದರು.

    ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಜೊತೆಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಲಿದೆ. ಪ್ರತಿಯೊಬ್ಬ ಅರ್ಹ ಕುಟುಂಬವೂ ಯೋಜನೆಯ ಸೌಲಭ್ಯಗಳನ್ನು ಪಡೆದು ಉದ್ಯೋಗದ ಜೊತೆಗೆ ಗ್ರಾಮಾಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದರು.
    ಈ ವೇಳೆ ವ್ಯವಸ್ಥಾಪಕರಾದ ಬಸವರಾಜು ರವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ನಾಗೇಶ್, ಬಾಬು ಶ್ರೀನಿವಾಸ್, ಮಂಜುನಾಥ್, ಲಕ್ಷ್ಮೀಬಾಯಿ, ಉಮೇಶ್, ತಾಂತ್ರಿಕ ಸಂಯೋಜಕರಾದ ಶ್ರೀಕಾಂತ್, ನಾಗರಾಜು, mis ಸಂಯೋಜಕರಾದ ಸರಸ್ವತಿ, ತಾಂತ್ರಿಕ ಸಹಾಯಕರಾದ ವರುಣ್, ಮಲ್ಲಿಕಾರ್ಜುನ್, ಪ್ರಕಾಶ್, ಹೊನ್ನೇಶ್, ಬಿಫ್ಟಿಫ್ ಗಳು, ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು , ತೀರ್ಥಪುರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಕೂಲಿಕಾರರು ಹಾಜರಿದ್ದರು.

  • ದೊಡ್ಡಬಳ್ಳಾಪುರ; ಗಂಗಾಧರ@ದಾಸ ನ ಕೊಲೆ ಪ್ರಕರಣ ಆರೋಪಿ ಕಬಾಬ್ ಆನಂದನಿಗೆ ಜೀವಾವಧಿ ಶಿಕ್ಷೆ, ನ್ಯಾಯಾಲಯ ಆದೇಶ

    ದೊಡ್ಡಬಳ್ಳಾಪುರ; ಗಂಗಾಧರ@ದಾಸ ನ ಕೊಲೆ ಪ್ರಕರಣ ಆರೋಪಿ ಕಬಾಬ್ ಆನಂದನಿಗೆ ಜೀವಾವಧಿ ಶಿಕ್ಷೆ, ನ್ಯಾಯಾಲಯ ಆದೇಶ

    ದೊಡ್ಡಬಳ್ಳಾಪುರ; ನಗರದ ದೇವರಾಜ ನಗರ ವಾಸಿ ಗಂಗಾಧರ @ ದಾಸ ಎಂಬಾತನ ಕೊಲೆಯ ಪ್ರಮುಖ ಆರೋಪಿಗೆ ದೊಡ್ಡಬಳ್ಳಾಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲವು ಕೊಲೆಯತ್ನ ಮತ್ತು ಕೊಲೆ ಆರೋಪಡದಿ ಆರೋಪಿಗೆ 20 ಸಾವಿರ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ಹೊರಡಿಸಿ ಆದೇಶಿಸಿದೆ.

    ಘಟನೆಯ ಹಿನ್ನೆಲೆ;

    ಹಣದ ವಿಚಾರವಾಗಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಿನಾಂಕ; 07.01.2019 ರಂದು ದೊಡ್ಡಬಳ್ಳಾಪುರದ ದೇವರಾಜನಗರದ ವಾಸಿ ಎನ್.ಗಂಗಾಧರ @ ದಾಸ (ಕೇಸಿನ ಮೃತ) ನು ಅದೇ ಏರಿಯಾದ ತನ್ನ ಸ್ನೇಹಿತ ಆನಂದ.ಎಸ್ @ ಕಬಾಬ್ ಆನಂದ (ಕೇಸಿನ ಆರೋಪಿ) ನಿಗೆ ಹೊಡೆಯುವ ಉದ್ದೇಶದಿಂದ ತಾನು ಹಾಕಿಕೊಂಡಿದ್ದ ಜರ್ಕಿನ್ ನಲ್ಲಿ ಕಾರದ ಪುಡಿ ಪೊಟ್ಟಣ ಮತ್ತು ಮಚ್ಚನ್ನು ಇಟ್ಟುಕೊಂಡು ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ವಾಸಿ ಪವನ್ ಕುಮಾರ್ @ ಪವನ್ @ ಬೆಂಕಿ (ಕೇಸಿನ ಗಾಯಾಳು ಸಾಕ್ಷಿ) ನ ಜೊತೆ ರಾತ್ರಿ ಸುಮಾರು 9.15 ಗಂಟೆಯಲ್ಲಿ ದೊಡ್ಡಬಳ್ಳಾಪುರದ ಪ್ರೀತಿ ವೈನ್ಸ್ ಸರ್ಕಲ್ ಬಳಿ ಬಂದಿದ್ದು, ಅಲ್ಲಿಗೆ ಬಂದ ಆನಂದ @ ಕಬಾಬ್ ಆನಂದನನ್ನು ಪವನ್ ಕುಮಾರನ ಮೂಲಕ ಕರೆಸಿಕೊಂಡು ಕೊರಚರಹಟ್ಟಿ ರಸ್ತೆಯ ಕರೇನಹಳ್ಳಿ ಗ್ರಾಮಕ್ಕೆ ಹೊಗುವ 9ನೇ ಕ್ರಾಸ್ ನ ಕಚ್ಚಾ ರಸ್ತೆಗೆ ಆರೋಪಿಯನ್ನು ಕರೆದುಕೊಂಡು ಹೋಗಿ ಅಲ್ಲಿ ಗಂಗಾಧರ @ ದಾಸನು ಆರೋಪಿ ಆನಂದ @-ಕಬಾಬ್ ಆನಂದನನಿಗೆ ಹೊಡೆಯಲು ಹೋದಾಗ ಆರೋಪಿ ಆನಂದ @ ಕಬಾಬ್ ಆನಂದನು ತನ್ನನ್ನು ಹೊಡೆಯಲು ಬಂದಿದ್ದ ಗಂಗಾಧರ @ ದಾಸನ ಕೈಯಲ್ಲಿದ್ದ ಮಚ್ಚನ್ನು ಕಿತ್ತುಕೊಂಡು ಗಂಗಾಧರ @ ದಾಸನ ತಲೆ, ಮುಖಕ್ಕೆ ಮತ್ತು ದೇಹದ ಇತರೆ ಭಾಗಗಳಿಗೆ 7 ರಿಂದ 8 ಬಾರಿ ಭೀಕರವಾಗಿ ಕತ್ತರಿಸಿ ಕೊಲೆ ಮಾಡಿರುತ್ತಾನೆ ನಂತರ ಬಿಡಿಲಸು ಅಡ್ಡ ಬಂದ ಪವನ್ ಕುಮಾರನಿಗೂ ಸಹ ಹೊಡೆದು ಗಂಭೀರ ಸ್ವರೂಪದ ರಕ್ತಗಾಯ ಮಾಡಿ ಕೊಲೆ ಪ್ರಯತ್ನ ಮಾಡಿರುತ್ತಾನೆಂಬುದು ತನಿಖೆಯಿಂದ ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಅಂದಿನ ತನಿಖಾಧಿಕಾರಿಗಳಾದ ಸಿದ್ದರಾಜು.ಜಿ, ಪೊಲೀಸ್ ಇನ್ಸೆಕ್ಟರ್ ರವರು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು, ನ್ಯಾಯಾಲಯದಲ್ಲಿ ಪೊಲೀಸ್ ಸಿಬ್ಬಂದಿಗಳಾಗದ ಶಿವಕುಮಾರ್ ಎ.ಜಿ ಮತ್ತು ಚಿತ್ರಲಿಂಗ. ಬಿ ರವರುಗಳು ವಿಚಾರಣೆಗೆ ಸಹಕರಿಸಿದ್ದರು.

    ಸದರಿ ಪ್ರಕರಣವು ಘನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಪೀಠಾಸೀನ ದೊಡ್ಡಬಳ್ಳಾಪುರ ದಲ್ಲಿ ಎಸ್.ಸಿ.ನಂ:10015/2019 ರಂತೆ ವಿಚಾರಣೆ ನಡೆದಿದ್ದು, ಸದರಿ ಪ್ರಕರಣದ ಆರೋಪಿ ಆನಂದ @ ಕಬಾಬ್ ಆನಂದನು ಐ.ಪಿ.ಸಿ. ಕಲಂ;302 ರ ಅಡಿಯಲ್ಲಿ ಅಪರಾಧ ಎಸಗಿರುವುದು ಸಾಭೀತಾದ ಹಿನ್ನೆಲೆಯಲ್ಲಿ ಘನ ನ್ಯಾಯಾಧೀಶರಾದ ಶ್ರೀಮತಿ. ನಿರ್ಮಲ. ಕೆ ರವರು ದಿನಾಂಕ:03.07.2026 ರಂದು ಪ್ರಕರಣದ ಆರೋಪಿಗೆ ಐ.ಪಿ.ಸಿ ಕಲಂ;302 ರ ಶಿಕ್ಷಾರ್ಹ ಅಪರಾಧಕ್ಕಾಗಿ ಆಜೀವ ಕಾರಾಗೃಹ ವಾಸ (ಜೀವಾವಧಿ) ಶಿಕ್ಷೆ ಹಾಗೂ 20,000/- (ಇಪ್ಪತ್ತು ಸಾವಿರ) ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.

    ಸರ್ಕಾರದ ಪರವಾಗಿ ಅಭಿಯೋಜನೆ ಇಲಾಖೆ ವತಿಯಿಂದ ಸರ್ಕಾರಿ ಅಭಿಯೋಜಕರಾದ ಶ್ರೀ. ಟಿ.ಎನ್ ನಟರಾಜ ರವರು ವಾದ ಮಂಡಿಸಿದ್ದರು ಹಾಗೂ ಮಾನ್ಯ ಅಭಿಯೋಜನಾ ನಿರ್ದೇಶಕರಾದ (ಪ), ಶ್ರೀಮತಿ. ಅಂಜನಾ ಚವ್ಹಾಣ್ ರವರು ಪ್ರಕರಣದ ವಿಚಾರಣಾ ಮೇಲುಸ್ತುವಾರಿ ನಿಗಾ ವಹಿಸಿದ್ದರು.

  • ನೀಟ್ ಪೇಪರ್ ಲೀಕ್: ಮಹದೇವಪುರದಲ್ಲಿ ಯುವ ಕಾಂಗ್ರೆಸ್‌ನಿಂದ ಬೃಹತ್ ಪಂಜಿನ ಮೆರವಣಿಗೆ.

    ನೀಟ್ ಪೇಪರ್ ಲೀಕ್: ಮಹದೇವಪುರದಲ್ಲಿ ಯುವ ಕಾಂಗ್ರೆಸ್‌ನಿಂದ ಬೃಹತ್ ಪಂಜಿನ ಮೆರವಣಿಗೆ.

    ಮಹದೇವಪುರ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ‘ನೀಟ್’ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕೆಂದು ಆಗ್ರಹಿಸಿ ಮಹದೇವಪುರ ಕ್ಷೇತ್ರದ ಕನ್ನಮಂಗಲದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪಂಜಿನ ಮೆರವಣಿಗೆಯನ್ನು ನಡೆಸಿ ತೀವ್ರ ಪ್ರತಿಭಟನೆ ನಡೆಸಿದರು.


    ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಯಾದವ್ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಪ್ರತಿಭಟನೆಯಲ್ಲಿ ನೂರಾರು ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ದೇಶದ ಶಿಕ್ಷಣ ವ್ಯವಸ್ಥೆ ಹೊಣೆಗಾರಿಕೆ ಹೊಂದಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಕೆಪಿವೈಸಿಸಿ) ವತಿಯಿಂದ ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ‌ ಧ್ವನಿ) ಅಭಿಯಾನದ ಎರಡನೇ ಬೃಹತ್ ಪಂಜಿನ ಮೆರವಣಿಗೆ ನಡೆಸಲಾಯಿತು.

    ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮಾಸ್ಕ್(ಮುಖವಾಡ) ಧರಿಸಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸುವ ಫಲಕ (ಪ್ಲಕಾರ್ಡ್) ಹಾಗೂ ಪಂಜನ್ನು ಹಿಡಿದು, ಪಾರದರ್ಶಕ ಶಿಕ್ಷಣ, ವ್ಯವಸ್ಥೆಯ ಉತ್ತರದಾಯಿತ್ವ ಹಾಗೂ ಸೋರಿಕೆ, ಅಕ್ರಮ ರಹಿತ ಪರೀಕ್ಷೆಗಳಿಗಾಗಿ ಮೆರವಣಿಗೆ ಸಾಗಿದರು.

    ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, ಅಸಮರ್ಥ ಕೇಂದ್ರ ಶಿಕ್ಷಣ ಸಚಿವ ಹಾಗೂ ಎನ್ ಟಿ ಎ ಎಂಬ ಭ್ರಷ್ಟರ ಕೂಪದಿಂದ ಇಂದು ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಜೀವ ಕಳೆದುಕೊಳ್ಳುತ್ತಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಭವಿಷ್ಯದಲ್ಲಿ ಯಾವುದೇ ವಿದ್ಯಾರ್ಥಿಯೂ ವ್ಯವಸ್ಥೆಯ ಲೋಪದಿಂದ ಸಾಯಬಾರದು. ಲೋಪಮುಕ್ತ ವ್ಯವಸ್ಥೆ ಜಾರಿಗೊಳಿಸುವುದು ಪ್ರತೀ ನಾಗರಿಕನ ಕರ್ತವ್ಯವಾ
    ಗಿದ್ದು, ಪಾರದರ್ಶಕ ಶಿಕ್ಷಣ ವ್ಯವಸ್ಥೆಗಾಗಿನ ನಮ್ಮ ಹೋರಾಟ ದೇಶದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಹುಟ್ಟುಹಾಕಲಿದೆ ಎಂದು ಭರವಸೆ ನೀಡಿದರು.

    ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಬೇಕು. ಎನ್‌ಟಿಎ ವ್ಯವಸ್ಥೆಯ ವಿರುದ್ಧ ಸಮಗ್ರ ತನಿಖೆ ಮತ್ತು ಸುಧಾರಣೆ ಆಗಬೇಕು. ಪರೀಕ್ಷೆಗಳು, ಫಲಿತಾಂಶಗಳು ಮತ್ತು ಉದ್ಯೋಗಾವಕಾಶಗಳಿಗಾಗಿ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿ ಸಿದ್ಧಪಡಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂಬುದು ನಮ್ಮ ಅಭಿಯಾನದ ಪ್ರಮುಖ ಬೇಡಿಕೆಗಳಾಗಿದ್ದು, ಇವುಗಳು ಈಡೇರುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.

    ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ,
    ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶದ ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದೆ. ಈ ಹಗರಣದಿಂದಾಗಿ ದೇಶದ ಉನ್ನತ ಪರೀಕ್ಷಾ ವ್ಯವಸ್ಥೆಯ ಮೇಲಿದ್ದ ನಂಬಿಕೆಯೇ ಸಂಪೂರ್ಣವಾಗಿ ಕುಸಿದುಹೋಗಿದೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದರು.

    ಕರ್ನಾಟಕದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ಈ ಪರೀಕ್ಷೆ ಬರೆದಿದ್ದರು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ, ಪ್ರಯಾಣ ಸೇರಿದಂತೆ ಸಾಕಷ್ಟು ಖರ್ಚುಗಳನ್ನು ಮಾಡಿದ್ದರು. ಆದರೆ, ಕೇಂದ್ರದ ಒಂದು ನಿರ್ಧಾರ ಇಡೀ ವಿದ್ಯಾರ್ಥಿ ಸಮುದಾಯವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ತಿಳಿಸಿದರು.

    ಹೊಣೆ ಹೊರಬೇಕಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಯುವಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ , ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ.

    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ಕೂಗಿದರು. ಮಾಜಿ ಸಂಸದ ರಾಜೀವ್ ಗೌಡ, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಮೋಹನ್,  ಮಾಜಿ‌ ಶಾಸಕರಾದ ಎಚ್. ನಾಗೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್, ಕೆಪಿಸಿಸಿ ಸದಸ್ಯರಾದ ಜಯರಾಮ್ ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ಉದಯಕುಮಾರ್, ಗುಂಜುರು ರಾಮಕೃಷ್ಣಪ್ಪ,
    ಕೃಷ್ಣರೆಡ್ಡಿ,ಚಂದ್ರಾರೆಡ್ಡಿ, ಬಾಬುಗೌಡ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ರೆಡ್ಡಿ, ಯುವ ಮುಖಂಡರಾದ ಜಾಯ್ಸನ್ ಬಾಲರಾಜ್ ಪಟೇಲ್, ಭರತ್ ಯಾದವ್, ನದೀಂ ಅಕ್ರಂ, ಟಿಪ್ಪು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

  • ದೊಡ್ಡಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರದ ಕೆಐಎಡಿಬಿ ಉಪ ವಿದ್ಯುತ್‌ ಕೇಂದ್ರದ ಫೀಡರ್ ಗಳಲ್ಲಿ ವಿದ್ಯುತ್ ಕಾಮಗಾರಿ ನಡೆಯುವುದರಿಂದ ಜುಲೈ 7ರಂದು ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 02:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿದ್ಯುತ್‌ ಅಡಚಣೆಯಾಗುವ ಪ್ರದೇಶಗಳು:

    ಸೋಮೇಶ್ವರ ಬಡಾವಣೆ, ರೋಜಿಪುರ, ವಿನಾಯಕನಗರ, ಗಂಗಾಧರಪುರ, ಬಸವೇಶ್ವರನಗರ, ದೊಡ್ಡಮ್ಮ ದೇವಸ್ಥಾನ, ಶಾಂತಿನಗರ, ಇಸ್ಲಾಂಪುರ, ತ್ಯಾಗರಾಜನಗರ, ಕಲ್ಲುಪೇಟೆ, ಕರೇನಹಳ್ಳಿ, ದೇವರಾಜನಗರ, ಕೊಂಗಾಡಿಯಪ್ಪ ಮೈನ್‌ರೋಡ್, ದೇವರಾಜನಗರ, ಕನಕದಾಸರಸ್ತೆ, ಬಸವಣ್ಣ ದೇವಸ್ಥಾನದ ರಸ್ತೆ, ವೀರಾಪುರ, ಖಾಸ್‌ಬಾಗ್, ರಂಗಪ್ಪ ಸರ್ಕಲ್, ಗಾಂಧಿನಗರ, ತೇರಿನಬೀದಿ, ಕೊಂಗಾಡಿಯಪ್ಪ ಮೈನ್ ರೋಡ್, ಸಂಜಯನಗರ, ಕೆ.ಸಿ.ಪಿ.ಸರ್ಕಲ್, ಬಸವಣ್ಣ ದೇವಸ್ಥಾನ ರಸ್ತೆ, ಆಲಹಳ್ಳಿ, ನಾಗಸಂದ್ರ, ಕುಚ್ಚಪ್ಪನಪೇಟೆ,, ಸಂಜಯ್‌ ನಗರ, ಭುವನೇಶ್ವರಿನಗರ, ಚೈತನ್ಯನಗರ, ವೀರಾಪುರ, ಗಾಂಧಿನಗರ, ಖಾಸ್‌ಬಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  • ದೊಡ್ಡಬಳ್ಳಾಪುರದಲ್ಲಿ ಇಂದು ವಿದ್ಯುತ್ ಸ್ಥಗಿತ

    ದೊಡ್ಡಬಳ್ಳಾಪುರದಲ್ಲಿ ಇಂದು ವಿದ್ಯುತ್ ಸ್ಥಗಿತ

    ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

     

    ದೊಡ್ಡಬಳ್ಳಾಪುರ ನಗರದಲ್ಲಿ ದಿನಾಂಕ:-03/07/2026 ರಂದು 66/11ಕೆವಿ ತೂಬಗೆರೆ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F01-Pragathi, F02-Tapasipura, ಫೀಡರ್‌ಗಳಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 03:00 ಗಂಟೆವರೆಗೆ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸದರಿ ಫೀಡರ್‌ನ ಮಾರ್ಗಗಳಲ್ಲಿ ಮೇಲ್ಕಂಡ ಸಮಯದಲ್ಲಿ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಲಾಗಿದೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ಗಂಟಗಾನಹಳ್ಳಿ, ಕಾವಲಹಳ್ಳಿ, ಮಾರಹಳ್ಳಿ, ಭೂಮೇನಹಳ್ಳಿ, ಮೆಳೇಕೋಟೆ, ಚಿಕ್ಕರಾಯಪ್ಪನಹಳ್ಳಿ, ದೊಡ್ಡರಾಂಯಪ್ಪನಹಳ್ಳಿ, ಸಾಧುಮಠ, ಸೊಣ್ಣಾಪುರ, ಚೌಗೊಂಡನಹಳ್ಳಿ, ಮುಕ್ಕೇನಹಳ್ಳಿ, ಮೆಳೇಕೋಟೆ ಕ್ರಾಸ್, ಊದನಹಳ್ಳಿ, ಹೆಗ್ಗಡಿಹಳ್ಳಿ, ಕಣಿವೇಪುರ, ಸೊಣ್ಣಮಾರನಹಳ್ಳಿ, ಮಾಚಗೊಂಡನಹಳ್ಳಿ, ಗೂಳ್ಯ, ನಂದಿಗುಂದ, ದಂಡುದಾಸ ಕೊಡಿಗೇಹಳ್ಳಿ, ವಾಸುದೇವನಹಳ್ಳಿ, ಕುರುಬರಹಳ್ಳಿ, ಸೀಗೇಹಳ್ಳಿ, ಚನ್ನಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.