Category: ಅಪರಾಧ ಸುದ್ದಿ

  • ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು:  ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟ ದುರುಳ.!

    ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು: ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟ ದುರುಳ.!

    ಕೋಲಾರ: :- ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಮಲಗಿದ್ದವನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ನಡೆದಿದೆ.

    ವೆಂಕಟೇಶ್ (50) ಕೊಲೆಯಾದ ವ್ಯಕ್ತಿ. ರಘು ಕೊಲೆಗೈದ ಆರೋಪಿ. ಕುಡಿಯಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ವೆಂಕಟೇಶ್‌ನನ್ನು ಆರೋಪಿ ರಘು ಕೊಲೆಗೈದಿದ್ದಾನೆ.

    ಸಂಜೆಯಾದ್ರೆ ಕುಡಿದು ಕೈಯಲ್ಲಿ ದೊಣ್ಣೆ ಹಿಡಿದು ಆರೋಪಿ ರಘು ಓಡಾಡ್ತಿದ್ದ. ಆರೋಪಿಯ ವರ್ತನೆಯಿಂದ ದೇವರಾಯಸಮುದ್ರ ಗ್ರಾಮಸ್ಥರು ಬೇಸತ್ತಿದ್ದರು ಎಂದು ಹೇಳಲಾಗಿದೆ.

    ವೆಂಕಟೇಶ್ ಕೊಲೆಗೈದ ನಂತರ ದೊಣ್ಣೆಕೋಲು ಬಿಸಾಡಿ ಆರೋಪಿ ರಘು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

  • ಸಿಗರೇಟ್‌ ವಿಚಾರಕ್ಕೆ ಗ್ಯಾಂಗ್‌ವಾರ್‌, ಮದ್ದೂರಿನಲ್ಲಿ ರೌಡಿಶೀಟರ್‌ ಬರ್ಬರ ಹ*ತ್ಯೆ

    ಸಿಗರೇಟ್‌ ವಿಚಾರಕ್ಕೆ ಗ್ಯಾಂಗ್‌ವಾರ್‌, ಮದ್ದೂರಿನಲ್ಲಿ ರೌಡಿಶೀಟರ್‌ ಬರ್ಬರ ಹ*ತ್ಯೆ

    ಮಂಡ್ಯ:-ಕ್ಷುಲ್ಲಕ ವಿಚಾರಕ್ಕೆ ಎರಡು ಯುವಕರ ಗುಂಪುಗಳ ನಡುವೆ ನಡೆದ ಗಲಾಟೆ ಓರ್ವನ ಕೊ*ಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಆಂಜನೇಯ ರಸ್ತೆಯ ಪಟೇಲ್ ಸಾಮಿಲ್ ಬಳಿ ನಡೆದಿದೆ.

    ಕ್ಷುಲ್ಲಕ ಕಾರಣಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸಿಗರೇಟ್‌ ವಿಚಾರವಾಗಿ ಎದ್ದ ತಗಾದೆ ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ ತಿರುಗಿದ್ದು, ಇದರಲ್ಲಿ ರೌಡಿ ಶೀಟರ್, ಮರಳಿಗ ಗ್ರಾಮದ ಯಶ್ವಂತ್ @ಕಜ್ಜಿ ಅಭಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಗೊರವನಹಳ್ಳಿ ಗ್ರಾಮದ ದರ್ಶನ್, ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
    ಇಬ್ಬರಿಗೂ ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ಬಳಿಕ ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ, ಪರಿಶೀಲನೆ ನಡೆದಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • RCB vs CSK ಟಿಕೆಟ್ ಆಮಿಷ: ಇನ್ಸ್ಟಾ ಪೋಸ್ಟ್ ನಂಬಿ 1.46 ಲಕ್ಷ ಕಳೆದುಕೊಂಡ ಟೆಕ್ಕಿ

    RCB vs CSK ಟಿಕೆಟ್ ಆಮಿಷ: ಇನ್ಸ್ಟಾ ಪೋಸ್ಟ್ ನಂಬಿ 1.46 ಲಕ್ಷ ಕಳೆದುಕೊಂಡ ಟೆಕ್ಕಿ

    ಬೆಂಗಳೂರು: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೊನ ಪಂದ್ಯದ ಟಿಕೆಟ್‌ ಅನ್ನು ಪಡೆಯಲು ಹೋದ ಟೆಕ್ಕಿಯೊಬ್ಬರಿಗೆ ಪಂಗನಾಮ ಹಾಕಲಾಗಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB vs CSK ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಬಿ.ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ ಒಬ್ಬರು ಆನ್‌ಲೈನ್ ಮೋಸಕ್ಕೆ ಒಳಗಾಗಿ 1.46 ಲಕ್ಷ ರೂ. ಕಳೆದುಕೊಂಡಿದ್ದರ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿ ಟಿಕೆಟ್ ಮಾರಾಟಗಾರನಂತೆ ನಟಿಸಿ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.

    ತನ್ನನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡ ಆರೋಪಿಯು, ಐಪಿಎಲ್ ಪಂದ್ಯಕ್ಕೆ ಟಿಕೆಟ್‌ಗಳ ಜೊತೆಗೆ ಊಟದ ಕೂಪನ್‌ಗಳು ಮತ್ತು ವಿಶೇಷ ಸೌಲಭ್ಯಗಳನ್ನು ಒದಗಿಸುವುದಾಗಿ ನಂಬಿಕೆ ಮೂಡಿಸಿದ್ದ. ಆರಂಭದಲ್ಲಿ ಎರಡು ಟಿಕೆಟ್‌ಗಳಿಗೆ 3,700 ರೂ. ದರ ನಿಗದಿ ಮಾಡಿದ್ದರೂ, ನಂತರ ಭದ್ರತಾ ಠೇವಣಿ, ಹೆಚ್ಚುವರಿ ಐಡಿ ಕಾರ್ಡ್ ಹಾಗೂ ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಕೇಳಿದ್ದ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ, ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದ ಎಂದು ನೊಂದ ವ್ಯಕ್ತಿ ಹೇಳಿದ್ದಾರೆ.

    ಹಣ ಪಾವತಿಯ ನಂತರ, ವಂಚಕನು ಟೆಕ್ಕಿಗೆ ಸ್ಟೇಡಿಯಂನ ಗೇಟ್ ಸಂಖ್ಯೆ 10ರ ಬಳಿ ಬರಲು ಸೂಚಿಸಿದ್ದಾನೆ. ಅಲ್ಲಿಗೆ ತಲುಪಿದಾಗ, ಟೆಕ್ಕಿ ಕನಿಷ್ಠ ದರದ ಟಿಕೆಟ್‌ಗಳನ್ನು ಕೇಳಿದ್ದಾರೆ. ಆದರೆ, ವಂಚಕನು ಕೂಪನ್‌ಗಳು ಮತ್ತು ಭದ್ರತಾ ಠೇವಣಿ ಹೆಸರಿನಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾನೆ. ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹ 1.46 ಲಕ್ಷ ರೂ. ಹಣವನ್ನು ಟೆಕ್ಕಿಯಿಂದ ವರ್ಗಾಯಿಸಿಕೊಂಡಿದ್ದಾನೆ.

    ವಂಚನೆ ಬಳಿಕ ಟೆಕ್ಕಿ, ತಕ್ಷಣವೇ ಸೈಬರ್ ಕಂಟ್ರೋಲ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

  • ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆಗೈದ ಆಸಾಮಿಗಳು

    ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆಗೈದ ಆಸಾಮಿಗಳು

    ವರ್ತೂರು: ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಕ್ರೂರವಾಗಿ ಕೊಲೆಗೈದ ಘಟನೆ ಬಳಗೆರೆ ಮುಖ್ಯರಸ್ತೆಯ ಸ್ಕಂದ ಎಲಿನಾ ಅಪಾರ್ಟ್ಮೆಂಟ್ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ನಡೆದಿದೆ.

    ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.

    ದಲಾ ರಾಮ್ ಎಂಬಾತ ಈ ದುರಂತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ಅಪರಿಚಿತ ವ್ಯಕ್ತಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

    ದಲಾರಾಮ್‌ ತಪ್ಪಿಸಿಕೊಳ್ಳಲು ಸ್ವಲ್ಪ ದೂರ ಓಡಿದ್ದು ಸಾಧ್ಯವಾಗದೇ ಫುಟ್‌ಪಾತ್‌ನಲ್ಲಿ ಕುಸಿದು ಬಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಯುವಕನನ್ನು ಯಾರು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆಂಬುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ದೊಡ್ಡಬಳ್ಳಾಪುರ: ಬೈಕ್ ಅಪಘಾತ, ಮಹಿಳೆಯ ಕಾಲು ಮುರಿತ, ಆಸ್ಪತ್ರೆಗೆ ದಾಖಲು

    ದೊಡ್ಡಬಳ್ಳಾಪುರ: ಬೈಕ್ ಅಪಘಾತ, ಮಹಿಳೆಯ ಕಾಲು ಮುರಿತ, ಆಸ್ಪತ್ರೆಗೆ ದಾಖಲು

    ದೊಡ್ಡಬಳ್ಳಾಪುರ:ವೇಗವಾಗಿ ಬಂದ ಬೈಕ್ ಮಹಿಳೆಗೆ ಗುದ್ದಿದ ಪರಿಣಾಮ ಮಹಿಳೆಯ ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಾಲನಜೋಗಿಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಡೆದಿದೆ.

    ಮಜಾನ್ ಬಿ (55) ಗಾಯಗೊಂಡ ಮಹಿಳೆ ಎನ್ನಲಾಗಿದೆ. ಪಾಲನಜೋಗಿಹಳ್ಳಿ ಬಳಿ ಆಟೋಗಾಗಿ ಕಾಯುತ್ತಿದ್ದ ಮಜಾನ್ ಬಿ (55) ರವರಿಗೆ ವೇಗವಾಗಿ ಬಂದ ಬೈಕ್ ರಸ್ತೆ ಬದಿ ನಿಂತಿದ್ದ ಆಟೋ ಮತ್ತು ಮಹಿಳೆಗೆ ಡಿಕ್ಕಿ ಹೊಡೆದಿದೆ ಇದರ ಪರಿಣಾಮ ಮಹಿಳೆಯ ಕಾಲು ಮುರಿದಿದೆ.

    ಎರಡು ದಿನಗಳ ಹೊಂದೆಯಷ್ಟೆ ಇದೇ ರಸ್ತೆಯಲ್ಲಿ KSRTC ಬಸ್ ಮತ್ತು ಬೈಕ್ ಸವಾರನ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿದ್ದ, ಇಂದು ಕೂಡ ಅಪಘಾತ ಸಂಭವಿಸಿದ್ದು ಮಹಿಳೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ.

  • ಅನೈತಿಕ ಸಂಬಂಧ ಆರೋಪ : ಅಪಮಾನ ತಾಳಲಾರದೆ ಡೆತ್ ನೋಟ್ ಬರೆದಿಟ್ಡು ನೇ*ಣಿಗೆ ಶರಣಾದ ವಿದ್ಯಾರ್ಥಿನಿ

    ಅನೈತಿಕ ಸಂಬಂಧ ಆರೋಪ : ಅಪಮಾನ ತಾಳಲಾರದೆ ಡೆತ್ ನೋಟ್ ಬರೆದಿಟ್ಡು ನೇ*ಣಿಗೆ ಶರಣಾದ ವಿದ್ಯಾರ್ಥಿನಿ

    ಚಿತ್ರದುರ್ಗ: ಅನೈತಿಕ ಸಂಬಂಧ ಆರೋಪ ಕಟ್ಟಿ ಸಹಪಾಟಿಗಳಿಂದ ಅವಮಾನ ಮಾಡಿದ ಹಿನ್ನಲೆ ಬಿಎಎಂಎಸ್ ಮುಗಿಸಿ ಇಂಟರ್ನ್ ಶಿಫ್ ಮಾಡುತ್ತಿದ್ದ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ನೇ*ಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದ ಬಸವ ಲೇಔಟ್‌ನಲ್ಲಿ ವಾಸವಿದ್ದ 23 ವರ್ಷದ ನಿಖಿತಾ ಆತ್ಮ*ತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಬಿಎಎಂಎಸ್ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿ.

    ನಿಖಿತಾ ಸಾವಿಗೂ ಮುನ್ನ ಬರೆದಿದ್ದ ಎಂಟು ಪುಟಗಳ ಡೆತ್‌ನೋಟ್ ಪತ್ತೆಯಾಗಿದ್ದು, ಕಾಲೇಜಿನ ಅಧ್ಯಾಪಕ ಡಾ.ರಾಜು ಎಂಬುವವರ ಜೊತೆ ತನಗೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಈ ಅಪಪ್ರಚಾರದಿಂದ ತನ್ನ ಘನತೆಗೆ ಧಕ್ಕೆ ಬಂದಿದೆ ಮತ್ತು ಮಾನಸಿಕವಾಗಿ ಜರ್ಜರಿತಗೊಂಡಿದ್ದೇನೆ ಎಂದು ಅವಳು ಬರೆದುಕೊಂಡಿದ್ದಾರೆ. ಅದರಿಂದ ಡಾ.ರಾಜು ಪತ್ನಿ ನಿಶಾ ನಿಖಿತಾ ಜೊತೆ ಜಗಳ ಮಾಡಿದ್ದರಂತೆ. ಡೆತ್‌ನೋಟ್‌ನಲ್ಲಿ ಪ್ರಮುಖವಾಗಿ ಅಧ್ಯಾಪಕ ಡಾ.ರಾಜು, ಅವರ ಪತ್ನಿ ನಿಶಾ ಹಾಗೂ ಕಾಲೇಜಿನ ಕೆಲವು ಸಹಪಾಠಿ ವಿದ್ಯಾರ್ಥಿನಿಯರ ಹೆಸರುಗಳನ್ನು ಬರೆಯಲಾಗಿದೆ. ಇವರೆಲ್ಲರೂ ಸೇರಿ ತನ್ನ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ ಎಂದು ನಿಖಿತಾ ಆರೋಪಿಸಿದ್ದಾಳೆ.

    ಈ ಸಂಬಂಧ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಸ್ನೇಹಿತರ ಜೊತೆ ನದಿಗೆ ಈಜಲು ಹೋದ ಯುವಕ ನೀರುಪಾಲು…!!!

    ಸ್ನೇಹಿತರ ಜೊತೆ ನದಿಗೆ ಈಜಲು ಹೋದ ಯುವಕ ನೀರುಪಾಲು…!!!

    ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿತಾಣ ಎಡಮುರಿ ಕಾವೇರಿ ನದಿಯಲ್ಲಿ ಈಜಲು ಹೋಗಿ‌ದ್ದ ವೇಳೆ ನೀರಿನಲ್ಲಿ ಮಳುಗಿ‌ ಯುವಕ ಸಾ*ವನ್ನಪ್ಪಿದ್ದಾನೆ.

    ಬೆಂಗಳೂರಿನ ರಾಮಮೂರ್ತಿ ನಗರದ ಪಾಂಡೆಯನ್‌ ಅವರ ಮಗ, ಇನ್ಫೋಸಿಸ್ ಕಂಪೆನಿಯ ಉದ್ಯೋಗಿ ವಿಘ್ನೇಶ್.ಪಿ (27) ಎಂಬವರು ಮೃತಟ್ಟಿದ್ದಾರೆ

    ವಿಘ್ನೇಶ್ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಲಮುರಿಗೆ ಆಗಮಿಸಿದ್ದ, ಈ ವೇಳೆ ನದಿ ನೀರಲ್ಲಿ ಈಜಲು ಹೋದಾನ ಮುಳುಗಿ ಮೃ*ತಪಟ್ಟಿದ್ದಾನೆ. ಮೃತದೇಹವನ್ನ ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ. (more…)

  • ದೊಡ್ಡಬಳ್ಳಾಪುರ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಅಪಘಾತ, ವ್ಯಕ್ತಿ ಸ್ಥಳದಲ್ಲೆ ಸಾವು

    ದೊಡ್ಡಬಳ್ಳಾಪುರ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಅಪಘಾತ, ವ್ಯಕ್ತಿ ಸ್ಥಳದಲ್ಲೆ ಸಾವು

    ದೊಡ್ಡಬಳ್ಳಾಪುರ: ತಾಲ್ಲೂಕಿನ ಪಾಲನಜೋಗಿಹಳ್ಳಿ ಬಳಿ ಕೆಎಸ್ಆರ್ ಟಿಸಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

    ಮೃತನು ಪಾಲನಜೋಗಿಹಳ್ಳಿ ನಿವಾಸಿ 29 ವರ್ಷದ  ಪುರುಷೋತ್ತಮ ಎಂದು ತಿಳಿದುಬಂದಿದೆ. ಅಪಘಾತದಿಂದ ತೀವ್ರ ರಕ್ತಸ್ರಾವಗೊಂಡ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿದೆ.

    ಹಿಂದೂಪುರದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ KA-40, F-1407 ನಂಬರ್ ಪ್ಲೇಟುಳ್ಳ ಬಸನ್ನು ಓವರ್ ಟೇಕ್ ಮಾಡಲು ಮುಂದಾದ ಬೈಕ್ ಸವಾರ ಬಸ್ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕೆ ಅಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ಪ್ರಯಾಣಿಕರ ಮೇಲೆ ನುಗ್ಗಿ ಬಂದ ಬಸ್​, ಮಗು ಸ್ಥಳದಲ್ಲೇ ಸಾವು

    ಪ್ರಯಾಣಿಕರ ಮೇಲೆ ನುಗ್ಗಿ ಬಂದ ಬಸ್​, ಮಗು ಸ್ಥಳದಲ್ಲೇ ಸಾವು

    ಹಾವೇರಿ: ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬಸ್ ಗಾಗಿ ಕಾದಿದ್ದವರ ಮೇಲೆಯೇ ಸರ್ಕಾರಿ ಬಸ್ ಹರಿದಿದೆ.

    ಇಂದು (ಏಪ್ರಿಲ್ 1) ಮುಂಜಾನೆ ಈ ಭೀಕರ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ನುಗ್ಗಿದೆ.

    ಪರಿಣಾಮ ಈ ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಂತೆಯೇ 2 ವರ್ಷದ ಪುಟ್ಟ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

    ಮೂಲಗಳ ಪ್ರಕಾರ ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಬಸ್ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ.

    ಪ್ಲಾಟ್ ಫಾರ್ಮ್ ನಲ್ಲಿ ನಿಲ್ಲಬೇಕಿದ್ದ ಬಸ್ ಏಕಾಏಕಿ ಪ್ಲಾಟ್ ಫಾರ್ಮ್ ದಾಟಿ ಅಲ್ಲಿ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ.

    ಈ ಅಪಘಾತದಲ್ಲಿ ಕೇವಲ ಮಗು ಮಾತ್ರವಲ್ಲದೆ, ಬಂಕಾಪುರ ಪಟ್ಟಣದ ನಿವಾಸಿಗಳಾದ ವಾಸುದೇವ (44), ಹರ್ಷಾ (6) ಹಾಗೂ ಕಾವ್ಯಾಂಜಲಿ (39) ಎಂಬುವವರಿಗೂ ಗಂಭೀರ ಗಾಯಗಳಾಗಿವೆ.

    ಇವರೆಲ್ಲರೂ ಸದ್ಯ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿದ್ದ 2 ವರ್ಷದ ಪುಟ್ಟ ಮಗು ಹಜರತ್ ಅಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

    ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತಿವೆ. ಸಾರ್ವಜನಿಕರು ಚಾಲಕನ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • RCB ಪಂದ್ಯದ ವೇಳೆ ಪೋನ್‌ ಕದ್ದಿದ್ದ ಆರೋಪಿಗಳ ಬಂಧನ : 18 ಲಕ್ಷ ಮೌಲ್ಯದ 28 ಮೊಬೈಲ್ ವಶ.!

    RCB ಪಂದ್ಯದ ವೇಳೆ ಪೋನ್‌ ಕದ್ದಿದ್ದ ಆರೋಪಿಗಳ ಬಂಧನ : 18 ಲಕ್ಷ ಮೌಲ್ಯದ 28 ಮೊಬೈಲ್ ವಶ.!

    ಬೆಂಗಳೂರು: ಸಿಲಿಕಾನ್ ಸಿಟಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಬ್ಬರ ಜೋರಾಗಿದ್ದರೆ, ಮತ್ತೊಂದೆಡೆ ಕಳ್ಳರ ಕೈಚಳಕವೂ ಜೋರಾಗಿದೆ. ಇತ್ತೀಚೆಗೆ ನಡೆದ ಆರ್‌ಸಿಬಿ (RCB) ಮತ್ತು ಎಸ್‌ಆರ್‌ಹೆಚ್ (SRH) ನಡುವಿನ ಹೈವೋಲ್ಟೇಜ್ ಪಂದ್ಯದ ವೇಳೆ ಅಭಿಮಾನಿಗಳ ಮೊಬೈಲ್ ಕದ್ದಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಭೇದಿಸಿದ್ದಾರೆ.

    ಕೇವಲ ಎರಡೇ ದಿನದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಸುಮಾರು 18 ಲಕ್ಷ ರೂಪಾಯಿ ಮೌಲ್ಯದ 28 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ಕಳೆದ ಶನಿವಾರ (ಮಾರ್ಚ್ 28) ನಡೆದ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ಹರಿದುಬಂದಿದ್ದರು. ಈ ಜನ ಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಅಭಿಮಾನಿಗಳು ಪಂದ್ಯದ ಗುಂಗಿನಲ್ಲಿದ್ದಾಗ ಬೆಲೆಬಾಳುವ ಮೊಬೈಲ್‌ಗಳನ್ನು ಎಗರಿಸಿದ್ದರು.

    ಪಂದ್ಯ ಮುಗಿದು ಹೊರಬರುವಾಗ ಫೋನ್ ಇಲ್ಲದಿರುವುದನ್ನು ಗಮನಿಸಿದ ಹಲವು ಅಭಿಮಾನಿಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಕಲಿಸಿದ್ದರು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 12 ಎಫ್‌ಐಆರ್ (FIR) ದಾಖಲಾಗಿದ್ದವು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ, ಓರ್ವ ಪ್ರಮುಖ ಆರೋಪಿ ಹಾಗೂ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ತನಿಖೆಯ ವೇಳೆ , ಈ ಗ್ಯಾಂಗ್ ಉದ್ದೇಶಪೂರ್ವಕವಾಗಿಯೇ ಜನಜಂಗುಳಿ ಸೇರುವ ಜಾಗಗಳನ್ನು ಟಾರ್ಗೆಟ್ ಮಾಡುತ್ತದೆ. ಪೊಲೀಸರ ಕಣ್ಣಿಗೆ ಮಣ್ಣೆರಚಲು ಮತ್ತು ಅನುಮಾನ ಬರದಂತೆ ತಡೆಯಲು ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಕಳ್ಳತನ ಮಾಡಿಸುತ್ತಿರುವುದು ಬೆಳಕಿಗೆ ಬಂದಿದೆ.

    ಎಫ್‌ಐಆರ್ ದಾಖಲಾದ ಕೇವಲ 48 ಗಂಟೆಗಳ ಒಳಗಾಗಿ ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ವಶಪಡಿಸಿಕೊಂಡ 28 ಮೊಬೈಲ್‌ಗಳಲ್ಲಿ ಐಫೋನ್ ಸೇರಿದಂತೆ ಹಲವು ದುಬಾರಿ ಕಂಪನಿಗಳ ಫೋನ್‌ಗಳಿವೆ. ಇವುಗಳ ಒಟ್ಟು ಮೌಲ್ಯ 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

    ಸದ್ಯ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
    ಒಟ್ಟಾರೆಯಾಗಿ #RCB ಗೆಲ್ಲಬೇಕು ಎಂದು Rcb ಫ್ಯಾನ್ಸ್ ಖುಷಿಯಲ್ಲಿದ್ದರೆ ಕೆಲವರಿಗೆ ಅದು ಒಂದು ಕಳ್ಳತನ ಮಾಡಲು ಅವಕಾಶವಾಗಿದೆ.