Category: ದೊಡ್ಡಬಳ್ಳಾಪುರ

  • ದೊಡ್ಡಬಳ್ಳಾಪುರ; ಫ್ರಿಡ್ಜ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್, ಮಹಿಳೆ ಸಾವು

    ದೊಡ್ಡಬಳ್ಳಾಪುರ; ಫ್ರಿಡ್ಜ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್, ಮಹಿಳೆ ಸಾವು

    ದೊಡ್ಡಬಳ್ಳಾಪುರ: ಪ್ರಿಡ್ಜ್ ಸ್ವಚ್ಛಗೊಳಿಸುತ್ತಿದ್ದವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ನಗರದ ಚೈತನ್ಯನಗರದಲ್ಲಿ ನಡೆದಿದೆ. ಮೃತರನ್ನು ಚೈತನ್ಯನಗರ ನಿವಾಸಿ ಮೀನಾಕ್ಷಿ ಎಂ ಎಂದು ಗುರುತಿಸಲಾಗಿದೆ.

    ಮೇ 22ರಂದು ಸಂಜೆ ಸುಮಾರು 6:30ರ ವೇಳೆಗೆ ಮೀನಾಕ್ಷಿಯವರು ತಮ್ಮ ಮನೆಯಲ್ಲಿ ಫ್ರಿಡ್ಜ್ ಕ್ಲೀನ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

    ತಕ್ಷಣ ಕುಟುಂಬಸ್ಥರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

  • ದೊಡ್ಡಬಳ್ಳಾಪುರ; ನೆಚ್ಚಿನ ನಾಯಕನ ಜನ್ಮದಿನ, ಗೆಳೆಯರಿಂದ ಅನ್ನಸಂತರ್ಪಣೆ

    ದೊಡ್ಡಬಳ್ಳಾಪುರ; ನೆಚ್ಚಿನ ನಾಯಕನ ಜನ್ಮದಿನ, ಗೆಳೆಯರಿಂದ ಅನ್ನಸಂತರ್ಪಣೆ

    ದೊಡ್ಡಬಳ್ಳಾಪುರ; ನಗರದ ಕಾಂಗ್ರೆಸ್ ಮುಖಂಡರಾದ ಟಿ. ಮಂಜುನಾಥ್ ರವರ 46ನೇ ಜನ್ಮದಿನದ ಹಿನ್ನೆಲೆ ಶುಕ್ರವಾರ ಗೆಳೆಯರ ಬಳಗದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಮಂಜುನಾಥ್ ರವರು 46 ವರ್ಷ ಪೂರೈಸಿದ ಹಿನ್ನೆಲೆ ಅವರ ಸಮಾಜಮುಖಿ ಕಾರ್ಯಕ್ರಮಗಳ ಮೆಚ್ಚಿ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಅನ್ನಸಂತರ್ಪಣೆ ಮಾಡಿ ಸಂಭ್ರಮಿಸಿದರು.

    ಈ ವೇಳೆ ಮಾತನಾಡಿದ ಗೆಳೆಯರ ಬಳಗದ ತಂಡವು ಮಂಜುನಾಥ್ ರವರು ಕಚೇರಿಪಾಳ್ಯ ವಾರ್ಡ್ ಗೆ ಈಗಾಗಲೇ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ವ್ಯಕ್ತಿತ್ವ ಮತ್ತು ರಾಜಕೀಯ ಜೀವನ ಅನೇಕ ಮಂದಿಗೆ ಪ್ರೇರಣೆಯಾಗಿದೆ. ಮುಂದೆ ವಾರ್ಡ್ ನಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.

     ಈ ವೇಳೆ ಗಂಗಾಧರ್, ಆದಪ್ಪ, ಮಂಜುನಾಥ್, ಶ್ರೀನಿವಾಸ್, ರವಿ, ಅನಂತ್, ಕುಮಾರ್, ತಮ್ಮಯ್ಯ, ನಂದೀಶ್, ನಾಗಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.

  • ದೊಡ್ಡಬಳ್ಳಾಪುರ; ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಗಡಿಪಾರು- ರೌಡಿಶೀಟರ್ ಗಳಿಗೆ ಇನ್ಸ್ ಪೆಕ್ಟರ್ ನವೀನ್ ವಾರ್ನಿಂಗ್

    ದೊಡ್ಡಬಳ್ಳಾಪುರ; ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಗಡಿಪಾರು- ರೌಡಿಶೀಟರ್ ಗಳಿಗೆ ಇನ್ಸ್ ಪೆಕ್ಟರ್ ನವೀನ್ ವಾರ್ನಿಂಗ್

    ದೊಡ್ಡಬಳ್ಳಾಪುರ; ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಅಪರಾಧಕೃತ್ಯಗಳಲ್ಲಿ ಭಾಗಿಯಾಗಿ ರೌಡಿಶೀಟರ್  ಪಟ್ಟಿಯಲ್ಲಿರುವವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾ‌ರ್ ಎಂ.ಬಿ ಅವರು ನೀತಿ ಪಾಠದೊಂದಿಗೆ ಖಡಕ್  ಎಚ್ಚರಿಕೆಯನ್ನು ನೀಡಿದರು.

    ನಗರದಲ್ಲಿನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೌಡಿಶೀಟರ್ ಗಳ ಪರೇಡ್ ನಲ್ಲಿ ಅವರು ಮಾತನಾಡಿದರು.

    ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಹೀಗಾಗಿ ಅಕ್ರಮ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಉತ್ತಮ ನಾಗರಿಕರಾಗಿ ಜೀವನ ಮಾಡಬೇಕು ಎಂದರು.

    ರೌಡಿಯಿಸಂ ಜೀವನವನ್ನು ಹಾಳು ಮಾಡುವುದಲ್ಲದೆ ಜೀವನ ಪರ್ಯಂತ ರೌಡಿಶೀಟರ್ ಪಟ್ಟ ಕಟ್ಟಿಕೊಂಡು ಬದುಕಬೇಕಾಗುತ್ತದೆ. ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬೇಕು. ಎಲ್ಲಾರು ಕಾನೂನನ್ನು ಗೌರವಿಸಬೇಕು. ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು ಹೀಗೆ ಮುಂದುವರೆದರೆ ಗಡಿಪಾರು ಮಾಡಲಾಗುವುದು. ಹತ್ತು, ಇಪ್ಪತ್ತು ವರ್ಷಗಳಾದರೂ ರೌಡಿಶೀಟರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಬಿಗಿಯಾಗಿದೆ. ಕುಟುಂಬಸ್ಥರು ಗೌರವ ನೀಡುವಷ್ಟು ರೀತಿಯಲ್ಲಿಯಾದರೂ ಜೀವನ ಮಾಡಿ. ಪೊಲೀಸರಿಗೆ ತಿಳಿಯದಂತೆ ಸ್ಥಳ, ಫೋನ್ ನಂಬರ್ ಬದಲಾವಣೆ ಮಾಡಬಾರದು. ಕಾನೂನಿಗೆ ಬೆಲೆ ಕೊಟ್ಟು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿ. ಮಾದರಿ ಜೀವನ ನಡೆಸಿದರೆ ರೌಡಿ ಶೀಟರ್ ಬಂದ್ ಮಾಡಲಾಗುವುದು ಎಂದರು.

    ರೌಡಿಗಳಿಗೆ ಸಂಬಂಧಿಸಿದ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ವಾಹನ ದಾಖಲೆಗಳು ಸೇರಿದಂತೆ ಇತರೆ ದಾಖಲಾತಿಗಳನ್ನು ಸಂಗ್ರಹಿಸಬೇಕು. ಸದಾ ರೌಡಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿರಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

    ಈ ವೇಳೆ ಸಬ್ ಇನ್ಸ್ ಪೆಕ್ಟರ್, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ; ದಲಿತಪರ, ಕನ್ನಡಪರ ಹೋರಾಟಗಾರ ಡಿ.ವಿ.ಅಶ್ವತ್ಥಪ್ಪ ನಿಧನ

    ದೊಡ್ಡಬಳ್ಳಾಪುರ; ದಲಿತಪರ, ಕನ್ನಡಪರ ಹೋರಾಟಗಾರ ಡಿ.ವಿ.ಅಶ್ವತ್ಥಪ್ಪ ನಿಧನ

    ದೊಡ್ಡಬಳ್ಳಾಪುರ; ನಗರದಾದ್ಯಂತ ಹೆಸರುವಾಸಿಯಾಗಿದ್ದ ದಲಿತಪರ, ಕನ್ನಡಪರ ಹೋರಾಟಗಾರರು, ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಡಿ.ವಿ ಅಶ್ವತ್ಥಪ್ಪ ಅವರು ಇಂದು ಸಂಜೆ 6ಗಂಟೆ ಸುಮಾರಿಗೆ ದೈವಾದೀನರಾಗಿದ್ದಾರೆ.

    ಮೃತರಿಗೆ 67ವರ್ಷ ವಯಸ್ಸಾಗಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.

    ಅಂತ್ಯಕ್ರಿಯೆಯೂ ಭಾನುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯದಲ್ಲಿರುವ ಸ್ಮಶಾಣದಲ್ಲಿ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿದೆ. ಇವರ ಅಗಲಿಕೆಗೆ ಗಣ್ಯರು, ರಾಜಕಾರಣಿಗಳು, ಕಚೇರಿಪಾಳ್ಯದ ವಾಸಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

  • ದೊಡ್ಡಬಳ್ಳಾಪುರ; ಹೊಸಹಳ್ಳಿ ಅರಣ್ಯಪ್ರದೇಶದಲ್ಲಿ ಬೆಂಕಿ, ಅನಾಹುತ ತಪ್ಪಿಸಿದ ಪೊಲೀಸರ ತಂಡ, ಸಮಯಪ್ರಜ್ಞೆಗೆ ಮೆಚ್ಚಿದ ಜನ

    ದೊಡ್ಡಬಳ್ಳಾಪುರ; ಹೊಸಹಳ್ಳಿ ಅರಣ್ಯಪ್ರದೇಶದಲ್ಲಿ ಬೆಂಕಿ, ಅನಾಹುತ ತಪ್ಪಿಸಿದ ಪೊಲೀಸರ ತಂಡ, ಸಮಯಪ್ರಜ್ಞೆಗೆ ಮೆಚ್ಚಿದ ಜನ

    ದೊಡ್ಡಬಳ್ಳಾಪುರ; ಹೊಸಹಳ್ಳಿ ವ್ಯಾಪ್ತಿಯ ಅರಣ್ಯಪ್ರದೇಶ ವ್ಯಾಪ್ತಿಯಲ್ಲಿ ಬೆಂಕಿ ತಗುಲಿ ಸಂಭವಿಸಬಹುದಾದ ಭಾರಿ ಅನಾಹುತವನ್ನು ತಡೆಯುವಲ್ಲಿ ಹೊಸಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಮತ್ತು ತಂಡ ಯಶಸ್ವಿಯಾಗಿದೆ.

    ತಾಲ್ಲೂಕಿನ ಹೊಸಹಳ್ಳಿವ್ಯಾಪ್ತಿಯಲ್ಲಿ ಇಂದು ಸಂಜೆ 5ಗಂಟೆ ಸುಮಾರಿನಲ್ಲಿ  ಇನ್ಸ್ ಪೆಕ್ಟರ್ ಅಮರೇಶ್ ಗೌಡ ಮತ್ತು ತಂಡ ಗಸ್ತು ತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಅರಣ್ಯದಲ್ಲಿ ಬೆಂಕಿ ತಗುಲಿರುವುದನ್ನು ಕಂಡು ಸ್ಥಳೀಯ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಮುಂದೆ ಆಗಬಹುದಾದ ಕಾಳ್ಗಿಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆದ ನಾರಾಯಣ ಸ್ವಾಮಿ, ಠಾಣಾ ಸಿಬ್ಬಂದಿ ಶ್ರೀಹರಿ ಮತ್ತು ಸ್ಥಳಿಯರಾದ ನಿತಿನ್ ಇದ್ದರು.

  • ದೊಡ್ಡಬಳ್ಳಾಪುರ; ಮೆ.16ಕ್ಕೆ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ, ಸಮಸ್ಯೆಗಳ ಕುರಿತು ಚರ್ಚಿಸಲು ಮನವಿ

    ದೊಡ್ಡಬಳ್ಳಾಪುರ; ಮೆ.16ಕ್ಕೆ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ, ಸಮಸ್ಯೆಗಳ ಕುರಿತು ಚರ್ಚಿಸಲು ಮನವಿ

    ದೊಡ್ಡಬಳ್ಳಾಪುರ: ಬೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಪರಿಹಾರ ಹಾಗೂ ಸುರಕ್ಷತಾ ಜಾಗೃತಿ ಸಭೆ ಮೇ 16 ರಂದು ನಡೆಯಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿನಯ್‌ಕುಮಾ‌ರ್ ತಿಳಿಸಿದ್ದಾರೆ.

    ಮೇ 16 ರಂದು ಮಧ್ಯಾಹ್ನ 3 ಗಂಟೆಗೆ ಎಪಿಎಂಸಿ ಸಮೀಪದ ಬೆಸ್ಕಾಂ ದೊಡ್ಡಬಳ್ಳಾಪುರ ನಗರ ಉಪವಿಭಾಗ ಕಚೇರಿಯಲ್ಲಿ ಸಭೆ ನಡೆಯಲಿದ್ದ, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಎದುರಾಗುತ್ತಿರುವ ಸಮಸ್ಯೆಗಳು, ನ್ಯೂನ್ಯತೆಗಳು, ಸಲಹೆ, ಅಭಿಪ್ರಾಯಗಳನ್ನು ಪರಸ್ಪರ ಚರ್ಚಿಸಿ ಸ್ನೇಹ ಪೂರ್ವಕವಾಗಿ ಪರಿಹರಿಸಲಾಗುವುದು. ನಗರ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಬಾಶೆಟ್ಟಿಹಳ್ಳಿ, ಮೆಳೇಕೋಟೆ ಕ್ರಾಸ್ ಶಾಖೆಗಳ ವಿದ್ಯುತ್ ಗ್ರಾಹಕರು ಸಭೆಯಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಆಗಸ್ಟ್ 9 ರಂದು ನಂದಿ ಬೆಟ್ಟದಲ್ಲಿ ನಂದಿ ಹಿಲ್ಸ್ ಮಾನ್ಸೂನ್ ರನ್: ನೋಂದಣಿ ಆರಂಭ

    ಆಗಸ್ಟ್ 9 ರಂದು ನಂದಿ ಬೆಟ್ಟದಲ್ಲಿ ನಂದಿ ಹಿಲ್ಸ್ ಮಾನ್ಸೂನ್ ರನ್: ನೋಂದಣಿ ಆರಂಭ

    ಬೆಂ.ಗ್ರಾ.ಜಿಲ್ಲೆ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದಿವ್ಯಶ್ರೀ ನಂದಿ ಹಿಲ್ಸ್ ಮಾನ್ಸೂನ್ ರನ್-2026 ಎರಡನೇ ಆವೃತ್ತಿಯನ್ನು ಆಗಸ್ಟ್ 9ರಂದು ನಂದಿ ಬೆಟ್ಟದಲ್ಲಿ ಆಯೋಜಿಸಲಾಗುತ್ತಿದೆ.

    ನಂದಿ ಹಿಲ್ಸ್ ಮಾನ್ಸೂನ್ ರನ್ ನ ಎರಡನೇ ಆವೃತ್ತಿಯಲ್ಲಿ 10ಕೆ ಮತ್ತು 20ಕೆ (ಮ್ಯಾರಥಾನ್)ಓಟದ ಸ್ಪರ್ಧೆ ಏರ್ಪಡಿಸಲಾಗಿದ್ದು, 18 ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

    ಸ್ಪರ್ಧೆಯಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಆರಂಭವಾಗಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿಗೆ ಲಿಂಕ್ : https://dnmr.co.in/?utm_source=ig&utm_medium=social&utm_content=link_in_bio&fbclid=PAZnRzaARw741leHRuA2FlbQIxMQBzcnRjBmFwcF9pZA8xMjQwMjQ1NzQyODc0MTQAAae3QzdmBL8nc91dcxeuyeLIKTHMQbNzFp5_lkYiN0Tq8pU_6gjRKSDsphtMrg_aem_2kY199kJeFTB6G2HzWOvHQ  ಮೂಲಕ ನೋಂದಣಿ ಮಾಡಿಕೊಂಡು ಭಾಗವಹಿಸಬಹುದಾಗಿದೆ.

  • ದೊಡ್ಡಬಳ್ಳಾಪುರ; ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಭೀಕರ ಅಪಘಾತ

    ದೊಡ್ಡಬಳ್ಳಾಪುರ; ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಭೀಕರ ಅಪಘಾತ

    ದೊಡ್ಡಬಳ್ಳಾಪುರ: ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿ ಥಾರ್  ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇಂದು ಬೆಳಗ್ಗೆ ಸುಮಾರು 5.30 ರ ವೇಳೆ  ಕ್ಯಾಂಪ್ ಕಡೆಯಿಂದ ಬಂದ ಕಾರು ಖಾಸಗಿ ಬ್ಯಾಂಕ್ ಸಮೀಪ, ನಾಯಿ ಅಡ್ಡ ಬಂದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಮೂವರು ಯುವತಿಯರು, ಇಬ್ಬರು ಯುವಕರಿಗೆ ತೀವ್ರ ಗಾಯಗಳಾಗಿದೆ. ಕಾರಿನ ಚಾಲಕ ಹಾಗೂ ಮತ್ತೋರ್ವ ಯುವಕನ ಸ್ಥಿತಿ ಚಿಂತಾಜನಕ ಎನ್ನಲಾಗಿದೆ.

    ಇನ್ನೂ ಅಪಘಾತಕ್ಕೆ ಒಳಗಾದವರು ಆಂಧ್ರಪ್ರದೇಶದ ಮೂಲದವರು ಎಂದು ತಿಳಿದುಬಂದಿದ್ದು, ಬಾಶೆಟ್ಟಿಹಳ್ಳಿ ಸಮೀಪದ ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ.

    ಭಾನುವಾರದ ರಜೆ ಹಿನ್ನೆಲೆ ಸ್ವಂತ ಊರಿಗೆ ತೆರಳಿ ಇಂದು ಹಿಂತಿರುಗಿ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.

    ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ದೊಡ್ಡಬಳ್ಳಾಪುರ; ಇಂದಿನಿಂದ ಒಂದು ವಾರ ನಗರದ ಹಲವೆಡೆ ವಿದ್ಯುತ್ ಕಡಿತ

    ದೊಡ್ಡಬಳ್ಳಾಪುರ; ಇಂದಿನಿಂದ ಒಂದು ವಾರ ನಗರದ ಹಲವೆಡೆ ವಿದ್ಯುತ್ ಕಡಿತ

    ದೊಡ್ಡಬಳ್ಳಾಪುರ; ನಗರ ಮತ್ತು ತಾಲ್ಲೂಕಿನಾದ್ಯಂತ ಹಲವು ಪ್ರದೇಶಗಳಲ್ಲಿ ಒಂದು ವಾರಗಳ ಕಾಲ ವಿದ್ಯುತ್ ಅಡೆಚಣೆಯಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮೇ.9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ನಗರದ ಗಣೇಶ್ ಗ್ರಾಂಡ್ ಹೋಟೆಲ್ ಹಿಂದೆ, ಕೆ.ಎಚ್.ಪಿ.ಎಲ್ ಕಾಂಪೌಂಡ್, ಆದಿತ್ಯ ಬಿರ್ಲಾ ಸಿಮೆಂಟ್ ಕಾರ್ಖಾನೆ, ಕೃಷ್ಣಧಾಮ ಹೋಟೆಲ್ ಹಿಂದೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಮೇ.10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ತಾಲ್ಲೂಕಿನ ಜಿಂಕೆಬಚ್ಚಹಳ್ಳಿ, ಮಜರಾಹೊಸಹಳ್ಳಿ, ಚಿಕ್ಕತುಮಕೂರು, ಕಾಂತಿ ಸ್ವೀಟ್ಸ್ ಸರ್ಕಲ್, ಓಬದೇನಹಳ್ಳಿ ಕೈಗಾರಿಕಾ ಪ್ರದೇಶ, ಆದಿನಾರಾಯಣಹಳ್ಳಿ ಕೈಗಾರಿಕಾ ಪ್ರದೇಶ, ಫ್ಯಾಷನ್ ಕಾಲೇಜ್, ಲಘುನಾ, ಓಮ್ಯಾಮ್ ಸುತ್ತಮುತ್ತ ವಿದ್ಯುತ್ ಅಡಚಣೆ.

    ಮೇ.12ರಂದು ಬೆಳಗ್ಗೆ  9ರಿಂದ ಮಧ್ಯಾಹ್ನ 2ರ ವರೆಗೆ ತಾಲ್ಲೂಕಿನ ಕುರುಬರಹಳ್ಳಿ, ರಾಜೀವ್‌ಗಾಂಧಿ ಬಡಾವಣೆ, ಮಾದಗೊಂಡನಹಳ್ಳಿ, ಕೋಳೂರು, ಹಸನ್‌ಘಟ್ಟ, ಇನ್ಫೋಸಿಟಿ-1 ಮತ್ತು 2, ರಾಶಿ ಲೇಟೌಟ್ ಸುತ್ತ ವಿದ್ಯುತ್ ಅಡಚಣೆ ಉಂಟಾಗಲಿದೆ.

    ಮೇ.13ರಂದು ಬಾಶೆಟ್ಟಿಹಳ್ಳಿ ಪಟ್ಟಣ ಪ್ರದೇಶದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಮೇ.15ರಂದು ಬೆಳಗ್ಗೆ 9ರಿಂದ 2ರ ವರೆಗೆ ತಾಲ್ಲೂಕಿನ ಏಕಾಶಿಪುರ, ಅರಳುಮಲ್ಲಿಗೆ ಜಕ್ಕಸಂದ್ರ, ಪ್ರಕಾಶ್ ಲೇಔಟ್, ಹೊಸಹುಡ್ಯ, ಚಿಕ್ಕತುಮಕೂರು, ದೊಡ್ಡತುಮಕೂರು, ಜಿಂಕೆಬಚ್ಚಹಳ್ಳಿ ಸುತ್ತ ವಿದ್ಯುತ್ ಅಡಚಣೆ ಉಂಟಾಗಲಿದೆ.

  • ದೊಡ್ಡಬಳ್ಳಾಪುರ:  ಲಕ್ಷಾಂತರ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ..!

    ದೊಡ್ಡಬಳ್ಳಾಪುರ:  ಲಕ್ಷಾಂತರ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ..!

    ದೊಡ್ಡಬಳ್ಳಾಪುರ: ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾ ಚರಣೆ,  ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಿಯದರ್ಶಿನಿ ಬಡಾವಣೆಯ ತೂಬಗೆರೆ ಹರೀಶ್ ಎಂಬುವವರಿಗೆ ಸೇರಿದ ಗೋಡೌನ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಬರೋಬ್ಬರಿ 21.5 ಟನ್ ಅಕ್ರಮ ಪಡಿತರ ಅಕ್ಕಿ ವಶಪಡೆಸಿ ಕೊಂಡು, ಆರೋಪಿ ಹರೀಶ್ ಎಂಬುವವರನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

    ಇತ್ತೀಚೆಗೆ ರಾಜ್ಯಾದ್ಯಂತ ಪಡಿತರ ಅಕ್ಕಿ ಸಾಗಟ,ಮತ್ತು ದಾಸ್ತಾನು ಮಾಡಿ ರಾಜ್ಯ ಸರ್ಕಾರದ ಅನ್ನ ಭಾಗ್ಯ ಅಕ್ಕಿ ಕನ್ನಹಾಕುತಿದ್ದ ಅನೇಕಪ್ರಕರಣಗಳು ದಿನ ನಿತ್ಯ ಸುದ್ದಿ ಯಾಗುತ್ತಿರುವ ಹಿನ್ನಲೆ ಜನಸಾಮಾನ್ಯರು ಜಾಗೃತರಾಗಿ  ಅಕ್ರಮ ಅಕ್ಕಿದಂದೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ಅವರಿಗೆ ಹತ್ತಿರ ಮತ್ತು ನಂಬಿಕೆಯಿರುವ ಅಧಿಕಾರಿ ಅಥವಾ ಸುದ್ದಿ ಮಾದ್ಯಮ ಸ್ನೇಹಿತರ ಗಮನೆತರುವಂತಹ ಕಾರ್ಯಕ್ಕೆ ಕೈಹಾಕುತ್ತಿರುವುದು ಶ್ಲಾಗನೀಯ.

    ಅದರಂತೆ ನೆನ್ನೆ ನಗರ ಹೊರವಲಯದ ಪ್ರಿಯದರ್ಶಿನಿ ಬಡಾವಣೆಯಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುವ ಮಾಹಿತಿ ಪಡೆದ ತಹಶಿಲ್ದಾರ್ ಮಲ್ಲಪ್ಪ ನವರು ಮತ್ತು ಪೊಲೀಸ್ ಇನ್ಸಪೆಕ್ಟರ್ ಸಾದಿಕ್ ಪಾಷರವರು  ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ  ಆದೇಶ ಪಡೆದ ತಂಡ ಕಾರ್ಯಾಚರಣೆಗೆ ಮುಂದಾದಾಗ  ನಿರೀಕ್ಷೆಗೂ ಮೀರಿ ಮೂರು ಕಡೆ ದಸ್ತಾನುಮಾಡಲಾಗಿದ್ದ ಬರೋಬ್ಬರಿ 21.5. ಟನ್ ಅಕ್ಕಿ ಮತ್ತು ಸ್ವಲ್ಪ ಪ್ರಮಾಣದ ರಾಗಿಯನ್ನು ವಶಕ್ಕೆ ಪಡೆಯುದರಲ್ಲಿ ಅಧಿಕಾರಿಗಳು  ಯಶಸ್ವಿಯಾಗಿದ್ದಾರೆ.

    ಈ ಪ್ರಕರಣ ಬೆಳಕಿಗೆ ಬಂದಹಿನ್ನಲೆಯಲ್ಲಿ ಆಹಾರ ಸಚಿವರ ಉಸ್ತುವಾರಿ ಕ್ಷೇತ್ರದಲ್ಲೇ ಈರೀತಿ  ಪಡಿತರ ಅಕ್ರಮವಾಗಿ ಅಡ್ಡದಾರಿ ಹಿಡಿದರೇ ರಾಜ್ಯಾದ್ಯಂತ ನಡೆಯುತ್ತಿರುವ ಅಕ್ರಮಗಳ ಬಗ್ಗೆ ದೇವರೇ ಬಲ್ಲ ಎಂದು ತಮ್ಮ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಕಾರ್ಯಾಚರಣೆಯ ತಂಡದಲ್ಲಿ ತಾಲ್ಲೂಕು ಆಹಾರ ನಿರೀಕ್ಷಕ ಅನಂತ ಕುಮಾರ್,ಸಹಾಯಕ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಚಂದ್ರಕಲಾ, ಎಎಸ್ಸೈ ರಂಗಸ್ವಾಮಿ ಸಿಬ್ಬಂದಿ ಶ್ರೀನಿವಾಸ ಹಾಜರಿದ್ದರು.