• ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ನೇತೃತ್ವದಲ್ಲಿ ಹರಿದ ಸಂಗೀತ ಸುಧೆ
• ಪರಮ್ ಫೌಂಡೇಶನ್, ಯುವಪಥ ಮತ್ತು ವಿಪಿ ಕಲ್ಚರ್ ಕ್ಲಬ್ ಸಹಯೋಗ
• ಭಾವಗೀತೆ, ಚಿತ್ರಗೀತೆಗಳ ವಿಶಿಷ್ಟ ವಿಶ್ಲೇಷಣೆ ಹಾಗೂ ರಸಮಯ ಸಂವಾದ
• ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಅವರ ಆಕರ್ಷಕ ಕಥಾನಕ, ಒಳನೋಟ
• ಶ್ರೀನಿವಾಸ್ ಆಚಾರ್, ಪ್ರವೀಣ್ ಡಿ. ರಾವ್ ಸೇರಿದಂತೆ ಖ್ಯಾತ ವಾದ್ಯವೃಂದದ ಜುಗಲ್‌ಬಂದಿ
ಬೆಂಗಳೂರು : ರಾಜಧಾನಿಯ ಸಾಂಸ್ಕೃತಿಕ ವಲಯದಲ್ಲಿ ‘ರಸಂʼ(RaSam)* ಎಂಬ ವಿಶಿಷ್ಟ ಸಂಗೀತ ಮತ್ತು ಸಂವಾದದ ಕಾರ್ಯಕ್ರಮವು ಜಯನಗರದ ಯುವಪಥ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಭಾರತೀಯ ಸಂಗೀತದ ವಿವಿಧ ಆಯಾಮ ಹಾಗೂ ರುಚಿಗಳನ್ನು ಪ್ರೇಕ್ಷಕರಿಗೆ ಉಣಬಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಂಗೀತ ಸಂಜೆಯಲ್ಲಿ ಸೇರಿದ್ದ ನೂರಾರು ರಸಿಕರ ಮನಗೆದ್ದಿತು.

ಪರಮ್ ಫೌಂಡೇಶನ್, ಯುವಪಥ ಮತ್ತು ವಿಪಿ ಕಲ್ಚರ್ ಕ್ಲಬ್ ಸಹಯೋಗದಲ್ಲಿ ನಡೆದ ಈ ಅಪರೂಪದ ಗಾನ ವೈಭವವು ನಗರದ ಸಂಗೀತಪ್ರೇಮಿಗಳಿಗೆ ಒಂದು ಮರೆಯಲಾಗದ ಸಾಂಸ್ಕೃತಿಕ ರಸದೌತಣ ನೀಡಿತು.
ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ವಿದ್ವಾಂಸ ಜಗದೀಶ್ ಶರ್ಮಾ ಸಂಪಾ ಅವರ ಜಂಟಿ ಪ್ರಸ್ತುತಿಯಲ್ಲಿ ಮೂಡಿಬಂದ ಈ ಕಾರ್ಯಕ್ರಮವು, ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದಿಂದ ಹಿಡಿದು ಸುಗಮ ಸಂಗೀತ ಹಾಗೂ ಜನಪ್ರಿಯ ಚಲನಚಿತ್ರ ಗೀತೆಗಳವರೆಗಿನ ಸುದೀರ್ಘ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಅನಾವರಣಗೊಳಿಸಿತು. ಹಾಡುಗಳ ಹಿಂದಿನ ಭಾವನೆಗಳು, ಪರಂಪರೆ ಮತ್ತು ತಾಂತ್ರಿಕ ಆಯಾಮಗಳ ಬಗ್ಗೆ ಕಲಾವಿದರು ನಡೆಸಿದ ರಸಮಯ ಸಂವಾದ ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾಯಿತು.

ಕಾರ್ಯಕ್ರಮಕ್ಕೆ ಗಿಟಾರ್‌ನಲ್ಲಿ ಶ್ರೀನಿವಾಸ್ ಆಚಾರ್, ಕೀಬೋರ್ಡ್‌ನಲ್ಲಿ ಉಮೇಶ್ ವಿ, ತಬಲಾದಲ್ಲಿ ಬಿ.ಎಸ್. ವೇಣುಗೋಪಾಲ ರಾಜು, ಡ್ರಮ್ಸ್‌ನಲ್ಲಿ ಪ್ರವೀಣ್ ಎಸ್, ವಯಲಿನ್‌ನಲ್ಲಿ ರಂಜನ್ ಕುಮಾರ್ ಬೆಯುರಾ ಹಾಗೂ ಹಾರ್ಮೋನಿಯಂನಲ್ಲಿ ಪ್ರವೀಣ್ ಡಿ. ರಾವ್ ಅದ್ಭುತ ಹಿನ್ನೆಲೆ ಸಂಗೀತ ಒದಗಿಸಿದರು. “ಬಾನಿಗೊಂದು ಎಲ್ಲೆ ಎಲ್ಲಿದೆ..”, “ಮಗಳು ಜಾನಕಿ..” ಟೈಟಲ್ ಸಾಂಗ್ , “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು..” ಸೇರಿದಂತೆ ಹಲವಾರು ಜನಪ್ರಿಯ ಚಲನಚಿತ್ರ ಗೀತೆ, ಸುಗಮ ಸಂಗೀತದ ಹಾಡುಗಳು ಕೇಳುಗರನ್ನು ಮಂತ್ರಮುಗ್ದಗೊಳಿಸಿತು.



ಟ್ರಾಫಿಕ್ ನಿರ್ಧಾರಗಳ ಲೈವ್ ಅನುಭವ:










“ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ, ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.”



ರೋಗಿಯು ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ (ADPKD) ಎಂಬ ಅಪರೂಪದ ಅನುವಂಶಿಕ ಕಾಯಿಲೆಯಿಂದ ಕಳೆದ 12 ವರ್ಷಗಳಿಂದ ಬಳಲುತ್ತಿದ್ದು, ಕಳೆದ ಎರಡು ವರ್ಷಗಳಿಂದ ಅಂತಿಮ ಹಂತದ ಮೂತ್ರಪಿಂಡ ವೈಫಲ್ಯ (End Stage Renal Disease) ಕಾರಣ ನಿಯಮಿತ ಹೀಮೋಡಯಾಲಿಸಿಸ್ ಪಡೆಯುತ್ತಿದ್ದರು. ಕುಟುಂಬದಲ್ಲಿಯೂ ಈ ಕಾಯಿಲೆಯ ಹಿನ್ನೆಲೆ ಇದ್ದು, ರೋಗಿಯ ಸಹೋದರ ಇದೇ ಕಾಯಿಲೆಯಿಂದ ಮೃತಪಟ್ಟಿದ್ದರು.
ಡಾ.ದಿಲೀಪ್ ಮಾತನಾಡಿ ನನ್ನ ವೃತ್ತಿಜೀವನದಲ್ಲೆ ಈ ತರ ಪ್ರಕರಣ ಮೊದಲನೆಯದು. ಜೊತೆಗೆ ಒಬ್ಬ ವೈದ್ಯರಿಗೆ ವೃತ್ತಿ ಜೀವನಲ್ಲಿ ಒಂದು ಬಾರಿ ಮಾತ್ರ ಈ ರೀತಿಯ ಪ್ರಕರಣ ಸಿಗೋದು, ಅದನ್ನ ಮೆಡಿಕವರ್ ಆಸ್ಪತ್ರೆಯ ತಂಡ ಯಶಸ್ವಿಯಾಗಿ ನಡೆಸಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯು ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ತಜ್ಞ ವೈದ್ಯರ ಅನುಭವಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕ್ಷೇತ್ರದ ವಿಜಿನಾಪುರದಲ್ಲಿ ಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತೊತ್ಸವದಲ್ಲಿ ಅವರು ಮಾತನಾಡಿದರು.
ಕೆಂಪೇಗೌಡರು ಅಂದು ಬೆಂಗಳೂರನ್ನು ಕಟ್ಟುವಾಗ ರೂಪಿಸಿದ ನೀಲನಕ್ಷೆ ಹಾಗೂ ಯೋಜನಾಬದ್ಧ ವಿನ್ಯಾಸ ಇಂದಿಗೂ ನಮಗೆಲ್ಲ ದಾರಿದೀಪವಾಗಿದೆ. ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಸಿಲಿಕಾನ್ ಸಿಟಿ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಬೆಂಗಳೂರಿಗೆ ಅವರೇ ಭದ್ರವಾದ ಅಡಿಪಾಯ ಹಾಕಿದವರು.



ಬೆಂಗಳೂರು: ರಾಜಧಾನಿಯ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಬನಶಂಕರಿಯ ‘ಸುಚಿತ್ರಾ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ’ಯಲ್ಲಿ ಮತ್ತೊಂದು ಆಕರ್ಷಕ ಕಲಾ ಸಂಜೆ ಅನಾವರಣಗೊಳ್ಳಲು ಸಿದ್ಧವಾಗಿದೆ. ‘ಪರಮ್ ಫೌಂಡೇಶನ್’ ವತಿಯಿಂದ ಆಯೋಜಿಸಲಾಗುತ್ತಿರುವ ‘ಪರಮ್ ವಿಹಾರ’ ಸಾಂಸ್ಕೃತಿಕ ಸರಣಿ ಕಾರ್ಯಕ್ರಮವು ಇದೇ ಜೂನ್ 28ರ ಭಾನುವಾರ ಸಂಜೆ 6 ಗಂಟೆಯಿಂದ ಜರುಗಲಿದೆ. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಈ ಅಪರೂಪದ ಗಾನ-ನೃತ್ಯ ಜುಗಲ್ಬಂದಿಗೆ ಬೆಂಗಳೂರಿನ ಕಲಾಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.