Blog

  • ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಭಾನುವಾರ ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಭಾನುವಾರ ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಸೆ.27ರ ಭಾನುವಾರ ವಿದ್ಯುತ್ ಪೂರೈಕೆ ಸ್ಥಗಿತ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಪೆರಲ್ ಪಾರ್ಕ್ ಉಪ ವಿದ್ಯುತ್ ಕೇಂದ್ರದ ಫೀಡರ್‌ನ ಮಾರ್ಗಗಳಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಿದ್ದಾರೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ರೈಲ್ವೆ ಸ್ಟೇಷನ್, ಮುತ್ತೂರು, ಸಿದ್ದೇನಾಯಕನಹಳ್ಳಿ, ಎಂ.ಎ.ಪ್ರಕಾಶ್ ಲೇಔಟ್, ಎಂ.ಜಿ.ಗಾರ್ಡನ್ ಲೇಔಟ್, ಸದಾಶಿವನಗರ ಲೇಔಟ್, ಸರ್ವಜ್ಞನಗರ, ಖಾಸ್‌ಬಾಗ್, ಚಂದ್ರಶೇಖರಪುರ, ಶ್ರೀನಗರ, ಸೌಂಟ್ ಕ್ಯಾಂಪ್ ರಸ್ತೆ, ರಘುನಾಥಪುರ, ಬಾಶೆಟ್ಟಿಹಳ್ಳಿ, ತಮ್ಮಶೆಟ್ಟಿಹಳ್ಳಿ, ಎಲ್‌&ಟಿ ಕಾರ್ಖಾನೆ, ಇಂಡೇನ ಇಂಡಿಯಾ, ಇಟಾಚಿ ಕಾರ್ಖಾನೆ, ಸಂಧ್ಯಾ ಫಾರಂ, ಐಸಿ ಫ್ರೆಷ್, ರಾಜಶ್ರೀ ಕಂಫರ್ಟ್, ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  • ಬೆಳ್ಳಂಬೆಳಗ್ಗೆ ಅಪಘಾತ, ಓರ್ವ ಸಾವು

    ಬೆಳ್ಳಂಬೆಳಗ್ಗೆ ಅಪಘಾತ, ಓರ್ವ ಸಾವು

    ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಾಕಳಿ ರೈಲ್ವೆ ನಿಲ್ದಾಣದ ಸಮೀಪ ಹಿಂದೂಪುರ-ಯಲಹಂಕ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

    ಮೃತರನ್ನು ಮಾಕಳಿ ಗ್ರಾಮದ ಗಂಗರಾಜು (34) ಎಂದು ಗುರುತಿಸಲಾಗಿದೆ. ಅವರು ಮಾಕಳಿ ಬೆಟ್ಟದಲ್ಲಿ ಟ್ರಕ್ಕಿಂಗ್ ಗೈಡ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸದ ನಿಮಿತ್ತ ಬೆಳಗ್ಗೆ ಮನೆಯಿಂದ ಬರುವ ವೇಳೆ, ಗೌರಿಬಿದನೂರು ಕಡೆಯಿಂದ ಬರುತ್ತಿದ್ದ ಮತ್ತೊಂದು ಬೈಕ್ ಇವರ ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ಜಖಂಗೊಂಡಿದ್ದು, ಗಂಗರಾಜು ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನ ಸವಾರನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ದೊಡ್ಡಬಳ್ಳಾಪುರ ನಗರದಲ್ಲಿ ಸೆ.26 ರಂದು ವಿದ್ಯುತ್​ ಸ್ಥಗಿತ

    ದೊಡ್ಡಬಳ್ಳಾಪುರ ನಗರದಲ್ಲಿ ಸೆ.26 ರಂದು ವಿದ್ಯುತ್​ ಸ್ಥಗಿತ

    ದೊಡ್ಡಬಳ್ಳಾಪುರ ನಗರದ ಪ್ರಮುಖ ಭಾಗಗಳಲ್ಲಿ ಸೆ.26ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ DF1-Local-2 ಫೀಡರ್‌ನ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಈ ಫೀಡರ್‌ನ ಮಾರ್ಗಗಳಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ಕೋರ್ಟ್ ರಸ್ತೆ, ಮಾರುತಿನಗರ, ಭಗತ್‌ಸಿಂಗ್ ಸ್ಟೇಡಿಯಂ, ಪೋಸ್ಟ್ ಆಫೀಸ್, ತಾಲ್ಲೂಕು ಆಫೀಸ್ ಸರ್ಕಲ್, ನಗರಸಭೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ. (ಕೊನಯ ಕ್ಷಣದ ಬದಲಾವಣೆ ಹೊರತುಪಡಿಸಿ).

  • ಜನ ಸಾರ್ವಜನಿಕವಾಗಿ ಬೇಕಾಗಿರುವ ಕೆಲಸಗಳಿಗೆ ಧ್ವನಿ ಎತ್ತಬೇಕು: ಪೂರ್ಣಿಮಾ ಶ್ರೀನಿವಾಸ್

    ಜನ ಸಾರ್ವಜನಿಕವಾಗಿ ಬೇಕಾಗಿರುವ ಕೆಲಸಗಳಿಗೆ ಧ್ವನಿ ಎತ್ತಬೇಕು: ಪೂರ್ಣಿಮಾ ಶ್ರೀನಿವಾಸ್

    ಕೆ.ಆರ್ .ಪುರ: ಗಣೇಶ ದೇವರು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ ಅದಕ್ಕಾಗಿ ಎಲ್ಲರೂ ಸೇರಿ ಆಚರಿಸುವುದು’ ಎಂದು ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್‌ ತಿಳಿಸಿದರು.

    ಕೆ.ಆರ್. ಪುರ ಸಂತೆಯಲ್ಲಿ ಸಂತೆ ಮಕ್ಕಳು ಎಲ್.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 36 ನೇ ವರ್ಷದ ಗಣೇಶ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

    ‘ಬಾಲಗಂಗಾಧ‌ರ್ ತಿಲಕರು ಸ್ವತಂತ್ರ ಪೂರ್ವದಲ್ಲೇ ಗಣೇಶ ಹಬ್ಬ ಆಚರಿಸಿ ಒಂದಾಗಿಸಿ ಬ್ರಿಟೀಷರ ವಿರುದ್ಧ ಓಡಿಸಿದರು. ಬ್ರಿಟೀಷರ ಮಾದರಿ ನಮ್ಮಲ್ಲೇ ಹುಟ್ಟಿಕೊಂಡಿದ್ದಾರೆ ಅವರನ್ನು ಓಡಿಸಬೇಕು’ ಎಂದು ಹೇಳಿದರು.

    ಹಣಕ್ಕೆ ಕೈ ಚಾಚದೆ ಕಾರ್ಯಕ್ರ ಮಗಳನ್ನು ಮಾಡುತ್ತಿರುವ ಸಂತೆ ಮಕ್ಕಳು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂತೆ ಮಕ್ಕಳ ಗಣೇಶೋತ್ಸವದಲ್ಲಿ ಎಲ್ಲಾ ಧರ್ಮದ ಜನ ಪಾಲ್ಗೊಂಡಿರುವುದು ತುಂಬಾ ಸಂತೋಷ ತಂದಿದೆ ಎಂದರು

    ಸಾರ್ವಜನಿಕವಾಗಿ ಬೇಕಾಗಿರುವ ಕೆಲಸಗಳಿಗೆ ಧ್ವನಿ ಎತ್ತಬೇಕು. ಸ್ಯಾಟಲೈಟ್ ಬಸ್ ನಿಲ್ದಾಣ ಕೇಳಿದ್ದು ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುತ್ತೇನೆ, ಜಾಗ ಇದೆ ಅಂತ ಹೇಳಿದ್ದಾರೆ ನಮ್ಮ ಪ್ರಯತ್ನ ಮಾಡಿ ಸುತ್ತೇವೆ ಎಂದು ಹೇಳಿದರು.

    ಎ.ಕೃಷ್ಣಪ್ಪ ರವರ ಕನಸು ನನಸಾಗಿಸಲು ನನ್ನ ಕೈಲಾದಷ್ಟು ಪ್ರಯತ್ನ ಪಡುತ್ತೇನೆ ಮುಂದಿನ್ಱ್ ದಿನಗಳಲ್ಲಿ ನಿಮ್ಮ ಸಹಾಯ ಬೇಕು ಎಂದರು.

    ಕೆ ಆರ್ ಪುರ ಜೆ ಸಿ ಅವರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತಿ ದ್ದಾರೆ. ಸಂತೆಯಲ್ಲಿ ಸಿಮೆಂಟ್ ರಸ್ತೆ ಮಾಡಲು ಎಸ್ಟಿಮೇಟ್ ಮಾಡಿಸಿ ಸರ್ಕಾರ ಗಮನಕ್ಕೆ ತಂದು ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

    ಎಲ್.ಶ್ರೀನಿವಾಸ್ ಮಾತನಾಡಿ, ‘ಕೆ.ಆರ್. ಪುರಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣ ಬೇಕು ಸಾಕಷ್ಟು ಸ್ವಯಂ ಉದ್ಯೋಗ ಸೃಷ್ಟಿಯಾಗಿತ್ತೆ, ಬಸ್ ನಿಲ್ದಾಣ ಆದರೆ ಮಾರ್ಕೆಟ್ ಆಟೋಮಿಟಿಕ್ ಅಭಿವೃದ್ಧಿ ಆಗುತ್ತೆ ‘ಎಂದು ಹೇಳಿದರು.

    ಅ.2 ರಂದು ಬಿಬಿಎ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಅತೀ ಶೀಘ್ರದಲ್ಲೇ ಒಂದು ಸಾವಿರ ಶಿಕ್ಷಕರನ್ನು ಕರೆಸಿ ಗುರುವಂದನಾ ಕಾರ್ಯಕ್ರಮ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

    ಜಂಟಿ ಆಯುಕ್ತ ಡಾ.ಸುಧಾ ಮಾತನಾಡಿ, ಭಾವೈಕ್ಯತೆಗೆ ಧಕ್ಕೆ ಆಗದಂತೆ ಆಚರಿಸುವ ಹಬ್ಬ ವಿನಾಯಕ ಹಬ್ಬ, ಭಾರತೀಯ ಸಂಸ್ಕೃತಿ ಎತ್ತಿಹಿಡಿಯುವ ಹಬ್ಬ ವಿನಾಯಕ ಉತ್ಸವ ಎಂದು ಹೇಳಿದರು.

    ಐತಿಹಾಸಿಕ ಸಂತೆ ಮಾರುಕಟ್ಟೆ ಇಟ್ಟುಕೊಂಡು ಬಜೆಟ್ ಮಂಡನೆ ಆಗಿದ್ದು, ಪ್ರಾಜೆಕ್ಟ್ ರೆಡಿ ಇದೆ. ನೀವು ಕಟ್ಟಿರುವ ತೆರಿಗೆ ಸಾಕು ಅಭಿವೃದ್ಧಿ ಮಾಡಲು, ನಿರ್ಮಾಣ ಮಾಡಿಕೊಟ್ಟಾಗ ನಿರ್ವಹಣೆ ಮಾಡಿಕೊಳ್ಳಿ ಎಂದರು.

    ಈ ಸಂದರ್ಭದಲ್ಲಿ ಮುಖಂಡ ರಾದ ಚನ್ನ ಕೇಶವ, ನಿಖಿಲ್, ಸಂತೆ ಮಕ್ಕಳು ಮತ್ತಿತರರಿದ್ದರು.

  • ಲಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಸಾವು

    ಲಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಸಾವು

    ದೊಡ್ಡಬಳ್ಳಾಪುರ: ನಿಂತಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹುಲಿಕುಂಟೆ ಟೋಲ್ ಸಮೀಪದ ಚಿಕ್ಕಲಯ್ಯನಪಾಳ್ಯ ಬಳಿ ಇಂದು ಬೆಳಗ್ಗೆ ನಡೆದಿದೆ.

    ಅಪಘಾತದಲ್ಲಿ ದೊಡ್ಡಬೆಳವಂಗಲ ಸಮೀಪದ ಅಜ್ಜನಕಟ್ಟೆ ಗ್ರಾಮದ ಚಂದನ್ ಎಚ್ (23) ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಚೇತನ್ ಎಂಬ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಪಕ್ಷ ಟಿಕೆಟ್ ನೀಡಿದರೆ ಕೆ ಆರ್.ಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಾಗಿದ್ದೇನೆ : ಎನ್‌.ಎಸ್.ನಂದೀಶ್ ರೆಡ್ಡಿ

    ಪಕ್ಷ ಟಿಕೆಟ್ ನೀಡಿದರೆ ಕೆ ಆರ್.ಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಾಗಿದ್ದೇನೆ : ಎನ್‌.ಎಸ್.ನಂದೀಶ್ ರೆಡ್ಡಿ

    ಕೆ.ಆರ್.ಪುರ: ಬಿಜೆಪಿ ಪಕ್ಷ ಅವಕಾಶ ಮಾಡಿಕೊಟ್ಟರೆ ಕೆ.ಆರ್.ಪುರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೆನೆ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ಎಸ್.ನಂದೀಶ್ ರೆಡ್ಡಿ ಅವರು ತಿಳಿಸಿದರು.

    ಕೆ.ಆರ್.ಪುರದ ಸಂತೆಯಲ್ಲಿ ಸಂತೆ ಮಕ್ಕಳು ಏರ್ಪಡಿಸಿದ್ದ ಗಣೇಶೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೆ.ಆರ್.ಪುರ ಕ್ಷೇತ್ರ ನನ್ನ ಕರ್ಮಭೂಮಿ ಎಂದು ಹೇಳಿದರು.

    ಕ್ಷೇತ್ರದ ಜನತೆ ನನಗೆ ಅತಿಹೆಚ್ಚು ಪ್ರೀತಿ ನೀಡಿದ್ದು,ಅವರ ಪ್ರೀತಿಗೆ ನಾನು ಚಿರಖುಣಿ ಅವರ ಸೇವೆ ಮಾಡಲು ನನಗೆ ಅವಕಾಶ ದೊರೆತರೆ ಸದಾಸಿದ್ಧ ಎಂದು ಹೇಳಿದರು.

    2008 ರ ಅವಧಿಯಲ್ಲಿ ಕ್ಷೇತ್ರಕ್ಕೆ ಕಾವೇರಿ ನೀರು ತಂದರೂ ಇದುವರೆಗೆ ಕ್ಷೇತ್ರದ ಸಂಪೂರ್ಣ ಭಾಗಕ್ಕೆ ನೀರಿನ ವ್ಯವಸ್ಥೆ ಹಾಗೂ ಸುಸಜ್ಜಿತ ನೀರಿನ ಟ್ಯಾಂಕರ್ ನಿರ್ಮಾಣ ಮಾಡಲು ಆಗದೇ ಇರುವುದು ವಿರ್ಪಯಾಸ ಎಂದು ಹೇಳಿದರು.

    ಸರ್ಕಾರಿ ಭೂಮಿಗಳ ರಕ್ಷಣೆಯಾಗದೆ ಭೂಗಳ್ಳರ ಪಾಲಾಗುತ್ತಿದೆ,ಕ್ಷೇತ್ರದ ಜನತೆಗೆ ತೊಂದರೆಯಾದರೆ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ, ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದರು.

    ಕೆ.ಆರ್.ಪುರದಲ್ಲಿ ನಿಮಾನ್ಸ್ ಆಸ್ಪತ್ರೆ ಸೇರಿದಂತೆ,
    ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಾರ್ಯಮಾಡುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ವೀರಣ್ಣ,ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ.ಶ್ರೀನಿವಾಸ್ ಮತ್ತಿತರರು ಇದ್ದರು.

  • ಪ್ರಧಾನಿ ನರೇಂದ್ರ ಮೋದಿ ಜನ್ಮದಿನ : ವಿಶೇಷ ಪೂಜೆ, ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಿದ ಶಾಸಕ‌ ಬೈರತಿ‌ ಬಸವರಾಜ್.

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ : ವಿಶೇಷ ಪೂಜೆ, ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಿದ ಶಾಸಕ‌ ಬೈರತಿ‌ ಬಸವರಾಜ್.

    ಕೆ.ಆರ್.ಪುರ: ಪ್ರಧಾನ ಮಂತ್ರಿ‌ ನರೇಂದ್ರ ಮೋದಿಯವರ 76ನೇ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೇಡ್ ವಿತರಣೆ ಮಾಡುವುದರ ಮೂಲಕ ಶಾಸಕ ಬೈರತಿ ಬಸವರಾಜ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಜನಪರ ಯೋಜನೆ ಜಾರಿಗೆ ತರುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ, ವಿಶ್ವದಲ್ಲೇ ನಮ್ಮ ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಒಂದು ದಿನ ವಿಶ್ರಮಿಸದೆ ಸದಾ ಕಾಲ ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ಮೋದಿ ಅವರ ಜನ್ಮದಿನವನ್ನು ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಎಂದು ಆರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದು ಅವರ ನೇತೃತ್ವದಲ್ಲಿ ಭಾರತ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

    ಇಂದು ಸಂಜೆ 6 ರಿಂದ ರಾತ್ರಿ 7 ರೊಳಗೆ ಎಲ್ಲರೂ ಮನೆಯಲ್ಲಿ ದೀಪ ಬೆಳಗುವ ಮೂಲಕ ಕೈಜೋಡಿಸಬೇಕು ಮನವಿ ಮಾಡಿದರು.

    ನರೇಂದ್ರ ಮೋದಿ ಅವರ ಹೆಸರಿನಲ್ಲಿ ಕಟ್ಟೆವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಶಾಸಕರು ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶದ ಅಭಿವೃದ್ಧಿ ಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಆವರಣದಲ್ಲಿ ಭಕ್ತಿಭಾವದಿಂದ ಪೂಜಾ ಕಾರ್ಯಕ್ರಮ ನೆರವೇರಿಸ ಲಾಯಿತು. ಜನ್ಮದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹದ ವಾತಾವರಣ ಕಂಡುಬಂದಿತು.

    ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಮುನೇಗೌಡ ಮಾಜಿ ಪಾಲಿಕೆ ಸದಸ್ಯರಾದ ಗೀತಾವಿವೇಕಾನಂದ, ಅಂತೋಣಿ ಸ್ವಾಮಿ,ಶ್ರೀಕಾಂತ್ ಮುಖಂಡರಾದ ಕೆ.ಹೇಂಮತ್,ಜಿಮ್ ರಮೇಶ್ ಗೌಡ,,ಶಿವಪ್ಪ,ಶ್ರೀನಿವಾಸ್,ಗಿರೀಶ್, ಮತ್ತಿತರರು ಇದ್ದರು.

  • ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜಗಳಿಗೆ ನಿಗಮದಿಂದ ಅರ್ಜಿ ಆಹ್ವಾನ

    ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜಗಳಿಗೆ ನಿಗಮದಿಂದ ಅರ್ಜಿ ಆಹ್ವಾನ

    ಬೆಂ.ಗ್ರಾ ಜಿಲ್ಲೆ ; ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ಸ್ವಯಂ-ಉದ್ಯೋಗ ನೇರಸಾಲ ಯೋಜನೆ, ಬ್ಯಾಂಕ್ಗಳ ಸಹಯೋಗದೊಂದಿಗೆ ಆರ್ಯವೈಶ್ಯ ಆಹಾರ ವಾಹಿನಿ/ವಾಹಿನಿ ಯೋಜನೆ, ವಾಸವಿ ಗಂಗಾ ಕಲ್ಯಾಣ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಆನ್ ಲೈನ್ ವಿಳಾಸ https//kacdc.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ ಅಕ್ಟೋಬರ್ 15, 2026.

    ಹೆಚ್ಚಿನ ವಿವರಗಳಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ 9448451111/9611612302 ಹಾಗೂ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ(ನಿ), ನಂ.101, ಜಿಲ್ಲಾಡಳಿಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋ, ದೇವನಹಳ್ಳಿ ತಾಲ್ಲೂಕು – 562110 ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಮೂವರು ಕಲಾವಿದರು ಯಾರು ಗೊತ್ತಾ…?

    ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಮೂವರು ಕಲಾವಿದರು ಯಾರು ಗೊತ್ತಾ…?

    ಬೆಂಗಳೂರು: ಭಾರತೀಯ ಚಲನಚಿತ್ರ‌‌ ರಂಗಕ್ಕೆ ಸಲ್ಲಿಸಿದ ಜೀವಮಾನದ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ವಿಶೇಷ ಸ್ಥಾನವಿದೆ. 1969ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಸಿನಿಮಾ ನಟ-ನಟಿಯರು ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಲಾವಿದರು ಹಾಗೂ ತಂತ್ರಜ್ಞರಿಗೂ ಈ ಗೌರವ ಲಭಿಸಿದೆ.

    ಇದುವರೆಗೆ 54 ಮಂದಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದು, ಈ ಪೈಕಿ ಕರ್ನಾಟಕದ ಮೂವರು ಸಿನಿಮಾ ದಿಗ್ಗಜರು ಈ ಪ್ರತಿಷ್ಠಿತ ಗೌರವವನ್ನು ಪಡೆದಿದ್ದಾರೆ. ಹಾಗಾದರೆ ಆ ಮೂವರು ಯಾರು ಅಂತಾ ನೋಡೋಣ..

    ಡಾ. ರಾಜ್‌ಕುಮಾರ್
    ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾಗಿದ್ದಾರೆ. ಚಿತ್ರರಂಗಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ 1995ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

    ನಟನೆ, ಗಾಯನ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯಿಂದ ಡಾ. ರಾಜ್‌ಕುಮಾರ್ ಅವರು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

    ವಿಕೆ ಮೂರ್ತಿ
    ಮೈಸೂರಿನವರಾದ ವಿಕೆ ಮೂರ್ತಿ ಅವರು ಹಿಂದಿ ಚಿತ್ರರಂಗದಲ್ಲಿ ಖ್ಯಾತ ಸಿನಿಮಾಟೊಗ್ರಾಫರ್‌ ಆಗಿ ಗುರುತಿಸಿಕೊಂಡಿದ್ದರು. ನಿರ್ದೇಶಕ ಗುರುದತ್ ಅವರೊಂದಿಗೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅವರು, ಹಿಂದಿ ಸಿನಿಮಾದ ಛಾಯಾಗ್ರಹಣ ಕ್ಷೇತ್ರಕ್ಕೆ ತಮ್ಮದೇ ಆದ ಶೈಲಿಯನ್ನು ನೀಡಿದ್ದರು.
    ಕನ್ನಡಿಗರಾದ ವಿಕೆ ಮೂರ್ತಿ ಅವರು 1993ರಲ್ಲಿ ಬಿಡುಗಡೆಯಾದ ‘ಹೂವು ಹಣ್ಣು’ ಸಿನಿಮಾಕ್ಕೆ ಸಿನಿಮಾಟೊಗ್ರಾಫರ್‌ ಆಗಿ ಕೆಲಸ ಮಾಡಿದ್ದರು. ಅವರ ಚಿತ್ರರಂಗದ ಸೇವೆಯನ್ನು ಗುರುತಿಸಿ 2008ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಅನಂತ್ ನಾಗ್
    ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ ಲಭಿಸಿದೆ. ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು, 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ

    ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತೆಲುಗು ಹಾಗೂ ಮರಾಠಿ ಭಾಷೆಯ ಸಿನಿಮಾಗಳಲ್ಲೂ ಅನಂತ್ ನಾಗ್ ಅಭಿನಯಿಸಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಸುದೀರ್ಘ ಸೇವೆಯನ್ನು ಗುರುತಿಸಿ 2024ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

  • ದೊಡ್ಡಬಳ್ಳಾಪುರ ಲಾಡ್ಜ್ ನಲ್ಲಿ ವಿವಾಹಿತ ಮಹಿಳೆ ಶವಪತ್ತೆ

    ದೊಡ್ಡಬಳ್ಳಾಪುರ ಲಾಡ್ಜ್ ನಲ್ಲಿ ವಿವಾಹಿತ ಮಹಿಳೆ ಶವಪತ್ತೆ

    ದೊಡ್ಡಬಳ್ಳಾಪುರ : ನಗರದ ಲಾಡ್ಜ್ ನಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆಯಾಗಿದ್ದು ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೃತ ಮಹಿಳೆಯನ್ನ ವಿದ್ಯಾ (21) ಎಂದು ಗುರುತಿಸಿಲಾಗಿದೆ, ಗೌರಿಬಿದನೂರು ತಾಲೂಕಿನ ಮುದಗೆರೆಯ ನಿವಾಸಿಯಾಗಿದ್ದ ಈಕೆ ಫಾಕ್ಸ್ ಕಾನ್ ಕಂಪನಿಯ ಉದ್ಯೋಗಿಯಾಗಿದ್ದಳು ಎಂದು ತಿಳಿದು ಬಂದಿದೆ. ಮುದಗೆರೆ ಗ್ರಾಮದ ಆನಂದ್ ಎಂಬುವರನ್ನು ಮದುವೆಯಾಗಿದ್ದು, ಇಬ್ಬರು ನಡುವೆ ಹೊಂದಾಣಿಕೆ ಇಲ್ಲದ ಕಾರಣದಿಂದ ಇಬ್ಬರು ಬೇರೆಯಾಗಿ ವಾಸವಾಗಿದ್ದರು.

    ನಿನ್ನೆ ಬೆಳಗ್ಗೆ 11:48 ರ ಸಮಯದಲ್ಲಿ ಗಂಡನ ಜೊತೆಯಲ್ಲಿ ಲಾಡ್ಜ್ ಒಳಗೆ ಹೋಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಲಾಡ್ಜ್ ರೂಮ್ ನಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗಿರುವ ಸಾಧ್ಯತೆ ಇದ್ದು, ಗಂಡ ಆನಂದ್ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ, ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.