Author: Raghavendra H A

  • ದೊಡ್ಡಬಳ್ಳಾಪುರ; ತಾಲ್ಲೂಕಿನ ಈ ಭಾಗದಲ್ಲಿ ಮೇ.5ರಂದು ವಿದ್ಯುತ್ ವ್ಯತ್ಯಯ

    ದೊಡ್ಡಬಳ್ಳಾಪುರ; ತಾಲ್ಲೂಕಿನ ಈ ಭಾಗದಲ್ಲಿ ಮೇ.5ರಂದು ವಿದ್ಯುತ್ ವ್ಯತ್ಯಯ

    ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮೇ.5ರಂದು ಡಿ.ಕ್ರಾಸ್ ಉಪ ವಿದ್ಯುತ್‌ ಕೇಂದ್ರದಿಂದ ಹೊರವೊಮ್ಮುವ ನಂದಿ ಮೋರಿ, ಬೀಡಿಕೆರೆ ಫೀಡರ್‌ಗಳಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ, ಈ ಫೀಡರ್‌ಗಳ ಮಾರ್ಗದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ತಿಮ್ಮಸಂದ್ರ, ಗಂಡರಾಜಪುರ, ಬೀಡಿಕೆರೆ, ಕಂಚಿಗನಾಳ, ಬೀಡಿಕೆರೆ ದುಬೈ ಎಸ್ಟೇಟ್, ಗಡ್ಡಂಬಚ್ಚಹಳ್ಳಿ, ಮುದ್ದನಾಯಕನಪಾಳ್ಯ ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ರಾಜಘಟ್ಟ, ದಾಸಗೊಂಡನಹಳ್ಳಿ, ರಾಮಯ್ಯನಪಾಳ್ಯ ವಡ್ಡರಪಾಳ್ಯ ತೊಗರಿಘಟ್ಟ, ಮೇಡೂರು, ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  • ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ನಗರದ ಹಲವೆಡೆ ಒಂದು ವಾರ ವಿದ್ಯುತ್ ವ್ಯತ್ಯಯ, ಯಾವ ದಿನ ಯಾವ ಊರಲ್ಲಿ ಕರೆಂಟ್ ಕಟ್ ಇಲ್ಲಿದೆ ಮಾಹಿತಿ

    ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ನಗರದ ಹಲವೆಡೆ ಒಂದು ವಾರ ವಿದ್ಯುತ್ ವ್ಯತ್ಯಯ, ಯಾವ ದಿನ ಯಾವ ಊರಲ್ಲಿ ಕರೆಂಟ್ ಕಟ್ ಇಲ್ಲಿದೆ ಮಾಹಿತಿ

    ಅನಿಗಧಿತವಾಗಿ ವಿದ್ಯುತ್ ವ್ಯತ್ಯಯವನ್ನು ತಡೆಯಲು ಹಾಗೂ ಉನ್ನತ ಗುಣಮಟ್ಟದ ನಿರಂತರ ವಿದ್ಯುತ್ ಸರಬರಾಜು ಮಾಡಲು ಈ ಕೆಳಕಂಡ ವಿದ್ಯುತ್ ಮಾರ್ಗಗಳ ನಿರ್ವಹಣೆಯನ್ನು ಯೋಜಿಸಲಾಗಿರುವ ಕಾರಣ ಒಂದು ವಾರಗಳ ಕಾಲ ತಾಲ್ಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ದೊಡ್ಡಬಳ್ಳಾಪುರ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಮೇ ತಿಂಗಳ, ಮೊದಲನೇ ವಾರ (ಶನಿವಾರ ದಿಂದ ಶುಕ್ರವಾರದವರೆಗೆ) ಕೆಳಗೆ ಸೂಚಿಸಿರುವ ವೇಳಾಪಟ್ಟಿಯಂತೆ ಆಯಾ ದಿನದಂದು ಆಯ್ದ ಸ್ಥಳಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಿ, ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಆದ್ದರಿಂದ ಗ್ರಾಹಕರು ಬೆವಿಕಂ.ಗೆ ಸಹಕರಿಸಲು ಹಾಗೂ ತಮ್ಮ ಕಾರ್ಯಗಳನ್ನು ಈ ವೇಳಾಪಟ್ಟಿಗೆ ಅನುಗುಣವಾಗಿ ಯೋಚಿಸಿಕೊಳ್ಳಲು ಈ ಮೂಲಕ ಕೋರಲಾಗಿದೆ.

    ಮೇ- 2 ಶನಿವಾರದಂದು ದೊಡ್ಡಬಳ್ಳಾಪುರ ಟೌನ್ ಮತ್ತು ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಮೇ-3 ರಂದು ಭಾನುವಾರ ಅಪೇರಲ್ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಮೇ-4ರಂದು ಸೋಮವಾರ ದೊಡ್ಡಬಳ್ಳಾಪುರ ಟೌನ್, ಗಂಟಗಾನಹಳ್ಳಿ, ತೂಬಗೆರೆ ತಪಸೀಹಳ್ಳಿಯಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಮೇ-5ರಂದು ಮಂಗಳವಾರ ಕುರುಬರಹಳ್ಳಿ, ರಾಜೀವ್ ಗಾಂಧಿ ಬಡಾವಣೆಯ ಸುತ್ತ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಮೇ-6ರಂದು ಬುಧವಾರ ದೊಡ್ಡಬಳ್ಳಾಪುರ ಟೌನ್, ರಘುನಾಥಪುರದಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಮೇ-7 ರಂದು ಗುರುವಾರ ಮುತ್ತೂರು ಮುತ್ಸಂದ್ರ ರೈಲ್ವೇ ಸ್ಟೇಷನ್ ಗಳಲ್ಲಿ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಮೇ-8ರಂದು ಶುಕ್ರವಾರ ಕೈಗಾರಿಕಾ ಪ್ರದೇಶದ ಸುತ್ತ ಬೆಳಗ್ಗೆ 9ರಿಂದ ಮದ್ಯಾಹ್ನ 2 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  • ಪರಿಷ್ಕೃತ ಒಳ ಮೀಸಲಾತಿ ಅನುಷ್ಠಾನ ಸ್ವಾಗತಾರ್ಹ – ಮಾದಾರ ಮಹಾಸಭ

    ಪರಿಷ್ಕೃತ ಒಳ ಮೀಸಲಾತಿ ಅನುಷ್ಠಾನ ಸ್ವಾಗತಾರ್ಹ – ಮಾದಾರ ಮಹಾಸಭ

    ದೊಡ್ಡಬಳ್ಳಾಪುರ : ಪರಿಷ್ಕೃತ ಒಳಮೀಸಲಾತಿ ಅನುಷ್ಠಾನ ಮಾಡಿರುವುದನ್ನು ಮಾದಿಗ ಸಮುದಾಯ ಸ್ವಾಗತಿಸುತ್ತದೆ ಎಂದು ಮಾದರ  ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ  ಸುಬ್ಬರಾಜು  ತಿಳಿಸಿದರು.

    ನಗರದ ಪ್ರವಾಸಿಮಂದಿರದಲ್ಲಿ ಮದಾರ ಮಹಾ ಸಭಾ ವತಿಯಿಂದ ನಡೆದ ಸುದ್ದಿಗೊಷ್ಟಿಯಲ್ಲಿ ಅವರು ಮಾತನಾಡಿದರು. ಸುಮಾರು 40 ವರ್ಷಗಳ ಹೋರಾಟಕ್ಕೆ ಇಂದು ನ್ಯಾಯ ಸಿಕ್ಕಿದೆ, ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಈ ತೀರ್ಮಾನ ಮಹತ್ವದ್ದಾಗಿದೆ  ಬಸವಣ್ಣವರ ಸಮಾನತೆ ತತ್ವವನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಈ ಹೋರಾಟಕ್ಕೆ ಸಹಕರಿಸಿದ ಸಚಿವರಾದ ಕೆಎಚ್ ಮುನಿಯಪ್ಪ ರವರಿಗೆ, ಹಾಗೂ ಒಳಬಿಸಿಲಾತಿ ಜಾರಿಗೊಳಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

    ಒಳ ಮೀಸಲಾತಿ ಜಾರಿ  ಪ್ರಕ್ರಿಯೆಯಲ್ಲಿ  ಕಾನೂನು ಸಚಿವರು, ಗೃಹ ಸಚಿವರು, ಹಾಗೂ ಮಹಾದೇವಪ್ಪ ಸೇರಿದಂತೆ ಹಲವು ಸಚಿವರು ಪ್ರಮುಖ ಪಾತ್ರ ವಹಿಸಿದ್ದಾರೆ ಅಲ್ಲದೆ, ಚಿತ್ರದುರ್ಗದಲ್ಲಿ ನಡೆದ ಐತಿಹಾಸಿಕ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ನಾಯಕರು ತೆಗೆದುಕೊಂಡ ನಿರ್ಧಾರದಿಂದ ಇದು ಸಾಧ್ಯವಾಗಿದೆ ಎಂದರು.

    ರಾಜ್ಯದ 101 ಜಾತಿಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರದ ಈ ನಿರ್ಧಾರವನ್ನು  ಮಾದಿಗ ಸಮುದಾಯ ಸ್ವಾಗತಿಸುತ್ತದೆ ಎಂದರು.

    ಈ ವೇಳೆ ತಾಲ್ಲೂಕು ಅಧ್ಯಕ್ಷ ತಳಗವಾರ ನಾಗರಾಜ್, ಮುಖಂಡರಾದ ಬಿ ಕೆ ಶಿವಪ್ಪ, ನಾಗರಾಜು ಬಚ್ಚಹಳ್ಳಿ, ರಾಮಕೃಷ್ಣಪ್ಪ, ವೆಂಕಟೇಶ್, ಹನುಮಣ್ಣ, ಟಿ ಡಿ ಮುನಿಯಪ್ಪ, ಗಂಗರಾಜು ನರಸಿಂಹನಹಳ್ಳಿ, ಕೆ ವಿ ಮುನಿಯಪ್ಪ, ರಾಮ, ನರಸಪ್ಪ, ಮೈಲಾರಪ್ಪ, ಕೆ ನಾರಾಯಣಪ್ಪ, ಹರ್ಷ, ಕಾಂತರಾಜ, ಮುನಿಯಪ್ಪ, ಗಂಗರಾಜು ಮತ್ತಿತ್ತರರಿದ್ದರು.

  • ಬೆಂ.ಗ್ರಾ ಜಿಲ್ಲೆ; ಮುಂದಿನ 3 ಗಂಟೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ- ಹವಾಮಾನ ಇಲಾಖೆ ಎಚ್ಚರಿಕೆ

    ಬೆಂ.ಗ್ರಾ ಜಿಲ್ಲೆ; ಮುಂದಿನ 3 ಗಂಟೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ- ಹವಾಮಾನ ಇಲಾಖೆ ಎಚ್ಚರಿಕೆ

     ಬೆಂ.ಗ್ರಾ ಜಿಲ್ಲೆ;  ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ/ ಗುಡುಗು ಸಹಿತ ಜೋರಾದ ಬಿರುಗಾಳಿಯೊಂದಿಗೆ (30-40 ಕಿ.ಮೀ/ಗಂ) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ. ಸಣ್ಣಪುಟ್ಟ ಸಂಚಾರ ದಟ್ಟಣೆ. ದುರ್ಬಲ ಮರದ ಕೊಂಬೆಗಳನ್ನು ಕಿತ್ತು ಬೀಳುವ ಸಾಧ್ಯತೆಯಿದೆ. ಕೊಯ್ಲು ಮಾಡಿದ ಬೆಳೆಗಳಿಗೆ ಹಾನಿಯಾಗಲಿದೆ.

    ಈ ಹಿನ್ನೆಲೆ ಮನೆಯೊಳಗೆ ಇರಿ, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ. ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ: ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್‌ಪ್ಲಗ್ ಮಾಡಿ.

    ತಕ್ಷಣ ಜಲಮೂಲಗಳಿಂದ ಹೊರಬನ್ನಿ. ವಿದ್ಯುಚ್ಛಕ್ತಿಯನ್ನು ನಡೆಸುವ ಎಲ್ಲಾ ವಸ್ತುಗಳಿಂದ ದೂರವಿರಿ. ನೀವು ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡಿ. ಕೊಯ್ಲು ಮಾಡಿದ ಬೆಳೆಗಳನ್ನು ತೆರೆದ ಸ್ಥಳದಲ್ಲಿ ಇಡಬೇಡಿ ಎಂದು ಎಚ್ಚರಿಕೆ ನೀಡಿದೆ.

  • ದೊಡ್ಡಬಳ್ಳಾಪುರ; ಮೇ.3 ಕ್ಕೆ ESI ಆಸ್ಪತ್ರೆ ಉದ್ಘಾಟನೆ, ಕೇಂದ್ರದಿಂದ ಸಚಿವರ ಆಗಮನ-ಶಾಸಕ ಧೀರಜ್ ಮುನಿರಾಜ್

    ದೊಡ್ಡಬಳ್ಳಾಪುರ; ಮೇ.3 ಕ್ಕೆ ESI ಆಸ್ಪತ್ರೆ ಉದ್ಘಾಟನೆ, ಕೇಂದ್ರದಿಂದ ಸಚಿವರ ಆಗಮನ-ಶಾಸಕ ಧೀರಜ್ ಮುನಿರಾಜ್

    ದೊಡ್ಡಬಳ್ಳಾಪುರ; ತಾಲ್ಲೂಕಿನ ESI ಆಸ್ಪತ್ರೆ ಮೇ 3 ರಂದು ಉದ್ಘಾಟನೆಯಾಗಲಿದೆ ಎಂದು ಶಾಸಕ ಧೀರಜ್ ಮುನಿರಾಜ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ಕಳೆದ ಎರಡು ವರ್ಷಗಳಿಂದ ಆಸ್ಪತ್ರೆ ಉದ್ಘಾಟನೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಗ್ಗ ಜಗ್ಗಾಟ ನಡೆಯುತ್ತಿತ್ತು, ಆದರೀಗ ಅಂತಿಮ ಹಂತಕ್ಕೆ ತಲುಪಿದ್ದು ಮೇ.3 ರಂದು ಆಸ್ಪತ್ರೆ ಉದ್ಘಾಟನೆಯಾಗಲಿದೆ ಎಂದರು.

    ಕೇಂದ್ರ ಸಚಿವರಾದ ಮನ್ಸೂಕ್ ಮಾಂಡವೀಯ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಈ ಆಸ್ಪತ್ರೆ ಉದ್ಘಾಟನೆಯಾಗಲಿದೆ, ಈ ಕಾರ್ಯಕ್ರಮಕ್ಕೆ ರಾಜ್ಯದ ಸಚಿವರುಗಳು ಆಗಮಿಸುವ ಸಾಧ್ಯತೆ ಇದೆ ಎಂದರು.

    ಕೇಂದ್ರ ESI ಕಾರ್ಪೋರೇಷನ್ ವತಿಯಿಂದ ವೈದ್ಯಾಧಿಕಾರಿಗಳು ಆಸ್ಪತ್ರೆಯ ಉಸ್ತುವಾರಿ ವಹಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಇನ್ನು ಈ ಆಸ್ಪತ್ರೆಗೆ ವೈದ್ಯರನ್ನು ಮತ್ತು ಸಿಬ್ಬಂದಿಗಳನ್ನು ಕಾಂಟ್ರಾಕ್ಟ್ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.

    ಮೇ. 3 ರ ನಂತರ ಮೊದಲಿಗೆ 40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಾರ್ಯ ನಡೆಯಲಿದ್ದು ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ OPD ವಿಭಾಗದಲ್ಲಿ ಸರ್ಜನ್ ಗಳು ಕೆಲಸ ಮಾಡಲಿದ್ದಾರೆ ಇದರೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಸುತ್ತಲಿನ ಹಲವು ಜಿಲ್ಲೆಯ ಕಾರ್ಮೀಕರಿಗೆ ಅನುಕೂಲವಾಗಲಿದೆ ಎಂದರು.

  • ದೊಡ್ಡಬಳ್ಳಾಪುರ: SSLC ಪರೀಕ್ಷೆ, ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ಸಿಂಚನ

    ದೊಡ್ಡಬಳ್ಳಾಪುರ: SSLC ಪರೀಕ್ಷೆ, ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ಸಿಂಚನ

    ದೊಡ್ಡಬಳ್ಳಾಪುರ: 2025-26 ನೇ ಸಾಲಿನ SSLC ಪರೀಕ್ಷೆಯಲ್ಲಿ ತಾಲ್ಲೂಕಿನ ಸಿಂಚನ.ವೈ ಎಂಬ ವಿದ್ಯಾರ್ಥಿನಿ ಕನ್ನಡ ಭಾಷೆ‌ಯಲ್ಲಿ 125ಕ್ಕೆ 125 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

    ತಾಲ್ಲೂಕಿನ ಕಂಟನಕುಂಟೆಯ ಲಿಟಲ್ ಮಾಸ್ಟರ್ ಶಾಲೆಯ ವಿದ್ಯಾರ್ಥಿನಿಯಾದ ಸಿಂಚನ.ವೈ ಕನ್ನಡ ಮಾತ್ರವಲ್ಲದೇ ತೃತಿಯ ಭಾಷೆ ಹಿಂದಿಯಲ್ಲಿಯೂ ಸಹ 100 ಕ್ಕೆ 100 ಅಂಕ ಪಡೆದಿದ್ದಾರೆ. ಒಟ್ಟು 625 ಕ್ಕೆ 595 ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

    ತೇರ್ಗಡೆಯಾದ ಶಾಲೆಯ ವಿದ್ಯಾರ್ಥಿಗೆ ಶಾಲಾ  ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

  • ದೊಡ್ಡಬಳ್ಳಾಪುರ: ನಗರಸಭಾ ಅಧ್ಯಕ್ಷೆ ಸುಮಿತ್ರ ಅವರ ಪತಿ ಆನಂದ್ ನಿಧನ, ಇಂದು ಅಂತ್ಯಕ್ರಿಯೆ

    ದೊಡ್ಡಬಳ್ಳಾಪುರ: ನಗರಸಭಾ ಅಧ್ಯಕ್ಷೆ ಸುಮಿತ್ರ ಅವರ ಪತಿ ಆನಂದ್ ನಿಧನ, ಇಂದು ಅಂತ್ಯಕ್ರಿಯೆ

    ದೊಡ್ಡಬಳ್ಳಾಪುರ; ನಗರಸಭಾ ಅಧ್ಯಕ್ಷೆ ಸುಮಿತ್ರ ಅವರ ಪತಿ ಆನಂದ್ ಅವರು ಕಳೆದ ರಾತ್ರಿ ನಿಧನ ಹೊಂದಿದ್ದಾರೆ.

    ಅನಾರೋಗ್ಯದ ಹಿನ್ನೆಲೆ ಆನಂದ್ ಅವರು ಏಪ್ರಿಲ್ 25ರಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ. ಬಿಜೆಪಿ ಮುಖಂಡರಾದ ಇವರು ಡಿಕ್ರಾಸ್, ಮುತ್ಸಂದ್ರ ಸುತ್ತಮುತ್ತ ತಮ್ಮ ಕೆಲಸಗಳ ಮೂಲಕ ಜನಮೆಚ್ಚುಗೆ ಪಡೆದಿದ್ದರು.

    ಇಂದು ಮಧ್ಯಾಹ್ನ 3 ಗಂಟೆಯ ನಂತರ ಅವರ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇವರ ನಿಧನಕ್ಕೆ ನಗರಸಭಾ ಸದಸ್ಯರು ಸೇರಿದಂತೆ ಹಲವು ಮುಖಂಡರು ಕಂಬನಿ ಮಿಡಿದಿದ್ದಾರೆ.

  • ದೊಡ್ಡಬಳ್ಳಾಪುರ ಜೆಡಿಎಸ್ ಅಧ್ಯಕ್ಷರಾಗಿ ಹರೀಶ್ ಗೌಡ ನೇಮಕ

    ದೊಡ್ಡಬಳ್ಳಾಪುರ ಜೆಡಿಎಸ್ ಅಧ್ಯಕ್ಷರಾಗಿ ಹರೀಶ್ ಗೌಡ ನೇಮಕ

    ಬೆಂಗಳೂರು: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರಾಗಿ ಹರೀಶ್ ಗೌಡ ಅವರನ್ನು ನೇಮಕ ಮಾಡಲಾಗಿದೆ.

    ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಅವರು ಈ ಕುರಿತು ಆದೇಶ ಹೊರಡಿಸಿದ್ದು, ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬಂದಿದೆ.

    ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಿ, ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿತವಾಗಿ ಬಲಪಡಿಸುವಲ್ಲಿ ಹರೀಶ್ ಗೌಡ ಅವರು ಪ್ರಮುಖ ಪಾತ್ರವಹಿಸುವರೆಂಬ ವಿಶ್ವಾಸವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.

    ನೂತನ ಅಧ್ಯಕ್ಷರಿಗೆ ಪಕ್ಷದ ಹಿರಿಯರು, ಕಾರ್ಯಕರ್ತರು ಮತ್ತು ಬೆಂಬಲಿಗರು ಅಭಿನಂದನೆಗಳನ್ನು ತಿಳಿಸಿದ್ದಾರೆ.

  • ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಾಶ್ರೀ ವರ್ಗಾವಣೆ ಮಾಡಿ ಸರ್ಕಾರ ಆದೇಶ!

    ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಾಶ್ರೀ ವರ್ಗಾವಣೆ ಮಾಡಿ ಸರ್ಕಾರ ಆದೇಶ!

    ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಶ್ರೀ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ಇವರ ಸ್ಥಳಕ್ಕೆ ಮಂಜುನಾಥ್ ಟಿ.ಆರ್ ಕೆ.ಎ.ಎಸ್ ಅವರನ್ನು ನೇಮಿಸಿದೆ.

    ಕಳೆದ ಎರಡು ವರ್ಷಗಳಿಂದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದುರ್ಗಶ್ರೀ ಕೆ.ಎ.ಎಸ್ (ಕಿರಿಯ ಶ್ರೇಣಿ) ಇವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

    ಈ ಆದೇಶ ಪತ್ರದಲ್ಲಿ  ಮಂಜುನಾಥ್ ಅವರನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾವಣೆ ಮಾಡುವ ಮೊದಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕ್ಕೆ ಸ್ಥಳ ನಿಯುಕ್ತಿ ಮಾಡಿ ಆದೇಶಿಸಲಾಗಿತ್ತು, ಬಳಿಕ ದೊಡ್ಡಬಳ್ಳಾಪುರ ಉಪವಿಭಾಗ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

  • ದೊಡ್ಡಬಳ್ಳಾಪುರ; ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ದೋಚಿ ಪರಾರಿ

    ದೊಡ್ಡಬಳ್ಳಾಪುರ; ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ದೋಚಿ ಪರಾರಿ

    ದೊಡ್ಡಬಳ್ಳಾಪುರ:  ಮನೆ ಬೀಗ ಒಡೆದ ಕಳ್ಳರು  ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಎಸ್ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

     ಕಳ್ಳರು ಮನೆಯಲ್ಲಿದ್ದ 10 ಗ್ರಾಂ ಚಿನ್ನದ ಚೈನ್, ತಲಾ 15 ಗ್ರಾಂ ತೂಕದ ಬ್ರೇಸ್ಲೆಟ್ ಮತ್ತು ನೆಕ್ಲೇಸ್, 8 ಗ್ರಾಂ ಉಂಗುರ, ಮೂರು ಜೋಡಿ ಕಾಲುಗೆಜ್ಜೆ ಹಾಗೂ 1 ಲಕ್ಷ 30 ಸಾವಿರ ನಗದು ನಗದು ದೋಚಿ ಎಸ್ಕೇಪ್ ಆಗಿದ್ದಾರೆ.

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.