Category: ರಾಜಕೀಯ ‌ಸುದ್ದಿ

  • ವಿಜಯ್ ನಿವಾಸಕ್ಕೆ ಬೇಟಿ ನೀಡಿದ ನಟಿ ತ್ರಿಷಾ : ‘ದಳಪತಿ’ಗೆ ಶುಭಾಶಯ ಕೋರಿದ ಚೆಲುವೆ

    ವಿಜಯ್ ನಿವಾಸಕ್ಕೆ ಬೇಟಿ ನೀಡಿದ ನಟಿ ತ್ರಿಷಾ : ‘ದಳಪತಿ’ಗೆ ಶುಭಾಶಯ ಕೋರಿದ ಚೆಲುವೆ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಭರ್ಜರಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

    ತಿರುಪತಿಯಿಂದ ನೇರವಾಗಿ ವಿಜಯ್ ಮನೆಗೆ!

    ಇಂದು ನಟಿ ತ್ರಿಷಾ ಅವರ ಜನ್ಮದಿನ. ಈ ವಿಶೇಷ ದಿನದಂದು ಬೆಳಿಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ತ್ರಿಷಾ, ಅಲ್ಲಿಂದ ನೇರವಾಗಿ ಚೆನ್ನೈಗೆ ಆಗಮಿಸಿ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ. ಚುನಾವಣೆಯಲ್ಲಿ ಟಿವಿಕೆ ಪಕ್ಷ ತೋರುತ್ತಿರುವ ಅದ್ಭುತ ಪ್ರದರ್ಶನಕ್ಕೆ ವಿಜಯ್ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ ಎನ್ನಲಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ‘ಜ ನಾಯಕನ್’ ಟ್ರೆಂಡ್:

    ತ್ರಿಷಾ ಅವರು ತಿರುಪತಿಯಿಂದ ಹೊರಬರುವಾಗ ಅಭಿಮಾನಿಯೊಬ್ಬರು “ಮೇಡಂ, ಈ ಬಾರಿ ರಿಸಲ್ಟ್ ನಮ್ಮದೇ!” ಎಂದು ಕೂಗಿದಾಗ, ತ್ರಿಷಾ ಅವರು ಮುಗುಳ್ನಕ್ಕು ಅಲ್ಲಿಂದ ತೆರಳಿದ್ದರು. ಸದ್ಯ ಸೋಶಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ತ್ರಿಷಾ ಫೋಟೋಗಳ ಜೊತೆಗೆ #JanaNayagan (ಜನ ನಾಯಕ) ಎಂಬ ಹ್ಯಾಶ್‌ಟ್ಯಾಗ್ ಭಾರೀ ಟ್ರೆಂಡ್ ಆಗುತ್ತಿದೆ.

    ಮ್ಯಾಜಿಕ್ ಫಿಗರ್ ಸಮೀಪ ವಿಜಯ್ ಪಕ್ಷ:

    ತಮಿಳುನಾಡು ವಿಧಾನಸಭಾ ಚುನಾವಣೆಯ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದ್ದು, ವಿಜಯ್ ಅವರ ಟಿವಿಕೆ ಪಕ್ಷವು ಬಹುಮತಕ್ಕೆ ಬೇಕಾದ ಮ್ಯಾಜಿಕ್ ಫಿಗರ್‌ನ ತೀರಾ ಹತ್ತಿರದಲ್ಲಿದೆ. ಇದೇ ವೇಳೆ ಕಾಂಗ್ರೆಸ್, ಸಿಪಿಐ ಮತ್ತು ಡಿಎಂಕೆಯಂತಹ ಪಕ್ಷಗಳು ವಿಜಯ್ ಅವರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿವೆ ಎಂದು ವರದಿಯಾಗಿದೆ. ಎಐಎಡಿಎಂಕೆ (AIADMK) ಜೊತೆ ಅಧಿಕಾರ ಹಂಚಿಕೊಳ್ಳಲು ವಿಜಯ್ ಆಸಕ್ತಿ ತೋರಿಲ್ಲ ಎನ್ನಲಾಗುತ್ತಿದ್ದು, ಮೈತ್ರಿ ಕುರಿತಾದ ಸ್ಪಷ್ಟ ಚಿತ್ರಣ ಇಂದು ಸಂಜೆಯೊಳಗೆ ಸಿಗುವ ಸಾಧ್ಯತೆಯಿದೆ.

    ಸದ್ಯಕ್ಕಂತೂ ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ‘ವೆಟ್ರಿ’ (ಗೆಲುವು) ಮತ್ತು ತ್ರಿಷಾ ಅವರ ಭೇಟಿ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.

  • ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌‌ ಜಯಭೇರಿ : ಗೆದ್ದು ಬೀಗಿದ ‘ಕೈ’ ಅಭ್ಯರ್ಥಿ ಸಮರ್ಥ್‌‌ ಶಾಮನೂರು

    ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌‌ ಜಯಭೇರಿ : ಗೆದ್ದು ಬೀಗಿದ ‘ಕೈ’ ಅಭ್ಯರ್ಥಿ ಸಮರ್ಥ್‌‌ ಶಾಮನೂರು

    ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಾವಣಗೆರೆಯಲ್ಲಿ ಶಾಮನೂರು ಕುಟುಂಬದ ಹಿಡಿತ ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿಯ ಶ್ರೀನಿವಾಸ ದಾಸಕರಿಯಪ್ಪ ಅವರನ್ನು 4873 ಮತಗಳ ಅಂತರದಿಂದ ಸೋಲಿಸುವ ಮೂಲಕ ಸಮರ್ಥ್ ಶಾಮನೂರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

    ಯುವ ನಾಯಕನಿಗೆ ಒಲಿದ ಜಯ:

    ಆರಂಭಿಕ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸಮರ್ಥ್ ಶಾಮನೂರು ಅವರಿಗೆ ಕ್ಷೇತ್ರದ ಮತದಾರರು ಭರ್ಜರಿ ಬೆಂಬಲ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನಾಗಿರುವ ಸಮರ್ಥ್, ಯುವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಕ್ಷೇತ್ರದ ಅಭಿವೃದ್ಧಿ ಮತ್ತು ಕುಟುಂಬದ ವರ್ಚಸ್ಸು ಇವರ ಗೆಲುವಿಗೆ ಪ್ರಮುಖ ಕಾರಣವಾಯಿತು.ಸಮರ್ಥ್ ಅವರು ಒಟ್ಟು 68619 ಮತಗಳನ್ನ ಪಡೆದು ಜಯಭೇರಿ ಬಾರಿಸಿದ್ದಾರೆ.

    ಬಿಜೆಪಿಗೆ ಮುಖಭಂಗ:
    ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀನಿವಾಸ ದಾಸಕರಿಯಪ್ಪ ಅವರು ಸಮರ್ಥ್ ಶಾಮನೂರು ಅವರಿಗೆ ತೀವ್ರ ಪೈಪೋಟಿ ನೀಡಲು ವಿಫಲರಾದರು. ಮೂರು ನಾಲ್ಕು ಸುತ್ತುಗಳಲ್ಲಿ ಕಡಿಮೆ ಅಂತರ ಮುನ್ನಡೆ ಸಾಧಿಸಿದರೂ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಾ ಹೋಗಿದ್ದು ಶ್ರೀನಿವಾಸ ದಾಸಕರಿಯಪ್ಪ ಅವರ ಸೋಲಿಗೆ ಕಾರಣವಾಯಿತು. ಚುನಾವಣಾ ಆಯೋಗವು ಸಮರ್ಥ್ ಶಾಮನೂರು ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಿದೆ.

    ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವನ್ನ ಸಾಧಿಸುತ್ತದೆ ಎಂದು ಪ್ರಮುಖ ನಾಯಕರು ವಿಶ್ವಾಸ ಇಟ್ಟುಕೊಂಡಿದ್ದರು.ಹಾವು ಏಣಿ ತರ ಹಿನ್ನಡೆ-ಮುನ್ನಡೆ ಫಲಿತಾಂಶ ಬರುತ್ತಿದ್ದನ್ನ ಕಂಡ ಬಿಜೆಪಿಯವರು ಕೊನೆಗೆ ಅಭ್ಯಾರ್ಥಿ ಸೋಲುವ ಮೂಲಕ ತುಂಬಾನೆ ಹತಾಶರಾದರು.

    ವಿಜಯೋತ್ಸವ:
    ಸಮರ್ಥ್ ಅವರ ಗೆಲುವು ಖಚಿತವಾಗುತ್ತಿದ್ದಂತೆ ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. “ಶಾಮನೂರು ಕುಟುಂಬಕ್ಕೆ ಜಯವಾಗಲಿ” ಎಂಬ ಘೋಷಣೆಗಳೊಂದಿಗೆ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

  • ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಬಡ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಡಿಕೆ ಹರೀಶ್

    ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಬಡ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಡಿಕೆ ಹರೀಶ್

    ಕೆ.ಆರ್.ಪುರ:- ಬಡವರ ಸಮಗ್ರ ಬೆಳವಣಿಗೆಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹೆಚ್ಚು ಸಹಕಾರಿಯಾಗಿದೆ ಎಂದು
    ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ‌.ಮೋಹನ್ ಅವರು ತಿಳಿಸಿದರು.

    ಕೆ.ಆರ್.ಪುರ ಕ್ಷೇತ್ರದ ಕೃಷ್ಣನಗರ ಜಿಬಿಎ ಆಕಾಂಕ್ಷಿ ಡಿ.ಕೆ.ಹರೀಶ್ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಯುಗಾದಿ ಹಾಗೂ ರಂಜಾನ್ ಪ್ರಯುಕ್ತ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಅವಕಾಶ ದೊರೆತಿದೆ ಅಲ್ಲದೆ,ಮೂಲಭೂತ ಸೌಕರ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು ನುಡಿದರು.

    ಯುವ ನಾಯಕರು ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ತನ್ನದೆ ಆದ ಕೊಡುಗೆ ನೀಡುವಂತೆ ಸಲಹೆ ನೀಡಿದರು. ಕೃಷ್ಣನಗರ ವಾರ್ಡನ ಜಿಬಿಎ ಆಕಾಂಕ್ಷಿ ಡಿ.ಕೆ.ಹರೀಶ್ ಅವರು ಮಾತನಾಡಿ ಯುಗಾದಿ ಹಾಗೂ ರಂಜಾನ್ ಗಾಗಿ ಬಡವರಿಗೆ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಸೇವಾ ಕಾರ್ಯಗಳತ್ತ ಗಮನ ಹರಿಸಿದ್ದೆನೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಆಯೋಜಕ ಡಿ.ಕೆ.ಹರೀಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಳಪ್ಪ, ಮುಖಂಡರಾದ ಚನ್ನಕೇಶವ, ಬಾಲಕೃಷ್ಣ, ಆಂಜಿನಪ್ಪ, ಎಸ್ ಎಲ್ .ವಿ.ವೆಂಕಟೇಶ್, ಭರತ್, ರಾಜಹಂಸ, ಪ್ರವೀಣ್,ಸಂತೋಷ್  ಮತ್ತಿತರರಿದ್ದರು.

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಕಾನೂನು ತೊಡಕಿಲ್ಲ: ಡಿ.ಕೆ. ಶಿವಕುಮಾರ್

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಕಾನೂನು ತೊಡಕಿಲ್ಲ: ಡಿ.ಕೆ. ಶಿವಕುಮಾರ್

    ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದ ನೋಟಿಫಿಕೇಷನ್ ಮಾಡುವುದಕ್ಕೆ ಯಾವುದೇ ಕಾನೂನಿನ ತೊಡಕಿಲ್ಲ, ತಡೆಯಾಜ್ಞೆಯೂ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಸದ್ಯದಲ್ಲೇ ನಮ್ಮದೇ ಆದ ತೀರ್ಮಾನ ಮಾಡುತ್ತೇವೆ. ರಾಜ್ಯದಲ್ಲಿಯೂ ಸರ್ವಪಕ್ಷಗಳ ಸಭೆ ಕರೆಯಬೇಕಾಗಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

    ಗುರುವಾರ ಸದಾಶಿವನಗರ ನಿವಾಸದಲ್ಲಿ ಅವರು ದೆಹಲಿ ಪ್ರವಾಸದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ದೆಹಲಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಿ ರಾಜ್ಯದ ಸಂಸದರ ಸಭೆ ನಡೆಸಲಾಯಿತು. 24 ಜನ ಸಂಸದರು ಬಂದಿದ್ದರು. ಜನತಾದಳ ಹೊರತು ಪಡಿಸಿ ಬಿಜೆಪಿ, ಕಾಂಗ್ರೆಸ್, ಸ್ವತಂತ್ರ ಹಾಗೂ ನಾಮನಿರ್ದೇಶಿತ ಸಂಸದರು ಸಭೆಯಲ್ಲಿ ಹಾಜರಿದ್ದರು. ರಾಜ್ಯದ ಅನೇಕ ನೀರಾವರಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಅವರಿಗೆ ವಿವರಿಸಿದ್ದೇನೆ ಎಂದು ತಿಳಿಸಿದರು.

    ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಪಿ.ಸಿ.ಮೋಹನ್ ಅವರುಗಳು ಕೆಲವು ಸಲಹೆಗಳನ್ನು ನೀಡಿದ್ದಾರೆ. ಸೋಮಣ್ಣ ಅವರು ಹಾಗೂ ಪ್ರಹ್ಲಾದ್ ಜೋಶಿ ಅವರು ಸಭೆಗೆ ಬರಲು ಆಗುವುದಿಲ್ಲ. ಇನ್ನೊಂದು ದಿನ ಹಾಜರಾಗುತ್ತೇವೆ‌ ಎಂದು ಹೇಳಿದ್ದರು. ಒಟ್ಟಿನಲ್ಲಿ ಪ್ರಧಾನಿ ಮೋದಿ ಹಾಗೂ ಜಲ ಶಕ್ತಿ ಸಚಿವರನ್ನು ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಭೇಟಿಯಾಗುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಒಮ್ಮತವೂ ಮೂಡಿದೆ ಎಂದರು.

    ಈ ವಿಚಾರದಲ್ಲಿ ನಮ್ಮ ಕಾನೂನು ಸಲಹೆಗಾರರಾದ ಮೋಹನ್ ಕಾತರಕಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಅಡ್ವೋಕೇಟ್ ಜನರಲ್ ಅವರುಗಳು ಒಂದೆರಡು ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

    ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಪ್ರೀಮಿಯಂ ಎಫ್.ಎ.ಆರ್, ಕಟ್ಟಡಗಳ ಎತ್ತರದ ಕಾನೂನುಗಳು ನಮ್ಮ ಹಾಗೂ ಬೇರೆ, ಬೇರೆ ರಾಜ್ಯಗಳಲ್ಲಿ ಹೇಗಿದೆ ಎನ್ನುವ ವಿಚಾರಗಳನ್ನು ಅವರ ಗಮನಕ್ಕೆ ತರಲಾಗಿದೆ. ರಕ್ಷಣಾ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸಬೇಕಿದೆ. ನಮ್ಮ ರಾಜ್ಯದ ಸಮಸ್ಯೆಗಳನ್ನು ತಿಳಿಸಿದ್ದೇವೆ. ಎಲ್ಲರೂ ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

    ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮಾಧ್ಯಮಗಳು ಕೇಳಿದಾಗ, ಸಚಿವರಾದ ಎಂ.ಬಿ.ಪಾಟೀಲ್ ಅವರು ಪ್ರಸ್ತಾವನೆ ಕೊಟ್ಟಿದ್ದಾರೆ. ಅದಕ್ಕೆ ಸಚಿವರು ಅಭಿಪ್ರಾಯವನ್ನೂ ತಿಳಿಸಿದ್ದಾರೆ. ಕ್ಯಾಬಿನೆಟ್ ಸಭೆಯ ಮುಂದಿಟ್ಟು ಸಾಧಕ ಭಾದಕಗಳನ್ನು ಚರ್ಚೆ ನಡೆಸಬೇಕು. ಭೂಸ್ವಾಧೀನ, ಹಣಕಾಸು ಮತ್ತಿತರ ಸಂಗತಿಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಅವರು ಸಹ ಅಧ್ಯಯನ ನಡೆಸಿ ಒಂದು ವರದಿ ನೀಡಿದ್ದಾರೆ‌. ಕಟ್ಡಡಗಳ ಎತ್ತರದ ಮಿತಿ ಕುರಿತಂತೆ ಜಾಗತಿಕ ನಗರಗಳಲ್ಲಿ ಯಾವ ರೀತಿಯ ಕಾನೂನುಗಳಿವೆ ಎಂದು ಕೇಂದ್ರ ವಿಮಾನಯಾನ ಸಂಸ್ಥೆಯವರು ವರದಿ ಮಾಡಿದ್ದಾರೆ. ಇದರಿಂದ ಪ್ರಪಂಚದ ಬೇರೆ ಕಡೆ ಇರುವ ಮಾನದಂಡಗಳ ಬಗ್ಗೆ ತಿಳಿಯಲಿದೆ‌. ಆ ವರದಿ ತರಿಸಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.